ಮಕ್ಕಳು ಸರ್ಕಾರಿ ಶಾಲೆಗೆ ಬರದಂತಾಗಿದೆ. ಈ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದು, ಮುಂಬರುವ ದಿನಗಳಲ್ಲಿ ಯೋಜನೆ ಕುರಿತು ಪರಿಶೀಲನೆ ನಡೆಸುವುದಾಗಿ ತಿಳಿಸಿದ್ದಾರೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ| ಶಾಲಿನಿ ರಜನೀಶ ಹೇಳಿದರು.
Advertisement
ರವಿವಾರ ಪ್ರವಾಸಿ ಮಂದಿರದಲ್ಲಿ ಇಲಾಖಾ ಅಧಿಕಾರಿಗಳೊಂದಿಗೆ ಸಭೆ ಕೈಗೊಂಡ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಅನೇಕ ಶಾಲೆಯಲ್ಲಿ 25ಕ್ಕಿಂತ ಕಡಿಮೆ ಮಕ್ಕಳಿರುವ ಶಾಲೆಗಳಿವೆ. ಅವುಗಳಿಗೆ ಮಕ್ಕಳನ್ನು ಸೇರ್ಪಡೆ ಮಾಡಿಸಲು ಅ ಧಿಕಾರಿಗಳಿಗೆ ಹಾಗೂ ಶಿಕ್ಷಕರಿಗೆ ಸೂಚಿಸಲಾಗಿದೆ. ಇದಲ್ಲದೆ, ಶಾಲಾ ಆವರಣದಲ್ಲೇ ಕಡ್ಡಾಯವಾಗಿ ಅಂಗನವಾಡಿ ಶಾಲೆ ನಡೆಸುವುದರಿಂದ ಮಕ್ಕಳಿಗೆ ಶಾಲಾ ಪರಿಸರ ಒದಗಿಸುವ ಜೊತೆಗೆ ಎಲ್‌ಕೆಜಿ ಹಾಗೂ ಯುಕೆಜಿ ಸೇರ್ಪಡೆಗೆ ಅನುಕೂಲವಾಗಲಿದೆ ಎಂದರು.
ಪಡೆದು ಕ್ರಮ ಕೈಗೊಳ್ಳಲಾಗುವುದು. ಕೇವಲ ಈ ಗ್ರಾಮ ಮಾತ್ರವಲ್ಲ ರಾಜ್ಯದ ಯಾವುದೇ ಪ್ರದೇಶದಲ್ಲಿ ಈ ರೀತಿಯ ಶಾಲೆಗಳನ್ನು ಆರಂಭಿಸಿದ್ದರೆ, ಅನುಮತಿ ಪಡೆದವರ ಪತ್ತೆಗಾಗಿ ಅಧಿಕಾರಿಗಳಿಗೆ ಒಂದು ತಿಂಗಳು ಗಡುವು ನೀಡುತ್ತೇನೆ. ಅಂತಹ ಶಾಲೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು. ಮೂಲ ಸೌಕರ್ಯಗಳಿಲ್ಲದ ಖಾಸಗಿ ಶಾಲೆಗಳ ಪಟ್ಟಿ ಸಿದ್ಧಪಡಿಸಿ ತಿಂಗಳೊಳಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗುವುದು. ಸರಕಾರಿ ಶಾಲೆಯ ಒಂದು ಕಿ.ಮೀ.ವ್ಯಾಪ್ತಿಯ ಖಾಸಗಿ ಶಾಲೆಗಳಿಗೆ ಅನುಮತಿ ನೀಡಬಾರದು. ಇದರೊಂದಿಗೆ ಇಲಾಖೆ ನಿಯಮ ಪ್ರಕಾರ ಸೌಲಭ್ಯ ಹೊಂದಿರುವ ಖಾಸಗಿ ಶಾಲೆಗಳಿಗೆ ಪರವಾನಗಿ ನೀಡಬೇಕೆಂಬ ನಿಯಮವಿದೆ. ಇಷ್ಟಿದ್ದರೂ ಸಹ ನಿಯಮ ಮೀರಿ ಶಾಲೆಗಳು ಆರಂಭವಾಗಿವೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಕೊರತೆಗೆ ಇದೂ ಒಂದು ಕಾರಣವಾಗಿದೆ. ಹೀಗಾಗಿ ನಿಯಮ ಬಾಹೀರ ಶಾಲೆಗಳ ಬಗ್ಗೆ ಅಧಿಕಾರಿಗಳು ಒಂದು ತಿಂಗಳೊಳಗೆ ಪಟ್ಟಿ ಸಿದ್ಧ
ಮಾಡಿ ಕ್ರಮ ಕೈಗೊಳ್ಳಲು ಇಲಾಖೆ ಅಪರ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ, ಡಿಡಿಪಿಐ ಎನ್. ಎಚ್. ನಾಗೂರ ಅವರಿಗೆ ಸೂಚಿಸಿದ್ದೇನೆ ಎಂದರು.
Related Articles
Advertisement
ಆಸಕ್ತರಿಗೆ ಕ್ರೀಡಾ ತರಬೇತಿ: ಸರ್ಕಾರಿ ಕ್ರೀಡಾ ನೀತಿ ಜಾರಿ ನಂತರ ರಾಜ್ಯದಲ್ಲಿನ ಕ್ರೀಡಾ ಅಸೋಸಿಯೇಶನ್‌ಗಳ ಸಹಕಾರದಿಂದ ಆಸಕ್ತ ವಿದ್ಯಾರ್ಥಿಗಳಿಗೆ ಕ್ರೀಡಾ ತರಬೇತಿ ನೀಡಲಾಗುತ್ತಿದೆ. ಜಿಂದಾಲ್ ಸ್ಟೀಲ್ ಕಂಪನಿಯವರು ರಾಜ್ಯದ 250 ಮಕ್ಕಳಿಗೆ ವಸತಿಯುತ ಕ್ರೀಡಾ ತರಬೇತಿ ನೀಡುತ್ತಿದ್ದು, ಈ ಪೈಕಿ ಸರ್ಕಾರಿ ಶಾಲೆಯ 125 ಮಕ್ಕಳಿದ್ದಾರೆ. ಅವರನ್ನು ಓಲಿಂಪಿಕ್ ಕ್ರೀಡೆಯಲ್ಲಿ ಭಾಗವಹಿಸುವಂತೆ ಸಜ್ಜುಗೊಳಿಸಲಾಗುತ್ತಿದೆ. ಇದಲ್ಲದೆ, 35 ಕಂಪನಿಯ ಜೊತೆಗೆ ಒಡಂಬಡಿಕೆ ಮಾಡಿಕೊಂಡು ಸರಕಾರಿ ಶಾಲೆಯ ಗುಣಮಟ್ಟ ಹೆಚ್ಚಿಸಲು ಹಾಗೂ ಸೌಕರ್ಯ ಒದಗಿಸಲು ಮುಂದಾಗಿದ್ದೇವೆ ಎಂದರು.
“ಜೀವನ ಶಿಕ್ಷಣ’ ಅನುದಾನಕ್ಕೆ ಪ್ರಸ್ತಾವನೆ: ಡಯಟ್ ಸಂಸ್ಥೆಯಲ್ಲಿ 1985ರಲ್ಲಿ ಆರಂಭವಾದ ಜೀವನ ಶಿಕ್ಷಣ ಪತ್ರಿಕೆ ಉಳಿಸುವ ಹಿನ್ನೆಲೆಯಲ್ಲಿ 25 ಲಕ್ಷ ರೂ. ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಈ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ. ಮುಂದಿನ ಬಜೆಟ್‌ನಲ್ಲಿ ಅನುದಾನ ದೊರಕಿಸುವ ವ್ಯವಸ್ಥೆ ಮಾಡಲಾಗುವುದು. ಇದಲ್ಲದೇ ಶಿಕ್ಷಕರು ನಿತ್ಯ ತಮ್ಮ ಕೆಲಸದ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ನಮೂದಿಸಲು ಕಷ್ಟವಾಗುತ್ತಿರುವ ಕಾರಣದಿಂದ ಪ್ರತಿ ಶಾಲೆಗೆ ಒಂದು ಟ್ಯಾಬ್ ನೀಡಲು ಚಿಂತಿಸಲಾಗಿದೆ ಎಂದರು.
ಶಿಕ್ಷಣ ಇಲಾಖೆ ಅಪರ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಮಾತನಾಡಿ, ಮೂಲ ಸೌಕರ್ಯಗಳು ಇಲ್ಲದ ಖಾಸಗಿ ಶಾಲೆಗಳಿಗೆ ಕಾನೂನುಪ್ರಕಾರ ಅವಕಾಶ ಇಲ್ಲ. ಆದರೆ ನಮ್ಮ ಕಣ್ಣಿಗೆ ಮಣ್ಣೆರಚಿ ಶಾಲೆ ಆರಂಭಿಸಿರುವ ಬಗ್ಗೆ ಮಾಹಿತಿ ಲಭ್ಯವಿದ್ದು, ಈಗಾಗಲೇ ನಮ್ಮ ಅಧಿಕಾರಿಗಳು ಅಂತಹ ಶಾಲೆ ಗುರುತಿಸಿದ್ದಾರೆ. ಅಂತಹ ಶಾಲೆಗಳನ್ನು ಗುರುತಿಸಿ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು. ಹಿರಿಯ ಅಧಿಕಾರಿಗಳಾದ ಡಾ|ಬಿ.ಕೆ.ಎಸ್. ವರ್ಧನ್, ಡಿಡಿಪಿಐ ಎನ್.ಎಚ್. ನಾಗೂರ, ಅಧಿಕಾರಿಗಳಾದ ಎಸ್.ಎಂ. ಹುಡೇದಮನಿ, ಸುಮಂಗಲಾ,
ಕೆ.ಎಂ.ಶೇಖ್, ಮೋಹನಕುಮಾರ ಹಂಚಾಟೆ, ಗುರುಮೂರ್ತಿ ಯರಗಂಬಳಿಮಠ, ಬಸವರಾಜ ವಾಸನದ, ಎಸ್.ಪಿ. ಹಿರೇಮಠ ಇದ್ದರು.