ಶಿವಮೊಗ್ಗ: ಹೊಸ ನೀರಿನ ಹರಿವು ಶುರುವಾಗಿದೆ. ಆಪರೇಷನ್ ಮಾಡುವ ಅವಶ್ಯಕತೆ ಇಲ್ಲ. ಈ ಸರ್ಕಾರದಲ್ಲಿ ಅಬಾರ್ಷನ್ ಆಗುವಂತಹ ಲಕ್ಷಣಗಳು ಹೆಚ್ಚಿಗೆ ಕಾಣುತ್ತಿದೆ. ಆಪರೇಷನ್ ಮಾಡುವ ಅವಶ್ಯಕತೆ ಇಲ್ಲ. ಬರುವ ದಿನಗಳಲ್ಲಿ ಕಾದು ನೋಡಿ ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರಗಾಲದಲ್ಲಿ ಗ್ಯಾರಂಟಿ ಒಂದೇ ಹೇಳುತ್ತಿದ್ದಾರೆ. ರೈತರು ಕಣ್ಣಿರಲ್ಲಿ ಕೈ ತೊಳೆಯುತ್ತಿದ್ದಾರೆ. ಲೋಕಸಭಾ ಚುನಾವಣೆಗಾಗಿ ಜನ ಕಾಯುತ್ತಿದ್ದಾರೆ. ಅವರು ಈಗ ಕೊಡುತ್ತಿರುವ ಕಾರ್ಯಕ್ರಮಗಳು ಅಷ್ಟು ಸುಲಭವಾಗಿ ಮುಂದುವರಿಸಿಕೊಂಡು ಹೋಗಲ್ಲ. ಗ್ಯಾರಂಟಿ ಕಾರ್ಯಕ್ರಮಗಳು ಲೋಕಸಭಾ ಚುನಾವಣೆವರೆಗೂ ಮಾತ್ರ ಎಂದರು.
ರಾಷ್ಟ್ರದಲ್ಲಿ ಒಳ್ಳೆಯ ಬೆಳವಣಿಗೆಯಾಗುತ್ತಿದೆ. ಮಮತಾ ಬ್ಯಾನರ್ಜಿಯವರು ಸಹ ಇಂಡಿಯಾ ಒಕ್ಕೂಟದಿಂದ ಹೊರ ಬಂದಿದ್ದಾರೆ. ರಾಮ ಮಂದಿರ ಲೋಕಾರ್ಪಣೆ ಆಗಿರುವುದು ದೇಶದ ಭವಿಷ್ಯದಿಂದ ಒಳ್ಳೆಯದಾಗಿದೆ. ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧವಾಗಿ ಕಂಡು ಬಂದಿದೆ. ಇಂಡಿಯಾ ಒಕ್ಕೂಟ ಛಿದ್ರವಾಗಿದೆ. 400 ಕ್ಕಿಂತ ಹೆಚ್ಚಿನ ಲೋಕಸಭಾ ಕ್ಷೇತ್ರದಲ್ಲಿ ನಾವು ಗೆಲ್ಲುತ್ತೇವೆ. ನಾವು ಹೇಳಿದಂತೆ ನಡೆದುಕೊಂಡಿದ್ದೇವೆ ಎಂದರು.
ಆಶೀರ್ವಾದ ಮಾಡಿದ್ದಾರೆ: ಧಾರ್ಮಿಕ ಸಭೆಯಲ್ಲಿ ನಮ್ಮ ಸಮಾಜದ ಹಿರಿಯರು ಶಿವಮೊಗ್ಗದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯ ನೋಡಿ ಹೇಳಿಕೆ ನೀಡಿದ್ದಾರೆ. ಆಶೀರ್ವಾದ ಮಾಡುವ ಕೆಲಸ ಮಾಡಿದ್ದಾರೆ. ರಾಜಕೀಯವಾಗಿ ಬೇರೆ ಪಕ್ಷದಲ್ಲಿ ಇದ್ದರೂ ನೇರವಾಗಿ ಮಾತನಾಡಿದ್ದಾರೆ. ಇದು ನನ್ನ ಪೂರ್ವ ಜನ್ಮದ ಫಲ. ನಾನು ಅರ್ಥ ಮಾಡಿಕೊಂಡಿದ್ದು ಏನೆಂದರೆ ಯಾವುದೇ ವ್ಯಕ್ತಿ ಯಾವುದೇ ಪಕ್ಷ ಆದರೂ ಅವರು ಮಾಡಿದ ಒಳ್ಳೆ ಕೆಲಸ ನೋಡಿ ಸ್ಮರಣೆ ಮಾಡಬೇಕು. ಶಾಮನೂರು ಅವರು ನೇರ ನುಡಿಗೆ ಹೆಸರಾದವರು. ಎಲ್ಲರ ಅಪೇಕ್ಷೆಯಂತೆ ಕ್ಷೇತ್ರದಲ್ಲಿ ಇನ್ನೂ ಹೆಚ್ಚು ಅಭಿವೃದ್ಧಿ ಮಾಡುತ್ತೇನೆ. ಕಾಂಗ್ರೆಸ್ ಶಾಸಕರು ಎನ್ನುವುದಕ್ಕಿಂತ ಒಳ್ಳೆಯ ಕೆಲಸಕ್ಕೆ ಒಳ್ಳೆಯದನ್ನ ಮಾತನಾಡಿದ್ದಾರೆ. ಇದರಲ್ಲಿ ಕಾಂಗ್ರೆಸ್ ಬಿಜೆಪಿ ಎಂದು ಅನಿಸಲ್ಲ ನನಗೆ ಎಂದು ರಾಘವೇಂದ್ರ ಹೇಳಿದರು.