Advertisement

ಮಹಿಳಾ ಸುರಕ್ಷೆಗಿದೆ ಹಲವು ಆ್ಯಪ್‌ಗಳು

10:14 AM Dec 09, 2019 | mahesh |

ಇತ್ತೀಚೆಗೆ ಮಹಿಳೆಯ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಸರಣಿ ಅತ್ಯಾಚಾರಗಳು, ಕಿರುಕುಳಗಳು, ಕಳ್ಳತನ ಮೊದಲಾದ ಸಮಸ್ಯೆಗಳನ್ನು ಮಹಿಳೆಯರು ಎದುರಿಸುತ್ತಿ ದ್ದಾರೆ. ಹೀಗಿರುವಾಗ ತಂತ್ರಜ್ಞಾನದಲ್ಲಿ ಇಂದು ಬದಲಾವಣೆಗಳು ಆಗುತ್ತಿದ್ದು, ಕೆಲವು ಆ್ಯಪ್‌ಗಳು ಮಹಿಳೆಯರಿಗಾಗಿಯೇ ಸಿದ್ಧಪಡಿಸಲಾಗಿದೆ. ನಮ್ಮಲ್ಲಿ ನೂರಾರು ಆ್ಯಪ್‌ಗಳಿದ್ದು, ಇಲ್ಲಿ ಕೆಲವು ಆ್ಯಪ್‌ಗ್ಳನ್ನು ಹೆಸರಿಸಲಾಗಿದೆ. ಬೇರೆ ಆ್ಯಪ್‌ಗ್ಳಿಗಾಗಿ ನೀವು ಗೂಗಲ್‌ ಪ್ಲೇಸ್ಟೋರ್‌ನಲ್ಲಿ ಹುಡುಕಬಹುದು.

Advertisement

ಮೈ ಸೇಫ್ಟಿ ಪಿನ್‌
“ಮೈ ಸೇಫ್ಟಿ ಪಿನ್‌’ ಗೂಗಲ್‌ ಮ್ಯಾಪ್‌ ಆಧಾರಿತ ಆ್ಯಪ್‌ ಆಗಿದೆ. ಬಳಕೆದಾರರು ತೆರಳಲು ಇಚ್ಛಿಸುವ ಪ್ರದೇಶದ ಸುರಕ್ಷತೆಯ ಬಗ್ಗೆ ಅಪ್ಲಿಕೇಷನ್‌ ಮಾಹಿತಿ ನೀಡುತ್ತದೆ. ಒಂದು ವೇಳೆ ಮ್ಯಾಪ್‌ನಲ್ಲಿ ಪ್ರದೇಶವು ಕೆಂಪು ವರ್ಣದ ಪಿನ್‌ನಲ್ಲಿ ಸೂಚಿಸಲ್ಪಟ್ಟರೆ ಆ ಪ್ರದೇಶವು ನಿಮಗೆ ಅಸುರಕ್ಷಿತವಾಗಿದೆ ಎಂದೂ, ಹಸುರು ವರ್ಣದ ಪಿನ್‌ನಲ್ಲಿ ಸೂಚಿಸಲ್ಪಟ್ಟರೆ ಸುರಕ್ಷಿತವಾಗಿದೆ ಎಂದರ್ಥ “ಸೇಫ್ ಪಿನ್‌’ ಮೂಲಕ ನೀವು ನಿರ್ದಿಷ್ಟ ಪ್ರದೇಶದ ಸಾರ್ವಜನಿಕ ಸೇವೆಯ ಬಗೆಗಿನ ಮಾಹಿತಿಯನ್ನು ಪಡೆದುಕೊಳ್ಳಬಹುದು. ನೆರೆಯ ಪೊಲೀಸ್‌ ಸ್ಟೇಷನ್‌, ಎಟಿಎಂ, ಕ್ಲಿನಿಕ್‌ ಮಾಹಿತಿ ಪಡೆದುಕೊಳ್ಳಬಹುದು. ಜಿಪಿಎಸ್‌ ಮೂಲಕ ನೀವು ಸೂಚಿಸುವ ವ್ಯಕ್ತಿಗಳಿಗೆ ನಿಮ್ಮ ರಿಯಲ್‌ ಟೈಮ್‌ ಲೊಕೇಶನ್‌ ಅನ್ನು ಈ ಆ್ಯಪ್‌ ಮೂಲಕ ಹಂಚಿಕೊಳ್ಳಬಹುದು.

ರಾಜ್ಯದ ಸುರಕ್ಷಾ ಆ್ಯಪ್‌
ನಾಗರಿಕರ ಸುರಕ್ಷತೆಗೆ ಕರ್ನಾಟಕ ಪೊಲೀಸ್‌ ಇಲಾಖೆ ಹೊರತಂದಿರುವ ಸುರಕ್ಷಾ ಆ್ಯಪ್‌ ಸಹಕಾರಿಯಾಗಿದೆ. “ಎಸ್‌ಒಎಸ್‌’ ಪ್ಯಾನಿಕ್‌ ಬಟನ್‌ ಒತ್ತಿದರೆ ಸಾಕು, ಪೊಲೀಸರಿಗೆ ಸಂದೇಶ ರವಾನೆಯಾಗುತ್ತದೆ. ಸ್ಮಾರ್ಟ್‌ಫೋನ್‌ನಿಂದ ಸಂದೇಶ ರವಾನೆಯಾಗಿರುವ ಸ್ಥಳದ ಜಿಪಿಎಸ್‌ ಲೊಕೇಷನ್‌ ಆಧರಿಸಿ 8 ನಿಮಿಷಗಳೊಳಗಾಗಿ ಪೊಲೀಸರು ಸೇವೆ ಒದಗಿಸುತ್ತಾರೆ.

ಬಳಕೆ ಹೇಗೆ?: ಆ್ಯಪ್‌ನಲ್ಲಿರುವ ಕೆಂಪು ಬಣ್ಣದ ಎಸ್‌ಒಎಸ್‌ ಪ್ಯಾನಿಕ್‌ ಬಟನ್‌ ಒತ್ತಿದಾಗ ಪೊಲೀಸ್‌ ಕಮಾಂಡ್‌ ಸೆಂಟರ್‌ಗೆ 7 ಸೆಕೆಂಡ್‌ಗಳಲ್ಲಿ ಮಾಹಿತಿ ಲಭ್ಯವಾಗುತ್ತದೆ. ಅನಂತರ ಕೆಂಪು ಬಣ್ಣವಿದ್ದ ಪ್ಯಾನಿಕ್‌ ಬಟನ್‌ ಹಸುರು ಬಣ್ಣವಾಗಲಿದೆ. ಇದಾದ ನಂತರ ಕೆಲವೇ ಕ್ಷಣ ಮಾತನಾಡಲು ಅವಕಾಶ ಸಿಗುತ್ತದೆ. ಮಾತನಾಡಲು ಆಗದೆ ಇದ್ದಾಗ ತತ್‌ಕ್ಷಣ ಪೊಲೀಸರು ಕರೆ ಮಾಡುತ್ತಾರೆ. ಆಗಲೂ ಮಾತನಾಡಲು ಸಾಧ್ಯವಾಗದೆ ಇದ್ದಾಗ ಆಪ್‌ನಲ್ಲಿರುವ ಕೆಮರಾ ತನ್ನಿಂದ ತಾನೇ ಚಾಲನೆಯಾಗಿ ಸುತ್ತಮುತ್ತಲಿನ ದೃಶ್ಯವನ್ನು ಸೆರೆಹಿಡಿದು ಕಮಾಂಡ್‌ ಸೆಂಟರ್‌ಗೆ ರವಾನೆಯಾಗುತ್ತದೆ. ಮೊಬೈಲ್‌ ಜಿಪಿಎಸ್‌ ಆಧರಿಸಿ ಹತ್ತಿರದ ಹೊಯ್ಸಳ ಸಿಬಂದಿಗೆ ದೂರು ವರ್ಗಾವಣೆ ಆಗುತ್ತದೆ. 9 ನಿಮಿಷಗಳಲ್ಲಿ ಸ್ಥಳಕ್ಕೆ ಬಂದು ರಕ್ಷಣೆ ಮಾಡಲಿದ್ದಾರೆ.

ಗೂಗಲ್‌ ಸಹಾಯ
ಗೂಗಲ್‌ ಫ್ಯಾಮಿಲಿ ಲಿಂಕ್‌ ಆ್ಯಪ್‌ ಅನ್ನು ಗೂಗಲ್‌ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಒಬ್ಬರ ಸ್ಮಾರ್ಟ್‌ಫೋನ್‌ನಲ್ಲಿ ಫ್ಯಾಮಿಲಿ ಲಿಂಕ್‌ ಮತ್ತು ಮತ್ತೂಬ್ಬರ ಫೋನ್‌ನಲ್ಲಿ ಫ್ಯಾಮಿಲಿ ಲಿಂಕ್‌ ಫಾರ್‌ ಚಿಲ್ಡ್ರನ್ಸ್‌ ಆ್ಯಂಡ್‌ ಟಿನೇಜರ್ ಅನ್ನು ಇನ್‌ಸ್ಟಾಲ್‌ ಮಾಡಬೇಕು.

Advertisement

ಖಾತೆ ತೆರೆಯುವುದು ಹೇಗೆ?
ಅವುಗಳಿಗೆ ಗೂಗಲ್‌ ಖಾತೆಯಲ್ಲಿ ಸೈನ್‌ ಇನ್‌ ಆಗಬೇಕು. ಹೆತ್ತವರು ಅವರ ಗೂಗಲ್‌ ಖಾತೆ ಮತ್ತು ಮಕ್ಕಳು ತಮ್ಮ ಗೂಗಲ್‌ ಖಾತೆಯಲ್ಲಿ ಸೈನ್‌ ಇನ್‌ ಆಗಬೇಕು. ಇದು ಲೊಕೇಶನ್‌ ಶೇರಿಂಗ್‌ ಮೂಲಕ ಫ್ಯಾಮಿಲಿ ಲಿಂಕ್‌ನಲ್ಲಿ ನಿಮ್ಮ ಮಗ/ಮಗಳು ಎಲ್ಲಿದ್ದಾರೆ ಎಂಬುದನ್ನು ಮನೆಯಿಂದಲೇ ನೋಡಬಹುದಾಗಿದೆ. ಇಂದು ಗೂಗಲ್‌ ಲೊಕೇಶನ್‌ ಟ್ರ್ಯಾಕರ್‌ ಸಹಾಯದೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದು ಅವರನ್ನು ಫಾಲೋ ಮಾಡಬಹುದಾಗಿದೆ. ಈ ಆ್ಯಪ್‌ನಲ್ಲಿ ದೊರೆಯುವ ಎಲ್ಲಾ ಫೀಚರ್‌ಗಳನ್ನು ನಾವು ವೆಬ್‌ ಬ್ರೌಸರ್‌ ಮೂಲಕವೂ ಬಳಸಬಹುದಾಗಿದೆ. ನಿಮ್ಮ ಲ್ಯಾಪ್‌ಟಾಪ್‌ ಅಥವ ಕಂಪ್ಯೂಟರ್‌ ಪರದೆಯ ಮೇಲೆ ನೀವು ಇದನ್ನು ಬಳಸಬಹುದು.

ಆಪ್ಟಿಸೇಫ
ಪರಿಚಯ ವಿಲ್ಲದ ಊರಿಗೆ ಪ್ರಯಾಣ, ಸುರಕ್ಷತೆಯ ಭಯ ಇರುವವರಿಗೆ ಆಪ್ಟಿಸೇಫ್ ಎಂಬ ತಂತ್ರಜ್ಞಾನ ಹೆಚ್ಚು ಅನುಕೂಲಕರವಾಗಿದೆ. ಈ ಉಪಕರಣದ ಮಾಹಿತಿ ಇಲ್ಲಿದೆ.

ಏನಿದು ಸಾಧನ?
Optisafe My Hero ಎಂಬ ಸಾಧನ ಇದಾಗಿದೆ. ಇದು ನಾವು ಅಪಾಯದಲ್ಲಿದ್ದಾಗ ನಮ್ಮ ಜತೆ ಯಾರೂ ಇರದಿದ್ದ ವೇಳೆ ನಮಗೆ ರಕ್ಷಣೆಯನ್ನು ಕೊಡಲು ನೆರವಾಗುತ್ತದೆ. ಸಣ್ಣ ಪೆನ್‌ ಮಾದರಿಯಲ್ಲಿರುವ ಸಾಧನ ಇದಾಗಿದ್ದು ನಮ್ಮ ಪ್ರಾಣಹಾನಿ ಅಥವ ಮಾನ ಹಾನಿಯಾಗುವ ಸಂದರ್ಭ ಎದುರಾದರೆ ರಕ್ಷಿಸುವ ಕಾರ್ಯ ಇದರದ್ದು.

ಹೇಗೆ?
· ಆಪ್ಟಿಸೇಫ್ ಸಾಧನಕ್ಕೆ ನಾವು ಸೇರಿಸಿದ 3 ಮಂದಿಯ ಫೋನ್‌ಗಳಿಗೆ ಅಪಾಯದ ಮುನ್ಸೂಚನೆ ನೀಡುವ ಸಂದೇಶ ಹೋಗುತ್ತದೆ. ಇದು ಅವರ ಫೋನ್‌ನಲ್ಲಿಯೂ ಸೈರನ್‌ ಉಂಟುಮಾಡುತ್ತದೆ.
· ಇದು ಗೂಗಲ್‌ ಲೈವ್‌ ಲೊಕೇಶನ್‌ ಅನ್ನು ಟ್ರ್ಯಾಕ್‌ ಮಾಡುತ್ತಾ ಇರುತ್ತದೆ. ನಾವು ಸೇರಿಸಿದ 3 ಮಂದಿಯ ಪೋನ್‌ಗಳಲ್ಲಿ ಇವರು ಅಪಾಯಕ್ಕೆ ಸಿಲುಕಿದ ಜಾಗದ ಗೂಗಲ್‌ ಲಿಂಕ್‌ ಓಪನ್‌ ಆಗುತ್ತದೆ.
· ವ್ಯಕ್ತಿ ಸಂದಿಗ್ನ ಪರಿಸ್ಥಿತಿಯನ್ನು ಎದುರಿಸುವ ವೇಳೆ ಅವನು ಆ ಬಟನ್‌ ಒತ್ತಿದ ಬಳಿಕ ಅದು ಬಳಕೆದಾರನ ಮೊಬೈಲ್‌ ಫೋನ್‌ನಲ್ಲಿ ಆಡಿಯೋ ಮತ್ತು ವಿಡಿಯೋ ಚಿತ್ರೀಕರಿಸುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next