Advertisement
ಈ ಮಾಹಿತಿಯನ್ನು ಜಮ್ಮು – ಕಾಶ್ಮೀರದ ಪೊಲೀಸರೇ ಹಂಚಿಕೊಂಡಿದ್ದಾರೆ. ಅದರಲ್ಲೂ ಮೂರು ಜಿಲ್ಲೆಗಳಲ್ಲಿ ಯಾವುದೇ ಸಕ್ರಿಯ ಸ್ಥಳೀಯ ಉಗ್ರರಿಲ್ಲ ಎಂದಿದ್ದಾರೆ. ಇದಕ್ಕಿಂತ ಮುಖ್ಯವಾಗಿ ಉಗ್ರ ಸಂಘಟನೆಗಳಾದ ಲಷ್ಕರ್ ಎ ತಯ್ಯಬಾ (ಎಲ್‌ಇಟಿ) ಮತ್ತು ಜೈಶ್ ಎ ಮೊಹಮ್ಮದ್ ಸಂಘಟನೆಗೆ ಮುಖ್ಯಸ್ಥರೇ ಇಲ್ಲ. ಹೆಚ್ಚು ಕಡಿಮೆ ಎಲ್ಲ ಪ್ರಮುಖ ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದಿದ್ದಾರೆ. ಹೀಗಾಗಿ ಕಣಿವೆ ರಾಜ್ಯಕ್ಕೆ ಪ್ರವಾಸಕ್ಕೆಂದು ಬರುವಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ.
Related Articles
Advertisement
ಎರಡು ವರ್ಷಗಳಲ್ಲಿ ಉಗ್ರ ಮುಕ್ತ ಕಾಶ್ಮೀರಸದ್ಯದ ಮಟ್ಟಿಗೆ ಕಾಶ್ಮೀರದಲ್ಲಿ ಭದ್ರತ ಪಡೆಗಳ ಕೈ ಮೇಲಾಗಿದೆ. ಯಾವುದೇ ಉಗ್ರರನ್ನು ನಾವು ಬಿಡುತ್ತಿಲ್ಲ. ಪೊಲೀಸರು, ಸೇನೆ, ಅರೆಸೇನಾ ಪಡೆಗಳು ಸೇರಿ ಉಗ್ರರನ್ನು ಸಂಹಾರ ಮಾಡುತ್ತಿವೆ. 50ಕ್ಕೂ ಕಡಿಮೆ ಹೈಬ್ರಿಡ್ ಉಗ್ರರಿದ್ದು, ಇವರನ್ನೂ ಮಟ್ಟ ಹಾಕಲಾಗುತ್ತಿದೆ ಎಂದು ವಿಜಯ್‌ಕುಮಾರ್ ಹೇಳಿದರು. ಇತ್ತೀಚೆಗಷ್ಟೇ ಉಗ್ರರಿಂದ ಟರ್ಕಿ ನಿರ್ಮಿತ ಪಿಸ್ತೂಲ್ ವಶ ಮಾಡಿಕೊಳ್ಳಲಾಗಿದ್ದು, ಇದು ಭದ್ರತ ಪಡೆಗಳ ಆತಂಕಕ್ಕೆ ಕಾರಣವಾಗಿದೆ. ಇವುಗಳನ್ನು ಪಾಕಿಸ್ಥಾನ ಸರಬರಾಜು ಮಾಡುತ್ತಿದೆ. ಎಲ್‌ಇಟಿ, ಜೆಇಎಂಗೆ ಮುಖ್ಯಸ್ಥರೇ ಇಲ್ಲ
ಎಲ್ಲದಕ್ಕಿಂತ ಮುಖ್ಯವೆಂದರೆ ಸದ್ಯ ಕಾಶ್ಮೀರದಲ್ಲಿ ಎಲ್‌ಇಟಿ ಮತ್ತು ಜೆಇಎಂ ಉಗ್ರ ಸಂಘಟನೆಗಳಿಗೆ ಮುಖ್ಯಸ್ಥರೇ ಇಲ್ಲ. ಎಲ್ಲ ಕಮಾಂಡರ್‌ಗಳನ್ನು ಹೊಡೆದು ಹಾಕಲಾಗಿದೆ ಎಂದು ವಿಜಯಕುಮಾರ್ ಹೇಳಿದ್ದಾರೆ. ಆದರೂ 2015ರಿಂದ ಫಾರೂಖ್ ಎಂಬ ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಇದ್ದಾನೆ. ಈತನೊಬ್ಬನೇ ಸಕ್ರಿಯ ಉಗ್ರ. ಈತನ ಪತ್ತೆಗೂ ಜಾಲ ಬೀಸಲಾಗಿದೆ ಎಂದಿದ್ದಾರೆ. ಎರಡು ವರ್ಷಗಳ ಹಿಂದೆ 80 ಕಮಾಂಡರ್‌ಗಳಿದ್ದರು ಎಂದು ತಿಳಿಸಿದರು. ಉಗ್ರರಾದ ಸ್ಥಳೀಯರ ಸಂಖ್ಯೆ
2017 – 147
2018 – 201
2019 – 140
2020 – 167
2021 – 136