Advertisement

ಸ್ಥಿರ ಠೇವಣಿಯ ಪ್ರಯೋಜನಗಳ ಬಗ್ಗೆ ನಿಮಗೆ ಎಷ್ಟು ಮಾಹಿತಿ ಇದೆ..?

08:20 PM Jul 04, 2021 | |

ನವ ದೆಹಲಿ : ಆದಾಯ ತೆರಿಗೆಯನ್ನು ಉಳಿಸಲು ಹಲವಾರು ಆಯ್ಕೆಗಳಿವೆ. ತೆರಿಗೆಯನ್ನು ಉಳಿಸಲು ಸ್ಥಿರ ಠೇವಣಿ ಕೂಡ ಉತ್ತಮ ಆಯ್ಕೆಯಾಗಿದೆ.

Advertisement

ಸ್ಥಿರ ಠೇವಣಿಗಳಲ್ಲಿ ತೆರಿಗೆ ಉಳಿತಾಯ ಪ್ರಯೋಜನಗಳು ಈಗ ಲಭ್ಯವಿದೆ. 5 ವರ್ಷಗಳವರೆಗೆ ಎಫ್‌ ಡಿ(ಫಿಕ್ಸಡ್ ಡೆಪಾಸಿಟ್) ಯಲ್ಲಿ ಆದಾಯ ತೆರಿಗೆ ವಿನಾಯಿತಿ ಲಭ್ಯವಿದೆ.

ಆದಾಗ್ಯೂ, ಎಲ್ಲಾ ಸ್ಥಿರ ಠೇವಣಿಗಳಲ್ಲಿ ಈ ಪ್ರಯೋಜನವು ಲಭ್ಯವಿಲ್ಲ. ಠೇವಣಿ ಮೊತ್ತದ ಜೊತೆಗೆ ಅದಕ್ಕೆ ಪಾವತಿಸಲಾಗುವ ಬಡ್ಡಿಗೂ ತೆರಿಗೆ ಇರದಿರುವುದು ವಿಶೇಷ.

ಇದನ್ನೂ ಓದಿ : ಶೃಂಗೇರಿ ಅಪ್ರಾಪ್ತೆ ಮೇಲೆ 42 ಕೀಚಕರಿಂದ ಅತ್ಯಾಚಾರ ಪ್ರಕರಣ:30 ಚಾರ್ಜ್‌ಶೀಟ್ ಸಲ್ಲಿಕೆ

ಎಫ್‌ ಡಿ ವಿರುದ್ಧ ಸಾಲದ ಸೌಲಭ್ಯವೂ ಲಭ್ಯವಿದೆ. ಇದರ ಮತ್ತೊಂದು ಮುಖ್ಯ ವಿಷಯವೆಂದರೆ ನಿಮ್ಮ ಅನುಕೂಲಕ್ಕೆ ಅನುಗುಣವಾಗಿ ಸಾಲವನ್ನು ಮರುಪಾವತಿಸಬಹುದು. ಎಫ್‌ ಡಿಯ ಒಟ್ಟು ಮೌಲ್ಯದ ಶೇಕಡಾ 90 ವರೆಗೆ ಸಾಲವನ್ನು ಪಡೆಯಬಹುದಾಗಿದೆ.

Advertisement

ಎಫ್‌ಡಿ ಮೇಲಿನ ಸಾಲದ ಬಡ್ಡಿದರವು ನಿಮ್ಮ ಹೂಡಿಕೆಯ ಮೇಲೆ ನೀವು ಪಡೆಯುವ ಬಡ್ಡಿಗಿಂತ  ಶೇಕಡಾ 1-2 ಹೆಚ್ಚಾಗಿದೆ. ಇದರರ್ಥ ನೀವು ಎಫ್‌ಡಿ ಮೇಲೆ ಶೇಕಡಾ 4 ಬಡ್ಡಿಯನ್ನು ಪಡೆಯುತ್ತಿದ್ದರೆ, ನೀವು ಪಡೆಯುವ ಸಾಲಕ್ಕೆ ಶೇಕಡಾ 5- 6 ಬಡ್ಡಿ ಪಾವತಿಸಬೇಕಾಗಬಹುದಾಗಿದೆ.

ಎಫ್‌ ಡಿಗಳೊಂದಿಗೆ ಲಿಕ್ವಿಡಿಟಿ ಸಹ ಬರುತ್ತದೆ. ಅಗತ್ಯವಿದ್ದರೆ, ನೀವು ಮುಕ್ತಾಯಗೊಳ್ಳುವ ಮೊದಲೇ ಹಿಂತೆಗೆದುಕೊಳ್ಳಬಹುದು. ಆದಾಗ್ಯೂ, ಹಾಗೆ ಮಾಡಲು ಬ್ಯಾಂಕ್ ನಿಮಗೆ ಕೆಲವು ಶುಲ್ಕಗಳನ್ನು ವಿಧಿಸಬಹುದು.

ಎಚ್‌ ಡಿ ಎಫ್‌ ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಡಿಸಿಬಿ ಬ್ಯಾಂಕ್ ಗ್ರಾಹಕರಿಗೆ ಸ್ಥಿರ ಠೇವಣಿಯೊಂದಿಗೆ ವಿಮೆಯನ್ನು ನೀಡುತ್ತಿವೆ. ಈ ಬ್ಯಾಂಕುಗಳಲ್ಲಿ ಎಫ್‌ಡಿ ಜೊತೆಗೆ ಆರೋಗ್ಯ ವಿಮೆಯೂ ಕೂಡ ಲಭ್ಯವಿದೆ.

ಇದನ್ನೂ ಓದಿ :  ಮದುವೆಯಿಂದ ಬಾಂಧವ್ಯ ಕೊನೆಗೊಳ್ಳುವ ಭೀತಿ : ಮನನೊಂದ ಅವಳಿ ಸಹೋದರಿಯರು ಆತ್ಮಹತ್ಯೆಗೆ ಶರಣು

Advertisement

Udayavani is now on Telegram. Click here to join our channel and stay updated with the latest news.

Next