Advertisement

450ಕ್ಕೂ ಹೆಚ್ಚು ಮದ್ಯದಂಗಡಿ ಬಂದ್‌: ಪಂಜಾಬ್‌ ಸರಕಾರ 

03:50 AM Mar 19, 2017 | Team Udayavani |

ಚಂಡಿಗಢ: ಚುನಾವಣಾ ಪೂರ್ವ ಆಶ್ವಾಸನೆ ಯಂತೆ ಪಂಜಾಬ್‌ನಲ್ಲಿ ಕಾಂಗ್ರೆಸ್‌ ಸರಕಾರವು ಮದ್ಯದಂಗಡಿಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ. ರಾಜ್ಯದಾದ್ಯಂತ ಸುಮಾರು 450ಕ್ಕೂ ಹೆಚ್ಚು ಮದ್ಯದಂಗಡಿಗಳನ್ನು ಮುಚ್ಚಿ­ಸುವುದಾಗಿ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ನೇತೃತ್ವದ ಸರಕಾರ ನಿರ್ಧರಿಸಿದೆ. ಸರಕಾರ ತನ್ನ ಹೊಸ ಅಬಕಾರಿ ನೀತಿ 2017-18ರ ಅಡಿಯಲ್ಲಿ ಮದ್ಯ ಕೋಟಾ ರದ್ದು ಮಾಡು­ವುದಾಗಿ ಹಾಗೂ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಯ ಅಕ್ಕಪಕ್ಕ 500 ಅಡಿಗಳ ಒಳಗೆ ಮದ್ಯ ಮಾರಾಟ ನಿಷೇಧಿ­ಸುವುದಾಗಿ ಮೊದಲ ಸಂಪುಟ ಸಭೆಯಲ್ಲಿ ಘೋಷಿಸಿದೆ. ಸಭೆಯಲ್ಲಿ 100ಕ್ಕೂ ಹೆಚ್ಚು ನಿರ್ಧಾರ ಕೈಗೊಳ್ಳಲಾಗಿದೆ.

Advertisement

ಡ್ರಗ್‌ ಮಾಫಿಯಾ ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ವಿಶೇಷ ಕಾರ್ಯಪಡೆ, ಇನ್‌ಸ್ಪೆಕ್ಟರ್‌ ರಾಜ್‌ ಹಾಗೂ ವಿಐಪಿ ಸಂಸ್ಕೃತಿಯ ನಿರ್ಮೂಲನೆ, ಕೃಷಿ ಸಾಲ ಮನ್ನಾ, ಶಿಕ್ಷಣ ಮತ್ತು ಆರೋಗ್ಯ ಸುಧಾರಣೆ, ಉದ್ಯೋಗ ಸೃಷ್ಟಿ, ದಲಿತರು ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ವಿವಿಧ ಅನುಕೂಲಗಳನ್ನು ಕಲ್ಪಿಸುವ ಕುರಿತೂ ನಿರ್ಣಯ ಕೈಗೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next