Advertisement
ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ವಾಯು ವಿಹಾರಿಗಳಿಗೆ ಆಹ್ಲಾದಕರ ವಾತಾವರಣ ಕಲ್ಪಿಸುತ್ತಿರುವ ಕೆರೆ, ತನ್ನ ಅಚ್ಚುಕಟ್ಟು ಪ್ರದೇ ಶದ ರೈತರ ಬೆಳೆಗೆ ಜೀವಾಳವಾಗಿದೆ. ಆದರೆ ಪಟ್ಟಣದ ಚರಂಡಿ ನೀರು ಕೆರೆಯನ್ನು ಸೇರು ತ್ತಿದ್ದು, ರೈತರು ಮತ್ತು ಸಾರ್ವಜನಿಕರನ್ನು ಚಿಂತೆಗೀಡು ಮಾಡಿದೆ. ಇಷ್ಟೇ ಅಲ್ಲದೆ ಕೋಳಿ ತ್ಯಾಜ್ಯ, ಕಟ್ಟಡಗಳ ಅನುಪಯುಕ್ತ ವಸ್ತುಗಳು, ಕಸ, ಒಣತ್ಯಾಜ್ಯ ಕೆರೆಯ ಬದಿಯಲ್ಲಿ ಶೇಖರಣೆಯಾಗುತ್ತಿದೆ.
Related Articles
Advertisement
ಅಕ್ರಮ ಒತ್ತುವರಿಯ ಭೂತ: ಇವೆಲ್ಲವು ಗಳೊಂದಿಗೆ ಅಕ್ರಮ ಒತ್ತುವರಿ ಭೂತ ಸಹ ಈ ಕೆರೆಯನ್ನು ಬಿಟ್ಟಿಲ್ಲ. ಕೆರೆಯ ಪೂರ್ವಕ್ಕೆ ಸಾಕಷ್ಟು ಒತ್ತುವರಿಯಾಗಿದ್ದು, ಅದನ್ನು ತೆರವುಗೊಳಿಸುವ ಕೆಲಸವೂ ಸಹ ಇದು ವರೆಗೆ ಆಗಿಲ್ಲ. ಇದೇ ಭಾಗದಲ್ಲಿ ಕೆರೆಯ ಅಂಗಳದಲ್ಲೇ ಮುಳ್ಳಿನ ಪೊದೆಗಳು ಬೆಳೆದು ಕೊಂಡಿದ್ದು, ಬಳ್ಳಿಗಳು ನೀರಿನೊಳಗೆ ಸೇರಿ ಕೊಂಡು ನೀರು ಕೊಳೆಯಲು ಅನುವು ಮಾಡಿಕೊಡುತ್ತಿವೆ.
ಕೆರೆಯ ಸುತ್ತಮುತ್ತಲ ಪ್ರದೇಶ, ಏರಿ, ತೂಬು, ನೀರು ಹರಿಯುವ ಕಾಲುವೆ ಹೀಗೆ ಸಂಬಂಧಿಸಿದ ಎಲ್ಲ ಕಾರ್ಯಗಳ ನಿರ್ವಹಣೆ ಮಾಡುವ ಜವಾಬ್ದಾರಿ ಹೊತ್ತಿರುವ ಸಣ್ಣ ನೀರಾವರಿ ಇಲಾಖೆ ತಾಲೂಕಿನ ಕೆರೆಗಳಗೂ ತನಗೂ ಸಂಬಂಧವೇ ಇಲ್ಲ ಎನ್ನುವಂತೆ ಸುಮ್ಮನಿದೆ. ಪ್ರತಿ ಕೆರೆಗಳ ಬಳಿಯಲ್ಲೂ ಒಂದಲ್ಲಾ ಒಂದು ಸಮಸ್ಯೆ ಇದ್ದೇ ಇವೆ. ಯಾವುದನ್ನೂ ಸರಿಪಡಿಸುವ ಗೋಜಿಗೆ ಇಲಾಖೆ ಹೋಗಿಲ್ಲ.
ಅನಾಹುತ ಸಂಭವಿಸಿದರೆ ಬರುವ ಅಕಾರಿಗಳು ಸುಸ್ಥಿತಿಯಲ್ಲಿದ್ದಾಗ ನಿರ್ವಹಣೆ ಮಾಡಿದರೆ ಇದಾಗುತ್ತಿರಲಿಲ್ಲ ಎನ್ನುವ ಆಲೋಚನೆಯನ್ನೂ ಮಾಡುತ್ತಿಲ್ಲ. ಹಾಗೆಯೇ ತನ್ನ ವ್ಯಾಪ್ತಿಯ ಕಲುಷಿತ ನೀರನ್ನು ಕೆರೆಗೆ ಬಿಡುತ್ತಿರುವ, ಪಟ್ಟಣದ ತ್ಯಾಜ್ಯವನ್ನು ಅವಕಾಶ ಮಾಡಿಕೊಟ್ಟಿರುವ ನಗರಸಭೆಯೂ ಸಹ ಕೆರೆಯ ಬಗ್ಗೆ ಆಲೋಚನೆ ಮಾಡುತ್ತಿಲ್ಲ. ಇನ್ನು ತಿಟ್ಟಮಾರನಹಳ್ಳಿ ಗ್ರಾಮ ಪಂಚಾಯಿತಿಯೂ ಎರಡೂ ಇಲಾಖೆಗಳಿಗೆ ಕೆರೆಯ ಸಮಸ್ಯೆ ಸರಿಪಡಿಸುವಂತೆ ತಿಳಿಸುವ ಕೆಲಸವನ್ನೂ ಮಾಡಿಲ್ಲ. ಇದರಿಂದಾಗಿಯೇ ಕೆರೆ ಸಮಸ್ಯೆ ಗಳನ್ನು ಹೊದ್ದಿಕೊಂಡು ಮೂಕರೋಧನೆ ಅನುಭವಿಸುತ್ತಿದೆ. ಇನ್ನಾದರೂ ಸಂಬಂಧ ಪಟ್ಟವರು ಕೆರೆಯ ನಿರ್ವಹಣೆ ಮಾಡಿ, ಅಸ್ತಿತ್ವವನ್ನು ಉಳಿಸಲು ಮುಂದಾಗಬೇಕಿದೆ.
ಎಂ.ಶಿವಮಾದು