Advertisement

ಆಯುರ್ವೇದವನ್ನು ಹತ್ತಿಕ್ಕುವ ಪ್ರಯತ್ನಗಳು ನಡೆದಿವೆ: Union Minister ಶ್ರೀಪಾದ್ ನಾಯ್ಕ್

01:30 PM Apr 05, 2023 | Team Udayavani |

ಪಣಜಿ: ಆಯುರ್ವೇದಕ್ಕೆ ಕ್ಯಾನ್ಸರ್‍ನಂತಹ ಕಾಯಿಲೆಗಳನ್ನು ಗುಣಪಡಿಸುವ ಸಾಮಥ್ರ್ಯವಿದೆ. ಆದರೆ ಈ ಪದ್ಧತಿಯನ್ನು ಹತ್ತಿಕ್ಕುವ ಪ್ರಯತ್ನಗಳು ನಡೆದಿವೆ ಮತ್ತು ನಡೆಯುತ್ತಲೇ ಇವೆ. ಐದು ಸಾವಿರ ವರ್ಷಗಳ ಸಂಪ್ರದಾಯ ಹೊಂದಿರುವ ಈ ಔಷಧ ಪದ್ಧತಿಯನ್ನು ಉಳಿಸಿಕೊಳ್ಳಲು ನಮ್ಮ ಸರ್ಕಾರ ಪ್ರಯತ್ನ ನಡೆಸುತ್ತಿದೆ ಎಂದು ಕೇಂದ್ರ ಸಚಿವ ಶ್ರೀಪಾದ್ ನಾಯ್ಕ್ ಹೇಳಿದರು.

Advertisement

ಸಚಿವ ಶ್ರೀಪಾದ ನಾಯಕ್ ಅವರು ಪರ್ವರಿಯಲ್ಲಿ ಖ್ಯಾತ ಆಯುರ್ವೇದ ವೈದ್ಯ ಸುಕುಮಾರ್ ಸದಾನಂದ್ ಸರ್ದೇಶಮುಖ್ ಅವರ ಮಾರ್ಗದರ್ಶನದಲ್ಲಿ ಆಯೋಜಿಸಿದ್ದ ಆಯುರ್ವೇದ ವೈದ್ಯಕೀಯ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ ಶೇಟ್ ತನವಡೆ ಮಾತನಾಡಿ”ಕೇಂದ್ರದಲ್ಲಿ ಶ್ರೀಪಾದ ನಾಯಕ ಆಯುಷ್ ಸಚಿವರಾಗಿದ್ದಾಗ ಆಯುರ್ವೇದಕ್ಕೆ ವಿಶ್ವಮಟ್ಟದಲ್ಲಿ ಮನ್ನಣೆ ಸಿಕ್ಕಿತ್ತು.ಆಯುಷ್ ಸಚಿವರಾಗಿದ್ದಾಗ ಆಯುರ್ವೇದಕ್ಕೆ ನ್ಯಾಯ ದೊರಕಿಸಿಕೊಡಲು ಶ್ರಮಿಸಿದ ಅವರು ಗೋವಾದ ಧಾರಗಳ ನಲ್ಲಿ  ಆಯುರ್ವೇದ ಆಸ್ಪತ್ರೆಗೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಶಿಬರದ ಸರ್ಂಘಟಕ ಡಾ.ಸುಕುಮಾರ ಸರದೇಶಮುಖ ಮಾತನಾಡಿ”ಗೋಮಾಂತಕ ಮತ್ತು ಪ್ರಾಚೀನ ಭಾರತೀಯ ವಿಜ್ಞಾನಗಳಲ್ಲಿ ನಾನು ಗಳಿಸಿದ ಜ್ಞಾನವನ್ನು ಸಾರ್ವಜನಿಕ ಸೇವೆಗೆ ಬಳಸಲು ನನಗೆ ಸಂತೋಷವಾಗಿದೆ. ‘ನಮ್ಮ ಸಂಸ್ಥೆಯು ಆರ್ಥಿಕವಾಗಿ ದುರ್ಬಲವಾಗಿರುವ ಕ್ಯಾನ್ಸರ್ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುತ್ತದೆ. ಇದಕ್ಕೆ ವಿವಿಧ ಸಂಸ್ಥೆಗಳಿಂದ ಹಣಕಾಸಿನ ನೆರವು ಸಿಗುತ್ತದೆ, ಸರ್ಕಾರದ ಬೆಂಬಲವೂ ಲಭಿಸಲಿದೆ. ಶ್ರೀಪಾದ ನಾಯಕ್ ರವರು ಕೇಂದ್ರ ಆಯುಷ್ ಸಚಿವರಾಗಿದ್ದಾಗ ನಮ್ಮ ಸಂಸ್ಥೆಗೆ “ಸೆಂಟರ್ ಆಫ್ ಎಕ್ಸಲೆನ್ಸ” ಪ್ರಶಸ್ತಿ ಲಭಿಸಿತ್ತು ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ ಶೇಟ್ ತಾನವಡೆ, ಸಾಲಿಗಾಂವ್ ಶಾಸಕ ಕೇದಾರ ನಾಯ್ಕ್, ಬಿಜೆಪಿ ಉತ್ತರ ಗೋವಾ ಜಿಲ್ಲಾಧ್ಯಕ್ಷ ಮಹಾನಂದ ಅಸ್ನೋಡ್ಕರ್, ರೇಯಿಶಾಮಾಗುಷ್ ಪಂಚಾಯತ ಅಧ್ಯಕ್ಷೆ  ಸುಶ್ಮಿತಾ ಸುಭಾಷ್ ಪೆಡ್ನೇಕರ್, ಡಾ.ಗೋವಿಂದ ಕಾಳೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next