Advertisement

ಯಡಹಳ್ಳಿ ಗ್ರಾಪಂ : 27 ವರ್ಷದಿಂದ ಚುನಾವಣೆಯೇ ನಡೆದಿಲ್ಲ

02:39 PM Dec 16, 2020 | Suhan S |

ಬಾಗಲಕೋಟೆ: ರಾಜ್ಯದಲ್ಲಿ ಗ್ರಾಪಂ ವ್ಯವಸ್ಥೆ ಜಾರಿಗೆ ಬಂದಾಗಿನಿಂದ ಈ ಪಂಚಾಯಿತಿಗೆ ಚುನಾವಣೆಯೇ ನಡೆದಿಲ್ಲ. ಪ್ರತಿ ಬಾರಿಯೂ ಎಲ್ಲ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡುತ್ತ ಬರಲಾಗಿದ್ದು, ಈ ಪಂಚಾಯಿತಿ ರಾಜ್ಯಕ್ಕೆ ಮಾದರಿಯಾಗಿದೆ.

Advertisement

ಹೌದು. ಇದು ಬೀಳಗಿ ತಾಲೂಕಿನ ಯಡಹಳ್ಳಿ ಗ್ರಾಪಂ. ರಾಜ್ಯದಲ್ಲಿ 1993ರಿಂದ ಗ್ರಾಪಂ ವ್ಯವಸ್ಥೆ ಜಾರಿಗೆ ಬಂದಿದ್ದು, ಅಂದಿನಿಂದ ಚುನಾವಣೆ ನಡೆಸದೇಗ್ರಾಮದ ಹಿರಿಯರು ಸೇರಿ ಎಲ್ಲ ಸ್ಥಾನಗಳಿಗೂಅವಿರೋಧ ಆಯ್ಕೆ ಮಾಡುತ್ತ ಬಂದಿದ್ದಾರೆ. ಹಾಗಂತಈ ಗ್ರಾಮದಲ್ಲಿಚುನಾವಣೆ ನಡೆಯುವುದಿಲ್ಲಅಂತಲ್ಲ.ತಾಪಂ, ಜಿಪಂ, ವಿಧಾನಸಭೆ ಹಾಗೂ ಲೋಕಸಭೆಚುನಾವಣೆಗಳು ಪ್ರತಿಷ್ಠೆಯಿಂದ ನಡೆಯುತ್ತವೆ. ಆದರೆ ಗ್ರಾಮದ ವಿಷಯಕ್ಕೆಬಂದಾಗ ಮಾತ್ರ ಇಡೀ ಗ್ರಾಮಸ್ಥರುಒಗ್ಗಟ್ಟಿನಿಂದ ಚುನಾವಣೆ ಎದುರಿಸುವುದು ಯಡಹಳ್ಳಿಯ ವಿಶೇಷ.

18 ಸ್ಥಾನಗಳೂ ಅವಿರೋಧ: ಯಡಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಯಡಹಳ್ಳಿ ಮತ್ತು ಅಮಲ ಝರಿ ಗ್ರಾಮಗಳಿವೆ. ಯಡಹಳ್ಳಿಯಲ್ಲಿ 3,650 ಜನಸಂಖ್ಯೆ ಇದ್ದರೆ, ಅಮಲಝರಿಯಲ್ಲಿಸುಮಾರು 3 ಸಾವಿರ ಜನಸಂಖ್ಯೆಯಿದೆ. ಮನೆ ಮನೆಗೂ ಶೌಚಾಲಯ, ಸ್ವಚ್ಛ ಗ್ರಾಮದ ಮೂಲಕ ಹೆಸರಾದ ಯಡಹಳ್ಳಿ ಹಲವು ಬಾರಿ ಗಾಂಧಿ ಗ್ರಾಮ ಪುರಸ್ಕಾರ ಕೂಡ ಪಡೆದಿದೆ. ಮಂಡಲ ಪಂಚಾಯಿತಿವ್ಯವಸ್ಥೆ ಇದ್ದಾಗ, ಯಡಹಳ್ಳಿ, ತೆಗ್ಗಿ ಮಂಡಲಪಂಚಾಯಿತಿ ವ್ಯಾಪ್ತಿಯಲ್ಲಿತ್ತು. ಆಗ ಒಂದು ಬಾರಿ ಮಾತ್ರ ಚುನಾವಣೆ ನಡೆದಿತ್ತು. ಅದಾದಬಳಿಕ ಮಂಡಲ ಪಂಚಾಯಿತಿ, ಗ್ರಾಪಂ ವ್ಯವಸ್ಥೆಇದ್ದಾಗಿನಿಂದಲೂ ಇಲ್ಲಿ ಚುನಾವಣೆ ನಡೆದಿಲ್ಲ.ಸದ್ಯ ಯಡಹಳ್ಳಿ ಗ್ರಾಪಂ ವ್ಯಾಪ್ತಿಯ ಯಡಹಳ್ಳಿಯಲ್ಲಿ ಸಾಮಾನ್ಯ ಪುರುಷ-3, ಸಾಮಾನ್ಯ ಮಹಿಳೆ-3, ಎಸ್‌ಸಿ ಪುರುಷ ಮತ್ತು ಮಹಿಳೆ ತಲಾ 1, ಎಸ್‌ಟಿ ಪುರುಷ ಮತ್ತು ಮಹಿಳೆ ತಲಾ 1, ಹಿಂದುಳಿದ ಅ ವರ್ಗ 1 ಸೇರಿ ಒಟ್ಟು10 ಸ್ಥಾನಗಳಿವೆ. ಇನ್ನುಅಮಲಝರಿಯಲ್ಲಿ ತಲಾ ಎರಡು ಪುರುಷಮತ್ತು ಮಹಿಳಾ ಸಾಮಾನ್ಯ, ತಲಾ ಒಂದು ಎಸ್‌ಸಿ ಮಹಿಳೆ ಮತ್ತು ಪುರುಷ, ತಲಾ ಒಂದು ಎಸ್‌ಟಿಮಹಿಳೆ ಮತ್ತು ಪುರುಷ ಸೇರಿ 8 ಸ್ಥಾನಗಳಿವೆ. ಎರಡೂಗ್ರಾಮಗಳು ಸೇರಿ 18 ಸ್ಥಾನಕ್ಕೂ ಅವಿರೋಧ ಆಯ್ಕೆಯಾಗಿವೆ.

ಹಿರಿಯರ ಮಧ್ಯಸ್ಥಿಕೆ: ಅಂದ ಹಾಗೆ ಯಡಹಳ್ಳಿ ಗ್ರಾಮ ಬೀಳಗಿಯ ಮಾಜಿ ಶಾಸಕ ಜೆ.ಟಿ. ಪಾಟೀಲರ ಹುಟ್ಟೂರ. ಈ ಊರಿನ ಹಿರಿಯರಾದ ಎಂ.ಆರ್‌. ದೇಸಾಯಿ, ಜೆ.ಟಿ.ಪಾಟೀಲ, ಎಸ್‌.ಟಿ. ಪಾಟೀಲ, ಜಿತೇಂದ್ರ ಪಾಟೀಲ, ದೊಡ್ಡಣ್ಣ ದೇಸಾಯಿ, ಅಮಲಝರಿಯ ತೋಪಣಗೌಡ, ರಾಚಪ್ಪ ದೇಸಾಯಿ, ಭೀಮಶಿ ದೇಸಾಯಿ ಸೇರಿ ಎರಡೂ ಗ್ರಾಮದ ಹಲವು ಮುಖಂಡರು ಸೇರಿ ಗ್ರಾಪಂ ಚುನಾವಣೆ ಆಕಾಂಕ್ಷಿಗಳ ಸಭೆ ನಡೆಸುತ್ತಾರೆ. ಆಯಾ ವಾರ್ಡ್‌ಗೆ ಮೀಸಲಾದ ಸ್ಥಾನಗಳಿಗೆ ಎಲ್ಲ ಸಮಾಜದ ಅರ್ಹ ವ್ಯಕ್ತಿಯೊಬ್ಬರಿಗೆ ಸ್ಪರ್ಧಿಸಲು ತಿಳಿಸಿ ಅವಿರೋಧ ಆಯ್ಕೆಯಾಗುವಂತೆ ನೋಡಿಕೊಳ್ಳುತ್ತಾರೆ. ಇದು ಹಲವು ವರ್ಷಗಳಿಂದಲೂ ನಡೆದುಕೊಂಡು ಬಂದಿದೆ. ಪ್ರಸ್ತುತ ಗ್ರಾಪಂ ಚುನಾವಣೆಯಲ್ಲಿ ಆಯ್ಕೆಯಾದ 18 ಜನ ಅಭ್ಯರ್ಥಿಗಳನ್ನು ಮಂಗಳವಾರ ಸಂಜೆ ಯಡಹಳ್ಳಿಯಲ್ಲಿ ಪಕ್ಷಾತೀತವಾಗಿ ಸನ್ಮಾನಿಸಿ ಎರಡೂ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಶ್ರಮಿಸುವಂತೆ ಹಿರಿಯರು ಸಲಹೆ ನೀಡಿದ್ದಾರೆ.

ಮದ್ಯ-ಮಾಂಸ, ಗುಟಕಾ ಮಾರಲ್ಲ : ಯಡಹಳ್ಳಿಯ ಮತ್ತೂಂದು ವಿಶೇಷ ಅಂದರೆ ಇಲ್ಲಿ ಮದ್ಯ, ಮಾಂಸ ಹಾಗೂ ಗುಟಕಾ ಯಾವುದನ್ನೂ ಮಾರಾಟ ಮಾಡಲ್ಲ. ಯಾವುದೇ ಅಂಗಡಿಗಳಲ್ಲೂ ಈ ವಸ್ತುಗಳನ್ನು ಮಾರಾಟ ಮಾಡುವಂತಿಲ್ಲ. ಮಾರಿದರೆಗ್ರಾಮಸ್ಥರೇ ವಿರೋಧ ಮಾಡುತ್ತಾರೆ. ಹಾಗಂತ ಇಲ್ಲಿ ಮದ್ಯ, ಮಾಂಸ ಸೇವನೆ ಮಾಡುವವರಿಲ್ಲ ಅಂತಲ್ಲ. ಅವರೆಲ್ಲ ಬೇರೆ ಊರಿಗೆ ಹೋದಾಗ ಮಾತ್ರ ಅದೆಲ್ಲ ಮಾಡುತ್ತಾರೆ. ತಮ್ಮೂರಲ್ಲಿ ಇದ್ದಾಗ ಅದನ್ನು ಸ್ವಯಂಘೋಷಿತ ನಿಷಿದ್ಧ ಮಾಡಿಕೊಳ್ಳುತ್ತಾರೆ ಎಂಬುದು ಇಲ್ಲಿನ ಪಿಕೆಪಿಎಸ್‌ ಅಧ್ಯಕ್ಷ ಜೀತೇಂದ್ರ ಪಾಟೀಲರ ಹೆಮ್ಮೆಯ ಮಾತು.

Advertisement

 

ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next