Advertisement

ಗಣರಾಜ್ಯದಿನಕ್ಕೆ ಇವೆ ಹಲವು ಪ್ರಥಮಗಳು

12:19 AM Jan 25, 2023 | Team Udayavani |

74ನೇ ಗಣರಾಜ್ಯೋತ್ಸವದ ಅದ್ದೂರಿ ಆಚರಣೆಗೆ ದೇಶ ಸಿದ್ಧಗೊಳ್ಳುತ್ತಿದೆ. ಈ ಬಾರಿ ಹಲವು ಪ್ರಥಮಗಳು ಇರಲಿವೆ. ಗನ್‌ ಸೆಲ್ಯೂಟ್‌ಗೆ ಬ್ರಿಟಿಷರ ಕಾಲದ ಗನ್‌ ಬದಲಾಗಿ ದೇಶೀಯವಾಗಿ ನಿರ್ಮಾಣಗೊಂಡ ಇಂಡಿಯನ್‌ ಫೀಲ್ಡ್‌ ಗನ್‌ಗಳನ್ನು ಬಳಕೆ ಮಾಡಲಾಗುತ್ತದೆ.

Advertisement

ಇದೆಲ್ಲಾ ಮೊದಲು
* ಗಣರಾಜ್ಯೋತ್ಸವ ಪರೇಡ್‌ನ‌ಲ್ಲಿ ಅಗ್ನಿವೀರರ ಮೊದಲ ತಂಡ
* ಒಂಟೆಗಳ ತುಕಡಿಯ ಭಾಗವಾಗಿ ಮಹಿಳಾ ಯೋಧರು
* ನೌಕಾ ತುಕಡಿಗೆ ಮಂಗಳೂರಿನ ದಿಶಾ ಅಮೃತ್‌ ನೇತೃತ್ವ

ಮೊದಲ ಮತ್ತು ಕೊನೆಯ ಹಾರಾಟ !
4 ದಶಕಗಳಿಂದ ನೌಕಾಪಡೆಗೆ ಸೇವೆ ಸಲ್ಲಿಸಿದ್ದ ಐಎಲ್‌-38 ವಿಮಾನವು ಇದೇ ಮೊದಲಬಾರಿಗೆ ಗಣರಾಜ್ಯೋತ್ಸವ ಸಮಾರಂಭದಲ್ಲಿ ಹಾರಾಟ ನಡೆಸುತ್ತಿದ್ದು, ಆ ಬಳಿಕ ವಿಮಾನ ನಿವೃತ್ತಿಗೊಳ್ಳಲಿದೆ.

21-ಗನ್‌ ಸಲ್ಯೂಟ್‌ ಬದಲು
ದೇಶದ ಮೊದಲ ಪ್ರಜೆ ರಾಷ್ಟಪತಿ ಹಾಗೂ ಧ್ವಜಕ್ಕೆ ಗೌರವ ಸಲ್ಲಿಸುವ ರಾಷ್ಟ್ರೀಯ ಸಲ್ಯೂಟ್‌ನಲ್ಲಿ ಇದೇ ಮೊದಲ ಬಾರಿಗೆ ಬದಲಾವಣೆ ತರಲಾಗಿದೆ. ಬ್ರಿಟಿಷ್‌ ಕಾಲದಲ್ಲಿ ನಿಯೋಜನೆಗೊಂಡಿದ್ದ 25 ಪೌಂಡರ್‌ಗನ್‌ಗಳ ಬದಲಿಗೆ ಈ ಬಾರಿ ಸಲ್ಯೂಟ್‌ ಸಲ್ಲಿಸಲು ಭಾರತದ 105 ಎಂಎಂ ಇಂಡಿಯನ್‌ ಫೀಲ್ಡ್‌ ಗನ್‌ಗಳನ್ನು ಬಳಸಲಾಗುತ್ತಿದೆೆ. ಇದು ಆತ್ಮನಿರ್ಭರ ಭಾರತದ ಪ್ರತೀಕ.

ವಿದೇಶಿ ತುಕಡಿಯಾಗಿ ಈಜಿಪ್ಟ್
ಗಣರಾಜ್ಯೋತ್ಸವದ ಪರೇಡ್‌ನ‌ಲ್ಲಿ ವಿದೇಶಿ ತುಕಡಿಯಾಗಿ ಈಜಿಪ್ಟ್ ಸೇನೆ ಭಾಗವಹಿಸುತ್ತಿದ್ದು,120 ಮಂದಿಯ ತಂಡ ಸಿದ್ಧತೆ ನಡೆಸುತ್ತಿದೆ. ಪ್ರಮುಖ ಅತಿಥಿಗಳಾಗಿ ಈಜಿಪ್ಟ್ ನ‌ ಅಧ್ಯಕ್ಷ ಅಬ್ಧೆಲ್‌ಫ‌ತ್ತಾಹ್‌ ಎಲ್‌-ಸಿಸಿ ಭಾಗವಹಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next