Advertisement

ದಶಕದಿಂದಲೂ ಅಭಿವೃದ್ಧಿ ಕಾಣದ ರಥಬೀದಿ ಅಡ್ಡರಸ್ತೆ

12:38 AM Feb 01, 2020 | Sriram |

ಗಂಗೊಳ್ಳಿ: ಇಲ್ಲಿನ ಮ್ಯಾಂಗನೀಸ್‌ ವಾರ್ಫ್‌ ಪ್ರದೇಶದಿಂದ ರಥಬೀದಿಗೆ ತೆರಳುವ ರಥಬೀದಿ ಅಡ್ಡರಸ್ತೆ ದುರಸ್ತಿಯಾಗದೇ ಸರಿ ಸುಮಾರು 15 ವರ್ಷಗಳಿಗೂ ಹೆಚ್ಚು ಕಾಲ ಕಳೆದಿದೆ. ದಶಕಕ್ಕೂ ಹೆಚ್ಚು ಕಾಲದಿಂದ ಸುಮಾರು 300ರಿಂದ 400 ಮೀ. ದೂರದ ಈ ರಸ್ತೆಯ ಡಾಮರೆಲ್ಲ ಕಿತ್ತು ಹೋಗಿದೆ.ಗಂಗೊಳ್ಳಿ ಗ್ರಾಮ ಪಂಚಾಯತ್‌ನ ಐದನೇ ವಾರ್ಡಿನಲ್ಲಿ ಬರುವ ರಸ್ತೆ ಇದಾಗಿದ್ದು, ಮೀನುಗಾರರ ಸಹಿತ ನೂರಾರು ಮಂದಿ ಈ ರಸ್ತೆಯನ್ನು ಆಶ್ರಯಿಸಿದ್ದಾರೆ. ಪ್ರತಿ ನಿತ್ಯ 300ಕ್ಕೂ ಮಿಕ್ಕಿ ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತವೆ.

Advertisement

ಮ್ಯಾಂಗನೀಸ್‌
ವಾರ್ಫ್‌ನಿಂದ ಗಂಗೊಳ್ಳಿ ಬಂದರು, ಪ್ರಾಥಮಿಕ ಆರೋಗ್ಯ ಕೇಂದ್ರ, ದೇವಸ್ಥಾನಕ್ಕೆ ಹೋಗಲು ಇದು ಹತ್ತಿರದ ಮಾರ್ಗವಾಗಿದೆ.

ಚರಂಡಿಯೇ ಇಲ್ಲ
ಮ್ಯಾಂಗನೀಸ್‌ ವಾರ್ಫ್‌ನಿಂದ ರಥಬೀದಿಯವರೆಗೆ ಸುಮಾರು 400 ಮೀ. ದೂರವಿದೆ. ಚಿಕ್ಕ ರಸ್ತೆಯಾಗಿದ್ದರೂ, ದುರಸ್ತಿಗೆ ಮಾತ್ರ ಮೀನಮೇಷ ಎಣಿಸಲಾಗು ತ್ತಿದೆ. ಇನ್ನು ಈ ರಸ್ತೆಯ ಎರಡು ಕಡೆಯಿಂದಲೂ ಚರಂಡಿಯೇ ಇಲ್ಲ. ಮಳೆ ನೀರು ರಸ್ತೆಯಲ್ಲೇ ಹರಿದು ಹೋಗುತ್ತಿದೆ. ಈ ರಸ್ತೆಯು ಈ ಪ್ರಮಾಣದಲ್ಲಿ ಹೊಂಡ – ಗುಂಡಿ ಬೀಳಲು ಚರಂಡಿಯಿಲ್ಲದ್ದೇ ಪ್ರಮುಖ ಕಾರಣ ಎನ್ನವುದು ಗ್ರಾಮಸ್ಥರ ಆರೋಪ.

ಶೀಘ್ರ ಟೆಂಡರ್‌
ಗಂಗೊಳ್ಳಿ ಗ್ರಾ.ಪಂ. ವ್ಯಾಪ್ತಿಯ ರಥಬೀದಿ ಅಡ್ಡ ರಸ್ತೆ, ಬೆಲೆಕೇರಿ ರಸ್ತೆ ಹಾಗೂ ಗುಡ್ಡೆಕೇರಿ ರಸ್ತೆ ಒಟ್ಟು 3 ರಸ್ತೆಗಳಿಗೆ ಶಾಸಕ ಬಿ.ಎಂ. ಸುಕುಮಾರ್‌ ಶೆಟ್ಟರ ನಿಧಿಯಿಂದ ಅನುದಾನ ಮಂಜೂರಾಗಿದೆ. ಫೆಬ್ರವರಿಯಲ್ಲಿ ಟೆಂಡರ್‌ ಪ್ರಕ್ರಿಯೆ ನಡೆಯಲಿದ್ದು, ಶೀಘ್ರ ಮರು ಡಾಮರೀಕರಣ ಕಾಮಗಾರಿ ನಡೆಯಲಿದೆ.
-ಶ್ರೀನಿವಾಸ ಖಾರ್ವಿ,ಅಧ್ಯಕ್ಷರು,
ಗಂಗೊಳ್ಳಿ ಗ್ರಾ.ಪಂ.

ದುರಸ್ತಿಯೇ ಆಗಿಲ್ಲ
ನಾವು ಇಲ್ಲಿಗೆ 1996ರಲ್ಲಿ ಬಂದಿದ್ದು ಆಲ್ಲಿಂದ ಇಲ್ಲಿಯವರೆಗೆ ಈ ರಸ್ತೆಯನ್ನು ಅಭಿವೃದ್ಧಿಪಡಿಸಿಲ್ಲ. ಅಂದರೆ ಕಳೆದ 24 ವರ್ಷಗಳಿಂದ ಈ ರಸ್ತೆಯ ದುರಸ್ತಿಯೇ ಆಗಿಲ್ಲ. ತುಂಬಾ ನಿರ್ಲಕ್ಷé ವಹಿಸಲಾಗಿದೆ. ಈ ಬಾರಿ ಅನುದಾನ ಮಂಜೂರಾಗಿದೆ ಎನ್ನುವ ಮಾಹಿತಿಯಿದೆ.
-ವೈಕುಂಠ ಖಾರ್ವಿ, ಸ್ಥಳೀಯರು

Advertisement
Advertisement

Udayavani is now on Telegram. Click here to join our channel and stay updated with the latest news.

Next