Advertisement

ರಾಜ್ಯದ 108 ಹಳ್ಳಿಗಳಲ್ಲಿ ಪಿಯು ಪೂರೈಸಿದವರಿಲ್ಲ..!

08:47 AM Jan 01, 2018 | Team Udayavani |

ಬೆಂಗಳೂರು: ರಾಜ್ಯದ ಎರಡು ಸಾವಿರ ಹಳ್ಳಿಗಳಲ್ಲಿ ಪದವೀಧರರೇ ಇಲ್ಲ ಎಂಬ ಸುದ್ದಿ ಬಹಿರಂಗಗೊಂಡ ಬೆನ್ನಲ್ಲೇ 108 ಹಳ್ಳಿಗಳಲ್ಲಿ ಪಿಯು ಪೂರೈಸಿದವರೂ ಇಲ್ಲವೆಂಬ ಅಂಶ ಬೆಳಕಿಗೆ ಬಂದಿದೆ. ಪದವಿ ಪೂರ್ವ ಶಿಕ್ಷಣ ಇಲಾಖೆಯೂ ಇತ್ತೀಚೆಗೆ ಸಮೀಕ್ಷೆ ನಡೆಸಿದ್ದು, ಅದರ ವರದಿಯನ್ನು ಕೂಡ ಬಿಡುಗಡೆ ಮಾಡಿದೆ.ಎಸ್ಸೆಸ್ಸೆಲ್ಸಿ ನಂತರ ಕಾಲೇಜು ಮೆಟ್ಟಿಲೇರದ ವಿದ್ಯಾರ್ಥಿಗಳ ಜಾಡನ್ನು ಹಿಡಿದು
ರಾಜ್ಯದ ಎಲ್ಲಾ ಜಿಲ್ಲೆಯಲ್ಲೂ ಸಮೀಕ್ಷೆ ನಡೆಸಲಾಗಿದೆ. 108 ಹಳ್ಳಿಗಳಲ್ಲಿ ಪಿಯು ಪೂರೈಸಿದ ಅಭ್ಯರ್ಥಿಗಳೇ ಇಲ್ಲ ಎಂಬುದು ಖಾತ್ರಿಯಾಗಿದೆ.

Advertisement

ರಾಯಚೂರಿನ 26, ಮಂಡ್ಯದ 8, ಹಾಸನ, ಉತ್ತರ ಕನ್ನಡ ಹಾಗೂ ಬೆಳಗಾವಿಯ ತಲಾ 7, ಹಾಗೂ ಬೀದರ್‌ನ 6 ಹಳ್ಳಿ ಸೇರಿ ರಾಜ್ಯದ 108 ಹಳ್ಳಿಗಳಲ್ಲಿ ಪಿಯು ಪೂರೈಸಿದವರು ಇಲ್ಲ ಎಂಬುದು ಸಮೀಕ್ಷೆಯಿಂದ ಸ್ಪಷ್ಟಗೊಂಡಿದೆ. ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ಉದ್ದೇಶದಿಂದ ಕಾಲೇಜು ಶಿಕ್ಷಣ ಇಲಾಖೆ ತನ್ನ ಪ್ರಾಧ್ಯಾಪಕರ ಮೂಲಕ ಎಲ್ಲಾ ಹಳ್ಳಿಗಳಿಗೆ ಭೇಟಿ ನಿಡಿ, ಪದವೀಧರರನ್ನು ಪತ್ತೆ ಹಚ್ಚಿತ್ತು. ಆಗ ರಾಜ್ಯದ 2,070 ಹಳ್ಳಿಗಳಲ್ಲಿ ಪದವೀಧರರು ಇಲ್ಲದೇ ಇರುವುದು ಗೊತ್ತಾಗಿತ್ತು. ಅದೇ ಮಾದರಿಯಲ್ಲಿ ಪಿಯು ಇಲಾಖೆ ಅಧಿಕಾರಿಗಳು ಸಮೀಕ್ಷೆಯ ರೂಪು ರೇಷೆ ಸಿದ್ಧಪಡಿಸಿ, ಉಪನ್ಯಾಸಕರ ಮೂಲಕ ಸಮೀಕ್ಷೆ ಮಾಡಿಸಿದ್ದಾರೆ. 

ಎಸ್ಸೆಸ್ಸೆಲ್ಸಿಯಲ್ಲಿ ಅನುತ್ತೀರ್ಣರಾದ ಅಭ್ಯರ್ಥಿಗಳು ಕೌಟುಂಬಿಕ ಸಮಸ್ಯೆ ಸೇರಿ ಇತರ ಕಾರಣಕ್ಕಾಗಿ ಶಿಕ್ಷಣ ಮುಂದುವರಿಸದೇ 
ಇರುವುದು ಸಮೀಕ್ಷೆಯಿಂದ ತಿಳಿದು ಬಂದಿದೆ. ಈ ಮಾಹಿತಿಯ ಆಧಾರದಲ್ಲಿ ಕಾಲೇಜು ಶಿಕ್ಷಣದಿಂದ ಹೊರಗುಳಿದ ಅಭ್ಯರ್ಥಿಗಳ ಭೇಟಿ ಮಾಡಿ, ಅವರ ಕುಟುಂಬದ ಜತೆಗೆ ಮಾತುಕತೆ ನಡೆಸಲಾಗುತ್ತದೆ. ಪುನಃ ಅವರನ್ನು ಕಾಲೇಜಿಗೆ ಕರೆತರಲು ಬೇಕಾದ ಪ್ರಯತ್ನವನ್ನು ಇಲಾಖೆಯಿಂದ ಮಾಡಲಾಗುತ್ತದೆ ಎಂದು ಪಿಯು ಇಲಾಖೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next