Advertisement

ಮನೆಯೊಳಗಿನ ವಾಸ್ತುದೋಷ ನಿವಾರಣೆಗೆ ಸರಳ ಪರಿಹಾರಗಳು ಇಲ್ಲುಂಟು

01:21 PM Jul 10, 2017 | |

ಇರುವುದನ್ನು ಇದ್ದಂತೆ ಹೇಳಿದಾಗ ಕೇಳಿದವರಿಗೆ ಮನಸ್ಸು ಮುದುಡುತ್ತದೆ. ಕಟ್ಟಿದ ಮನೆಯನ್ನು ಒಡೆಯಿರಿ, ಬದಲಿಸಿರಿ ಎನ್ನುವುದು ಕಷ್ಟದ ಕೆಲಸ ಸೂಕ್ತವಾದ ಸಲಹೆಗಳನ್ನು ಕೊಟ್ಟರೆ, ಮತ್ತೆ ಸಾಲ ಮಾಡಿ ಮನೆಯನ್ನು ಪುನರೂಪಿಸಲು ಬಹಳ ಜನ ಮುಂದಾಗುತ್ತಾರೆ. 

Advertisement

ನಿಮ್ಮ ಮನೆಯನ್ನು ಸಕಲಸೌಭಾಗ್ಯದ ಸಂಪನ್ನದ ಗಣಿಯಾಗಿಸಿಕೊಳ್ಳಲು ನಿರಂತರವಾದ ಪ್ರಯತ್ನ ನಡೆಸುತ್ತೀರಿ. ಪಂಚಭೂತಗಳನ್ನು ಸೂಕ್ತನೆಲೆಯಲ್ಲಿ ನಮ್ಮ ಮನೆಗೆ ಸಂಬಂಧಿಸಿದ ಪೂರ್ವ ಪಶ್ಚಿಮಾದಿ ಅಷ್ಟದಿಕ್ಕುಗಳನ್ನು ಜಲಯುತ ಗೊಳಿಸಲು ಆಧುನಿಕ ಕಾಲದಲ್ಲಿ ಸ್ವಲ್ಪ ಕಷ್ಟದ ವಿಷಯವೇ ಆಗಿದೆ. ಹಿಂದೆ ಸುಲಭವಾಗಿತ್ತು ಎಂದೇನಲ್ಲ. ಆದರೆ ಸರ್ವತ್ರ ಮಲಿನತೆಗೆ ಕಾರಣವಾಗುವ ಬಚ್ಚಲು, ಸಂಡಾಸು ಮನೆಯ ಹೊರಗಡೆ ಇದ್ದು ಮನೆ ಶುಚಿಯಾಗಿರಲು ಅನುಕೂಲವಾಗಿತ್ತು. ಈಗ ಆಧುನಿಕ ವಿಧಾನಗಳು ಎಲ್ಲವನ್ನೂ ಕಲಸುಮೇಲೊಗರಗೊಳಿಸಿವೆ. ಮನೆಯೊಳಗೇ ನಾಲ್ಕು ಸಂಡಾಸುಗಳು, ನಾಲ್ಕು ಬಚ್ಚಲುಮನೆಗಳು, ಮನೆಯ ಅಳತೆಗೆ ಸರಿಹೊಂದದ ದೇವರ ಮನೆ, ಎಲ್ಲೋ ಊಟ ಎಲ್ಲೋ ಅಡುಗೆ, ಎಲ್ಲೋ ಮಲಗುವ ವ್ಯವಸ್ಥೆ ಇತ್ಯಾದಿಗಳಿಂದ ಹೇಳತೀರದ ಗೊಂದಲಗಳ ನಡುವೆ ಬದುಕು ಸಾಗಿದೆ. ಮುಖ್ಯವಾಗಿ ಈ ಎಲ್ಲಾ ರೀತಿಯ ಇಕ್ಕಟ್ಟುಗಳಿಂದ ಮನಸ್ಸು ಪ್ರಫ‌ುಲ್ಲವಾಗಿರಲು ಅಸಾಧ್ಯವಾಗಿದೆ.

ವಾಸ್ತು ವಿಚಾರವಾಗಿ ಪರಿಶೀಲಿಸಿ ಎಂದು ವಿನಂತಿಸುತ್ತಾರೆ. ಇರುವುದನ್ನು ಇದ್ದಂತೆ ಹೇಳಿದಾಗ ಕೇಳಿದವರಿಗೆ ಮನಸ್ಸು ಮುದುಡುತ್ತದೆ. ಕಟ್ಟಿದ ಮನೆಯನ್ನು ಒಡೆಯಿರಿ, ಬದಲಿಸಿರಿ ಎನ್ನುವುದು ಕಷ್ಟದ ಕೆಲಸ ಸೂಕ್ತವಾದ ಸಲಹೆಗಳನ್ನು ಕೊಟ್ಟರೆ, ಮತ್ತೆ ಸಾಲ ಮಾಡಿ ಮನೆಯನ್ನು ಪುನರೂಪಿಸಲು ಬಹಳ ಜನ ಮುಂದಾಗುತ್ತಾರೆ. ಪಶ್ಚಿಮಕ್ಕೆ ಮುಖ ಮಾಡಿದ ದೇವರನ್ನು ಕೂಡಿಸಲು ಸಾಧ್ಯವಾಗದ ರೀತಿ ಮನೆಯ ಪೂರ್ವಭಾಗ ರೂಪುಗೊಂಡಿದ್ದರೆ ಇಕ್ಕಟ್ಟುಗಳ ನಡುವೆಯೇ ದೇವರನ್ನು ಕೂಡ್ರಿಸಿ ಎನ್ನುವುದು ತಪ್ಪಾಗುತ್ತದೆ. ಉತ್ತರದಲ್ಲಿ ಪೇರಿಸಿದ ಎನರ್ಜಿಗೆ ತೊಡೆತಟ್ಟುವ ತ್ಯಾಜ್ಯ ಅಥವಾ ಬಿಡು ಬೀಸು ತುಂಡು ಕಟ್ಟಿಗೆ, ಕಬ್ಬಿಣದ ಡಬ್ಬಿ, ಕಡತಗಳನ್ನು ರವಾನಿಸಿ ಎಂದು ಹೇಗೆ ತಿಳಿಸುವುದು? ಸೋರುವ ನೀರಿನ ಟ್ಯಾಪ್‌, ಮುಚ್ಚಲಾಗದ ಬಚ್ಚಲ ಮನೆಯ ಬಾಗಿಲು ಕಾಣದಂತೆ ಇಳಿಬಿಟ್ಟ ಪರದೆ, ಕೊಳೆವೆಗೊಂದು ಅಸಾಧ್ಯವಾದ ಅಸಮರ್ಪಕ ಕೆಡು ಅಲೆಗಳನ್ನು ಮನೆಯಲ್ಲಿ ತುಂಬಿಸಿವೆ ಎಂದು ತಿಳಿಸಿ ಹೇಳಿದರೂ, ಅವುಗಳ ಸೂಕ್ತ ಅಚ್ಚುಕಟ್ಟುತನ ಸರ್ರನೆ ಬದಲುಗೊಳ್ಳಲು ಅನೇಕ ಅಡೆ ತಡೆಗಳಿರುತ್ತವೆ. ಒಂದು ಮನೆ ಹಲವು ಕಾರಣಗಳಿಗಾಗಿ ಅಂಚಿನವರೆಗೆ ನೀರು ತುಂಬಿದ ಹರಿವಾಣವನ್ನು, ಒಂದು ಚೂರೂ ತುಳುಕಿಸದೆ, ಹತ್ತು ಅಡಿ ಎತ್ತು ಎನ್ನುವಷ್ಟೇ ಕಷ್ಟದ ವಿಚಾರವಾಗಿರುತ್ತದೆ.

ಈ ಎಲ್ಲಾ ಕ್ಲಿಷ್ಟತೆಗಳಿಂದಾಗಿ ಮನೆಯೊಳಗಿನ ಸಕಾರಾತ್ಮಕ ಅಲೆಗಳನ್ನು ಗಟ್ಟಿಗೊಳಿಸಲು ನಮಗೆ ಸಹಕಾರಿಯಾಗಬೇಕಾದ ಸೂರ್ಯ, ಚಂದ್ರ, ಮಂಗಳ ಇತ್ಯಾದಿ ನವಗ್ರಹಗಳನ್ನು ಸಂತೃಪ್ತಿ ಪಡಿಸುವುದೇ ಸೂಕ್ತ ವಿಧಾನವಾಗಿದೆ. ದೇವರ ಮನೆಯಲ್ಲಿ ಒಂದು ಅಗಲವಾದ ಹರಿವಾಣವಿರಿಸಿ, ದೇವರೆದುರಿಗೆ ಇರುವ ದಿಕ್ಕನ್ನು ಅನುಸರಿಸಿ, ಪೂರ್ವ ಪಶ್ಚಿಮ, ಉತ್ತರ ದಕ್ಷಿಣ, ಈಶಾನ್ಯ ನೈಋತ್ಯ, ಆಗ್ನೇಯ ಹಾಗೂ ವಾಯುವ್ಯ ದಿಕ್ಕುಗಳನ್ನು ಗುರುತಿಸಿಕೊಳ್ಳಿ. ಎಂಟು ಸುಮಾರು ನೂರು ಗ್ರಾಂ. ಅಥವಾ ಅದಕ್ಕಿಂತ ಜಾಸ್ತಿ ಸ್ಥಳಾವಕಾಶವಿರುವ ಪುಟ್ಟ ತಟ್ಟೆಗಳನ್ನಿರಿಸಿ ಇದೆಲ್ಲದರ ನಡುವೆ ಮಧ್ಯದಲ್ಲಿ ಒಂಭತ್ತನೆಯ ತಟ್ಟೆಯನ್ನಿಡಿ. ಸೋಮವಾರದಿಂದ ಶುರು ಮಾಡಿ, ಭಾನುವಾರದವರೆಗೂ ಪೂರ್ವಭಾಗದ ತಟ್ಟೆಗೆ ಪ್ರತಿದಿನ ಒಂದು ಸಲಕ್ಕೆ ಐದು ಗ್ರಾಂನಂತೆ ಅಕ್ಕಿಯನ್ನು, ಆಗ್ನೇ¿åಭಾಗದ ತಟ್ಟೆಗೆ ತೊಗರಿ ಬೇಳೆಯನ್ನು, ದಕ್ಷಿಣ ದಿಕ್ಕಿನ ತಟ್ಟೆಗೆ ಹೆಸರು ಕಾಳು, ನೈಋತ್ಯ ದಿಕ್ಕಿನ ತಟ್ಟೆಗೆ ಎಳ್ಳು, ಪಶ್ಚಿಮ ದಿಕ್ಕಿಗೆ ಅವರೆಕಾಳು ಮಧ್ಯಭಾಗದ ತಟ್ಟೆಗೆ ಗೋಧಿಯನ್ನು ಪ್ರತಿದಿನ ಪೌರ್ಣಿಮೆಯ ದಿನ ಇವನ್ನೆಲ್ಲಾ ಒಂದು ಪಾತ್ರೆಗೆ ಸುರಿದು ಆ ರಾತ್ರಿ ಅವುಗಳನ್ನು ನೀರಲ್ಲಿ ನೆನೆಸಿ ಮಾರನೆ ದಿನ ಶುದ್ಧ ನೀರಲ್ಲಿ ನೆನೆಸಿದ ನವಧಾನ್ಯಗಳನ್ನು ಬೆಲ್ಲದೊಂದಿಗೆ ಹಸುವಿಗೆ ಗ್ರಾಸ ನೀಡಿ ಮಾರನೇ ದಿನದಿಂದ ಮತ್ತೆ ನವಧಾನ್ಯಗಳ ಸಂಗ್ರಹ ಮತ್ತೆ ಮಾಡಿ. ಇದು ನಿರಂತರವಾಗಿ ನಡೆಯಲಿ ತುಂಬುತ್ತಿರುವ ಧಾನ್ಯದ ತಟ್ಟೆಗಳನ್ನು ಮುಚ್ಚಳದಿಂದ ಮುಚ್ಚಿರಿ, ಇದರಿಂದ ದೋಷ ಪರಿಹಾರ ಆಗುತ್ತದೆ. 

ಅನಂತಶಾಸ್ತ್ರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next