Advertisement

ದೇಗುಲಗಳಲ್ಲಿ ವಿವಿಧ ಧಾರ್ಮಿಕ ಆಚರಣೆ

10:56 AM Oct 14, 2018 | |

ಮಹಾನಗರ: ನವರಾತ್ರಿ ಮಹೋತ್ಸವದ ಅಂಗವಾಗಿ ನಗರದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಮತ್ತು ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಶನಿವಾರ ವಿವಿಧ ಪೂಜಾ ವಿಧಿಗಳು ನಡೆದವು.

Advertisement

ಕುದ್ರೋಳಿ ದೇವಸ್ಥಾನದಲ್ಲಿ ಭಗವತೀ ದುರ್ಗಾ ಹೋಮ, ಪುಷ್ಪಾಲಂಕಾರ ಮಹಾಪೂಜೆ, ಭಜನೆ, ಶ್ರೀದೇವಿ ಪುಷ್ಪಾಲಂಕಾರ ಮಹಾಪೂಜೆ, ಉತ್ಸವ ಜರಗಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಡಾ| ಎ.ಪಿ.ಜೆ. ಅಬ್ದುಲ್‌ ಕಲಾಂ ಪ್ರಶಸ್ತಿ ವಿಜೇತ ಮಣಿಪಾಲ ವಿಪಂಚಿ ಬಳಗದ ನಿರ್ದೇಶಕಿ ಪವನಾ ಬಿ. ಆಚಾರ್‌ ನಿರ್ದೇಶನದಲ್ಲಿ ನವ ವೀಣಾವಾದನ, ಸಾಮಿ ಕೃಪಾ ಟೀಂ ಡಿಫರೆಂಟ್‌ ಮಂಗಳೂರು ಪ್ರೊಡಕ್ಷನ್‌ ದೀಕ್ಷಿತ್‌ರಾಜ್‌ ಪಡೀಲ್‌ ಮತ್ತು ತಂಡದವರಿಂದ ತೈಯಂ ನೃತ್ಯ ಜರಗಿತು.

ಇಂದಿನ ಕಾರ್ಯಕ್ರಮ
ಅ. 14ರಂದು ಕುದ್ರೋಳಿ ಕ್ಷೇತ್ರದಲ್ಲಿ ಬೆಳಗ್ಗೆ 10ಕ್ಕೆ ಕುಮಾರಿ ದುರ್ಗಾ ಹೋಮ, ಮಧ್ಯಾಹ್ನ 12.30ಕ್ಕೆ ಪುಷ್ಪಾಲಂಕಾರ ಮಹಾಪೂಜೆ (ಲಲಿತಾ ಪಂಚಮಿ), ರಾತ್ರಿ 7ಕ್ಕೆ ಭಜನೆ, 9ಕ್ಕೆ ಶ್ರೀದೇವಿ ಪುಷ್ಪಾಲಂಕಾರ ಮಹಾಪೂಜೆ, ಉತ್ಸವ ಜರಗಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ 4.30ರಿಂದ ಪ್ರಭಾಕರ ತಣ್ಣೀರುಬಾವಿ ಮತ್ತು ತಂಡದಿಂದ ಸಪ್ತಸ್ವರ ಆರ್ಕೆಸ್ಟ್ರಾ ಭಕ್ತಿಗಾನ ರಸಮಂಜರಿ, ಸಂಜೆ 6ರಿಂದ ವಿದುಷಿ ರೇಷ್ಮಾ ನಿರ್ಮಲ್‌ ಭಟ್‌ ಅವರ ಶಿಷ್ಯೆ ಶ್ರೀರಕ್ಷಾ ಎಸ್‌. ಎಚ್‌. ಮತ್ತು ತಂಡದಿಂದ ನೃತ್ಯ ವೈಭವ, ಡಾ| ಎ.ಪಿ.ಜೆ. ಅಬ್ದುಲ್‌ ಕಲಾಂ ಲೈಫ್‌ಟೈಮ್‌ ಅಚೀವ್‌ಮೆಂಟ್‌ ಪ್ರಶಸ್ತಿ ಪುರಸ್ಕೃತ ಡಾ| ಕೆ. ಶಶಿಕುಮಾರ್‌ ವಾರಣಾಸಿ ತಂಡದವ ರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ನಡೆಯಲಿದೆ.

ಮಂಗಳಾದೇವಿ ದೇವಸ್ಥಾನದಲ್ಲಿ ಮೂಲ ನಕ್ಷತ್ರ, ರಾತ್ರಿ ಉತ್ಸವಾರಂಭವಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ 10ರಿಂದ ಕದ್ರಿ ಯಕ್ಷ ಮಂಜುಳಾ ವತಿಯಿಂದ ‘ಶಶಿಪ್ರಭಾ ಪರಿಣಯ’ ಪ್ರಸಂಗದ ಮಹಿಳಾ ತಾಳಮದ್ದಳೆ, ಸಂಜೆ 4ರಿಂದ ಕೂಟ ಮಹಾ ಜಗತ್ತು ಇದರ ಮಹಿಳೆಯರಿಂದ ಭಜನೆ, 5ರಿಂದ ಶೀಲಾ ದಿವಾಕರ್‌ ಮತ್ತು ಬಳಗ ದಿಂದ ಗಾನ ವೈಭವ, 6ರಿಂದ ಗಣೇಶ್‌ ಎರ್ಮಾಳ್‌, ಬಳಗದಿಂದ ಭಕ್ತಿಗಾನ ವೈಭವ, 7.30ರಿಂದ ಡಾ| ವಿದ್ಯಾ ಶಿಮ್ಲಡ್ಕ ಮತ್ತು ತಂಡದಿಂದ ನೃತ್ಯ ವೈವಿಧ್ಯ ಜರಗಲಿದೆ.

ಲಲಿತಾ ಪಂಚಮಿ
ಮಂಗಳಾದೇವಿ ದೇವಸ್ಥಾನದಲ್ಲಿ ಶ್ರೀ ಲಲಿತಾ ಪಂಚಮಿ ಜರಗಿತು. ಶ್ರೀ ಮಂಗಳಾದೇವಿ ಸೇವಾ ಸಮಿತಿ ಮಹಿಳಾ ಘಟಕದವರಿಂದ ಭಜನೆ, ದೇವಸ್ಥಾನದ ವತಿಯಿಂದ ಜನಪದ ಕಲೋತ್ಸವದ ಬೆಳ್ಳಿಹಬ್ಬ ಸಂಭ್ರಮ, ಶ್ರೀ ಮೂಕಾಂಬಿಕಾ ಯಕ್ಷಗಾನ ಮಂಡಳಿಯಿಂದ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next