Advertisement

ಕ್ಯಾನ್ಸರ್‌ನಲ್ಲಿದೆ ವಿವಿಧ ಹಂತ: ಡಾ|ಪ್ರಿಯಾ

05:44 PM Feb 10, 2018 | Team Udayavani |

ಸೈದಾಪುರ: ಕ್ಯಾನ್ಸರ್‌ ಖಾಯಿಲೆಯಲ್ಲಿ ವಿವಿಧ ಹಂತಗಳಿವೆ. ಇದರ ಲಕ್ಷಣಗಳು ಕಂಡು ಬರುತ್ತಿರುವಂತೆ ಚಿಕಿತ್ಸೆ ಪಡದರೆ ಗುಣಮುಖ ಆಗುತ್ತದೆ ಎಂದು ವೈದ್ಯಾಧಿಕಾರಿ ಡಾ| ಪ್ರಿಯಾ ಪಾಕಲ ಹೇಳಿದರು.

Advertisement

ಪಟ್ಟಣದ ವಿದ್ಯಾವರ್ಧಕ ಪ್ರೌಢಶಾಲೆ ಹಾಗೂ ಡಿ.ಎಡ್‌ ಕಾಲೇಜು ಪ್ರಶಿಕ್ಷಣಾರ್ಥಿಗಳಿಗೆ ಸೈದಾಪುರ ಸಮೂದಾಯ ಆರೋಗ್ಯ ಕೇಂದ್ರ ಎನ್‌ಸಿಡಿ ಕ್ಲಿನಿಕ್‌ ಸಿಬ್ಬಂದಿ ವತಿಯಿಂದ ಆಯೋಜಿಸಿದ್ದ ವಿಶ್ವ ಕ್ಯಾನ್ಸರ್‌ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕ್ಯಾನ್ಸರ್‌ ಸಾಂಕ್ರಾಮಿಕ ರೋಗವಲ್ಲ. ದೇಹದಲ್ಲಿ ಗಂಟು, ಮಚ್ಚೆ, ಕಡಿಮೆಯಾಗದ ಕೆಮ್ಮು, ಮಲ ಮೂತ್ರ ವಿಸರ್ಜನೆಯಲ್ಲಿ ಮತ್ತು ತೂಕದಲ್ಲಿ ಬದಲಾವಣೆ, ಸತತ ಅಜೀರ್ಣ, ರಕ್ತದಲ್ಲಿ ವಾಂತಿ ಮತ್ತು ಬೇದಿ ಈ ರೋಗದ ಲಕ್ಷಣಗಳಾಗಿವೆ.  ತಂಬಾಕು ಮತ್ತು ಅದರಿಂದ ತಯಾರಿಸಿದ ಪದಾರ್ಥಗಳನ್ನು ಬಳಸದೆ ಇರುವುದು, ಹಣ್ಣು, ತರಕಾರಿ, ಕಾಳುಗಳನ್ನು ಹೆಚ್ಚಾಗಿ ಸೇವಿಸುವುದು, ಸೂರ್ಯನ ಅಪಾಯಕಾರಿ ವಿಕರಣಗಳಿಂದ ದೂರವಿರುವುದು, ಚರ್ಮ ಮುಚ್ಚುವಂತೆ ಬಟ್ಟೆ ಧರಿಸುವಂತಹ ಕೆಲ ಮುಂಜಾಗ್ರತಾ ಕ್ರಮಗಳಿಂದ ಕ್ಯಾನ್ಸರ್‌ ಖಾಯಿಲೆ ತಡಗಟ್ಟೆಗಲು ಸಾಧ್ಯವಿದೆ ಎಂದು ಹೇಳಿದರು.

ಪ್ರಾಂಶುಪಾಲ ಕರಬಸಯ್ಯ ದಂಡಿಗಿಮಠ ಮಾತನಾಡಿ, ಉತ್ತಮ ಆರೋಗ್ಯ ಅತೀ ಮುಖ್ಯವಾಗಿದೆ. ನಾವು ಯಾವುದೇ ರೋಗ ಬರದಂತೆ ಎಚ್ಚರ ವಹಿಸಬೇಕು. ಅಲ್ಲದೆ ದೇಹದ ಆರೋಗ್ಯದಲ್ಲಿ ಯಾವದೇ ಬದಲಾವಣೆ ಕಂಡು ಬರುತ್ತಿರುವಂತೆ ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆದರೆ, ಮುಂದೆ ಆಗುವ ಪರಿಣಾಮಗಳನ್ನು ತಪ್ಪಿಸಲು ಸಾಧ್ಯವಿದೆ. ಈ ದಿಸೆಯಲ್ಲಿ ವೈದ್ಯರ ತಂಡ ಜಾಗೃತಿ ಕಾರ್ಯಕ್ರಮದಲ್ಲಿ ನೀಡಿದ ಸಲಹೆ ಸೂಚನೆಗಳು ಉಪಯೋಗ ಕಾರಿಯಾಗಿವೆ. ಇವುಗಳನ್ನು ನಾವು ಅಳವಡಿಸಿಕೊಳ್ಳಬೇಕು ಎಂದರು.

ಇದಕ್ಕೂ ಮುಂಚೆ ಮುಖ್ಯಗುರು ಲಿಂಗಾರಡ್ಡಿ ನಾಯಕ, ಪ್ರಾಂಶುಪಾಲ ಜಿ.ಎಂ. ಗುರುಪ್ರಸಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉಪನ್ಯಾಸಕ ಸಾಬಯ್ಯ ರಾಯಪ್ಪನೋರ, ಹೊನ್ನಪ್ಪ, ಆನಂದ ಕೊಂಡಾಪುರ, ಸಮೂದಾಯ ಆರೋಗ್ಯ ಕೇಂದ್ರ ಎನಸಿಡಿ ಕ್ಲಿನಿಕ ಸಿಬ್ಬಂದಿಗಳಾದ ಕೌನ್ಸಿಲರ ನಾಗೇಂದ್ರಪ್ಪ ಮಾಧ್ವಾರ, ಸ್ಟಾಪನರ್ಸ ಕಲ್ಪನಾ, ವಿಶಾಲ ಎಲಿಜಬೇತ, ಸಾಗರ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next