Advertisement

ಕಾಡುಪ್ರಾಣಿಗಳ ಸೆರೆಗೆ ಬೋನುಗಳೇ ಇಲ್ಲ !

07:45 PM Jan 13, 2022 | Team Udayavani |

ಮಹಾನಗರ: ನಗರ ಮತ್ತು ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಕೆಲವು ದಿನಗಳಿಂದ ಚಿರತೆ ಸಹಿತ ಕಾಡು ಪ್ರಾಣಿಗಳ ಪ್ರವೇಶ ಹೆಚ್ಚಾಗು ತ್ತಿದ್ದು, ಅವುಗಳನ್ನು ಸೆರೆ ಹಿಡಿಯುವ ನಿಟ್ಟಿನಲ್ಲಿ ಮಂಗಳೂರು ವಲಯ ಅರಣ್ಯ ಇಲಾಖೆಗೆ ಬೋನು ಗಳ ಕೊರತೆ ಎದುರಾಗಿದೆ.

Advertisement

ಮಂಗಳೂರಿನ ಅರಣ್ಯ ಇಲಾಖೆ ಯಲ್ಲಿ ಸದ್ಯ ಕೇವಲ 5 ಬೋನು ಗಳಿದ್ದು, ಅವುಗಳನ್ನು ಕಾಡು ಪ್ರಾಣಿಗಳು ಬರುವ ಶಂಕಾಸ್ಪದ  ಪ್ರದೇಶ ಗಳಲ್ಲಿ ಈಗಾಗಲೇ ಇಡಲಾಗಿದೆ.

ಇತರೇ ಪ್ರದೇಶದಲ್ಲಿ ಕಾಡು ಪ್ರಾಣಿ ಹಾವಳಿ ಇದ್ದರೆ ಈಗಿಟ್ಟ ಜಾಗದಿಂದಲೇ ಬೋನುಗಳನ್ನು ತರಬೇಕಾದ ಅನಿ ವಾರ್ಯ ಸೃಷ್ಟಿಯಾಗಿದೆ.  ಇತ್ತೀಚಿನ ದಿನಗಳಲ್ಲಿ ಕೆಲವೊಂದು ಗುಡ್ಡ, ಕಾಡಿನ ಪ್ರದೇಶಕ್ಕೆ ಬೋನುಗಳ ಆವಶ್ಯಕತೆ ಬೀರುತ್ತಿದ್ದು, ಅಲ್ಲಿಗೆ ವಾಹನ ಸಂಪರ್ಕ ವ್ಯವಸ್ಥೆ ಇರು ವುದಿಲ್ಲ. ಸುಮಾರು 70ರಿಂದ 80 ಕೆ.ಜಿ. ಸಾಮರ್ಥ್ಯದ ಬೋನು ಗಳನ್ನು ಹೊತ್ತೂಯ್ಯ ಬೇಕಾಗಿದೆ.

ಐದು ಬೋನುಗಳಲ್ಲಿ ಎರಡು ಬೋನುಗಳನ್ನು ಮಂಗಳೂರು ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣ ಪರಿಸರದಲ್ಲಿ ಇಡಲಾಗಿದೆ. ಉಳಿದ 3 ಬೋನುಗಳನ್ನು ಎಡಪದವು, ಗಂಜಿಮಠ ಪರಿಸರದಲ್ಲಿ ಇಡಲಾಗಿದೆ. ಆದರೆ ಈ ಸ್ವಯಂ ಚಾಲಿತ ಬೋನುಗಳಿಗೆ ಚಿರತೆ ಬೀಳುತ್ತಿಲ್ಲ. ಜನ ಸಂಚಾರ ಕಡಿಮೆ ಇರುವ ಪ್ರದೇಶದಲ್ಲಿ ಜನರು ಕೋಳಿ ಸಹಿತ ವಿವಿಧ ಪ್ರಾಣಿಗಳ ಮಾಂಸದ ತ್ಯಾಜ್ಯ ಎಸೆಯುತ್ತಿರುವುದು ಚಿರತೆಕಾಣಿಸಿಕೊಳ್ಳುತ್ತಿರಲು ಪ್ರಮುಖ ಕಾರಣ ಎನ್ನಬಹುದು.

ಅಕ್ಟೋಬರ್‌ನಲ್ಲಿ ಮರೋಳಿ ಬಳಿ ಮತ್ತು ಕುಂಪಲದಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಕನ ಪದವು, ಮಾರ್ತ ಕಾಂಪೌಂಡ್‌, ಬಲ್ಲಾಳ್‌ಗುಡ್ಡೆ ವ್ಯಾಪ್ತಿಯಲ್ಲಿ ಚಿರತೆಯ ಹೆಜ್ಜೆ ಗುರುತು ಪತ್ತೆಯಾಗಿತ್ತು. ಸುಮಾರು 15 ವರ್ಷಗಳ ಹಿಂದೆ ಬಾವುಟಗುಡ್ಡೆಯ ಅಲೋಶಿಯಸ್‌ ಕಾಲೇಜು ಪರಿಸರದಲ್ಲಿಯೂ ಚಿರತೆ ಕಾಣಿಸಿ ಕೊಂಡು ಸಂಚಲನ ಮೂಡಿ ಸಿತ್ತು. ಇತ್ತೀಚೆಗೆ ಚಿರತೆ, ಕಾಡುಕೋಣ, ಹಂದಿ, ಹೆಬ್ಟಾವುಗಳು ಕೂಡ ಅಲ್ಲಲ್ಲಿ ಪ್ರತ್ಯಕ್ಷ ಗೊಳ್ಳುತ್ತಿವೆ.

Advertisement

ಇನ್ನೂ ನಿಂತಿಲ್ಲ ಚಿರತೆ ಹೆಜ್ಜೆ :

ಕೆಲವು ತಿಂಗಳ ಹಿಂದೆ ನಗರದ ಕೆಲವು ಕಡೆಗಳಲ್ಲಿ ಚಿರತೆ ಹೆಜ್ಜೆ ಕಾಣಿಸಿ ಕೊಂಡಿದ್ದು, ಇನ್ನೂ ಕೂಡ ಚಿರತೆ ನಡೆದಾಡಿದ ಚಹರೆಗಳು ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿವೆ. ಬಜಪೆ, ಎಡಪದವು ಪರಿಸರದಲ್ಲಿ ಆಗಾಗ್ಗೆ ಚಿರತೆ ಹೆಜ್ಜೆ ಕಂಡು ಬರುತ್ತಿದ್ದು, ಕೆಲವು ಕಡೆ ಸಾಕು ನಾಯಿಗಳು ಕಾಣೆ ಯಾಗುತ್ತಿವೆ. ಅರಣ್ಯ ಇಲಾಖೆ ವಿವಿಧ ಕಡೆಗಳಲ್ಲಿ ಬೋನು ಅಳವಡಿಸಿದ್ದು, ಚಿರತೆ ಮಾತ್ರ ಬೋನಿಗೆ ಬೀಳುತ್ತಿಲ್ಲ.

ಬೋನು ಖರೀದಿಗೆ ನಿರ್ಧಾರ :

ಮಂಗಳೂರು ಗ್ರಾಮಾಂತರದಲ್ಲಿ ಕೆಲವು ದಿನಗಳಿಂದ ಚಿರತೆ ಕಾಣಿಸಿಕೊಳ್ಳುತ್ತಿದ್ದು, ಅರಣ್ಯ ಇಲಾಖೆಯಲ್ಲಿ ಸದ್ಯ ಐದು ಬೋನುಗಳು ಮಾತ್ರ ಇದೆ. ಇದೀಗ ಹತ್ತು ಹೆಚ್ಚುವರಿ ಬೋನು ಖರೀದಿ ಮಾಡಲು ನಿರ್ಧರಿಸಿದ್ದೇವೆ. ಕೆಲವೇ ದಿನಗಳಲ್ಲಿ ಅವು ಇಲಾಖೆ ಕೈ ಸೇರಲಿದೆ. ಎಡಪದವು ಸುತ್ತಮುತ್ತ ಚಿರತೆ ಹಾವಳಿ ನಿಂತಿಲ್ಲ. ಆ ಪರಿಸರದ ಸಾರ್ವಜನಿಕರು ಕೂಡ ಅರಣ್ಯ ಇಲಾಖೆಗೆ ಸಹಕಾರ ನೀಡುತ್ತಿದ್ದಾರೆ. ಪ್ರಶಾಂತ್‌ ಪೈ, ಮಂಗಳೂರು ವಲಯ ಅರಣ್ಯಾಧಿಕಾರಿ 

 

-ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next