Advertisement

ದೇಶದ ಪ್ರಮುಖ ರಾಷ್ಟ್ರೀಯ ಉದ್ಯಾನವನಗಳಿವು

07:05 PM Aug 26, 2020 | Karthik A |

ವನ್ಯ ಜೀವಿಗಳ ಜತೆಗೆ ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ರಾಷ್ಟ್ರೀಯ ಉದ್ಯಾನವನಗಳನ್ನು ಸ್ಥಾಪಿಸಲಾಗಿದೆ.

Advertisement

ಇಲ್ಲಿ ಯಾವುದೇ ಮಾನವ ಚಟುವಟಿಕೆಗಳಿಗೆ ಅವಕಾಶ ಇರುವುದಿಲ್ಲ. ಭಾರತದ ಮೊದಲ ರಾಷ್ಟೀಯ ಉದ್ಯಾನವನ ಉತ್ತರಾಖಂಡ್‌ನ‌ ಜಿಮ್‌ ಕಾರ್ಬೆಟ್‌ ರಾಷ್ಟ್ರೀಯ ಉದ್ಯಾನವನ.

ಇದನ್ನು 1936ರಲ್ಲಿ ಸ್ಥಾಪನೆ ಮಾಡಲಾಗಿದೆ. 2020 ಮೇ ರ ತನಕ ಭಾರತದಲ್ಲಿ 105 ರಾಷ್ಟ್ರೀಯ ಉದ್ಯಾನವನವಿದೆ. ನಮ್ಮಲ್ಲಿರುವ ಒಟ್ಟು ಉದ್ಯಾನವನ 40,501.13 ಕಿ.ಮೀ ವಿಸ್ತೀರ್ಣವನ್ನು ಹೊಂದಿದೆ.

ಮಧ್ಯ ಪ್ರದೇಶ ಅತೀ ಹೆಚ್ಚು ರಾಷ್ಟ್ರೀಯ ಉದ್ಯಾನವನಗಳನ್ನು ಒಳಗೊಂಡಿದೆ. ಕರ್ನಾಟಕದಲ್ಲಿ 5 ರಾಷ್ಟ್ರೀಯ ಉದ್ಯಾವನಗಳಿವೆ.

ದೇಶದ ಪ್ರಮುಖ ರಾಷ್ಟ್ರೀಯ ಉದ್ಯಾನವನಗಳು

Advertisement


ಜಿಮ್‌ ಕಾರ್ಬೆಟ್‌ ರಾಷ್ಟ್ರೀಯ ಉದ್ಯಾನವನ:
ಉತ್ತರಖಂಡ್‌ನ‌ ನೈನಿತಾಲ್‌ನಲ್ಲಿ ಈ ಉದ್ಯಾನವನ ಭಾರತದ ಮೊದಲ ಉದ್ಯಾನವನ ಹಾಗೂ ಪ್ರಮುಖ ರಾಷ್ಟ್ರೀಯ ಉದ್ಯಾನವನಗಳಲ್ಲಿ ಒಂದಾಗಿದೆ. ಹುಲಿ ಪ್ರಿಯರ ನೆಚ್ಚಿನ ತಾಣ. ಹುಲಿ ಜತೆಗೆ ವಿವಿಧ ರೀತಿಯ ಜಿಂಕೆಗಳು, ಜಿರತೆ, ಕಪ್ಪು ಕರಡಿ ಹಾಗೂ ಕೆಂಪು ನರಿಗಳು ಇಲ್ಲಿನ ವಿಶೇಷತೆಯಾಗಿದೆ. ಸಾಕಾಷ್ಟು ಪ್ರಮಾಣದಲ್ಲಿ ಪ್ರವಾಸಿಗರು ಸಫಾರಿಗಾಗಿ ಇಲ್ಲಿಗೆ ಬರುತ್ತಾರೆ. 520 ಚದರ ಕಿ.ಮೀ ವಿಸ್ತ್ರೀರ್ಣವನ್ನು ಹೊಂದಿದ್ದು, ಇಲ್ಲಿಗೆ ಭೇಟಿ ನೀಡಲು ನವೆಂಬರ್‌ ಮತ್ತು ಜೂನ್‌ ಸೂಕ್ತ ಸಮಯವಾಗಿದೆ.

ಕಾಜಿರಂಗ ರಾಷ್ಟ್ರೀಯ ಉದ್ಯಾನವನ
ಅಸ್ಸಾಂ ರಾಜ್ಯದಲ್ಲಿರುವ ಕಾಜಿರಂಗ ರಾಷ್ಟ್ರೀಯ ಉದ್ಯಾನವನವೂ ವಿಶ್ವ ಪರಂಪರೆಯ ತಾಣಗಳಲ್ಲಿ ಒಂದಾಗಿದೆ.
ಏಕಕೊಂಬಿನ ಘೇಂಡಾಮೃಗ ಇಲ್ಲಿನ ವಿಶೇಷತೆ. ಅಸ್ಸಾಂನ ಗೋಲಾಘಾಟ್‌ ಮತ್ತು ನಾಗಾಂವ್‌ ಜಿಲ್ಲೆ ಯಲ್ಲಿ ಈ ಉದ್ಯಾನ ಹರಡಿಕೊಂಡಿದೆ. ಇದರ ಒಟ್ಟು ಚದರ ವಿಸ್ತ್ರೀರ್ಣ 420 ಕಿ.ಮೀ. ವಿದ್ದು 1974ರಲ್ಲಿ ಸ್ಥಾಪನೆಯಾಗಿದೆ. ಡಿಸೆಂಬರ್‌ ನಿಂದ ಮಾರ್ಚ್‌ ಭೇಟಿ ನೀಡಲು ಸೂಕ್ತ ಸಮಯವಾಗಿದೆ.

ಗೀರ್‌ ರಾಷ್ಟ್ರೀಯ ಉದ್ಯಾನವನ
ಗುಜರಾತ್‌ನಲ್ಲಿರುವ ಗೀರ್‌ ರಾಷ್ಟ್ರೀಯ ಉದ್ಯಾನವನ ಏಷ್ಯಾದ ಸಿಂಹಗಳಿಗೆ ಹೆಸರುವಾಸಿಯಾಗಿದೆ. ಹಿಂದಿನ ಕಾಲದಲ್ಲಿ ನವಾಬರು ಭೇಟಿಯಾಡುವ ಪ್ರದೇಶವಾಗಿತ್ತು. ಕಡವೆ, ಕೃಷ್ಣಮೃಗ, ಮುಳ್ಳು ಹಂದಿ ಇಲ್ಲಿನ ವಿಶೇಷತೆಗಳಾಗಿದೆ. ಸಫಾರಿ ಪ್ರಿಯಾರಿಗೆ ಇಷ್ಟವಾಗುವ ಸ್ಥಳವಾಗಿದೆ.

ಸುಂದರಬನ್‌ ರಾಷ್ಟ್ರೀಯ ಉದ್ಯಾನವನ
ಪಶ್ಚಿಮ ಬಂಗಾಳದಲ್ಲಿರುವ ಸುಂದರ್‌ಬನ್‌ ರಾಷ್ಟ್ರೀಯ ಉದ್ಯಾನವನ ಬಂಗಾಲದ ಹುಲಿಗಳಿಗೆ ಪ್ರಸಿದ್ಧಿ ಪಡೆದಿದೆ. ಇದು ಭಾರತದ ಅತೀ ಹೆಚ್ಚು ಭೇಟಿ ನೀಡುವ ರಾಷ್ಟೀಯ ಉದ್ಯಾನವನವಾಗಿದೆ. ಉಪ್ಪು ನೀರಿನ ಮೊಸಳೆ, ಕಾಡು ಹಂದಿಗಳು, ಬೃಹತ್‌ ಆಮೆಗಳು, ಗಂಗಾ ನದಿ ಡಾಲ್ಫಿನ್‌ ಹಾಗೂ ವಲಸೆ ಹಕ್ಕಿಗಳನ್ನು ಇಲ್ಲಿ ಕಾಣಸಿಗುತ್ತದೆ. ಇಲ್ಲಿ ಯಾವುದೇ ಜೀಪ್‌ ಸಫಾರಿ ಲಭ್ಯವಿಲ್ಲ. ದೋಣಿ ಮೂಲಕ ವಿಹಾರಿಸಬಹುದು. ನವೆಂಬರ್‌ನಿಂದ ಫೆಬ್ರವರಿ ಅವಧಿಯಲ್ಲಿ ಇಲ್ಲಿಗೆ ಭೇಟಿ ನೀಡಬಹುದು.

ಸಾತ್ಪುರ ರಾಷ್ಟ್ರೀಯ ಉದ್ಯಾನವನ
ಮಧ್ಯಪ್ರದೇಶದಲ್ಲಿರು ಸಾತ್ಪುರ ರಾಷ್ಟ್ರೀಯ ಉದ್ಯಾನವನ 524 ಚದರ ಕಿ.ಮೀ ವಿಸ್ತ್ರೀರ್ಣ ಹೊಂದಿದೆ. ವಿಶಾಲವಾಗಿ ಹರಡಿಕೊಂಡಿರುವ ಈ ಉದ್ಯಾನವನ ದಟ್ಟವಾದ ಕಾಡಿನಿಂದ ಕೂಡಿದ್ದು, ಕಿರಿದಾದ ಕಮರಿಗಳು, ಆಳವಾದ ಕಂದರಗಳಿವೆ. ಆನೆಗಳ ಮೂಲಕ ಸಫಾರಿ ನಡೆಸಬಹುದು. ಅಕ್ಟೋಬರ್‌ನಿಂದ ಏಪ್ರಿಲ್‌ವರೆಗೆ ಇಲ್ಲಿಗೆ ಭೇಟಿ ನೀಡಬಹುದು.

ಎರಾವಿಕುಲಂ ರಾಷ್ಟ್ರೀಯ ಉದ್ಯಾನವನ
ಅತ್ಯಂತ ಸುಂರದ ರಾಷ್ಟ್ರೀಯ ಉದ್ಯಾನವನಗಳಲ್ಲಿ ಎರಾವಿಕುಲಂ ರಾಷ್ಟ್ರೀಯ ಉದ್ಯಾನವನ ಒಂದಾಗಿದೆ. ಇಲ್ಲಿ ಅಳಿವಿನಂಚಿನಲ್ಲಿರುವ ನೀಲಗಿರಿ ಥಾರ್‌ಗಳನ್ನು ಸಂರಕ್ಷಿಸಲಾಗುತ್ತದೆ. 12 ವರ್ಷಗಳಿಗೊಮ್ಮೆ ಅರಳುವ ನೀಲಕುರಿಂಜಿ ಹೂ ಇಲ್ಲಿನ ವಿಶೇಷತೆಯಾಗಿದೆ. ಆನೆಗಳು, ಜಿಂಕೆ, ನರಿ, ಚಿರತೆ,ಹುಲಿ ಹಾಗೂ ವಿವಿಧ ರೀತಿಯ ಜಿಂಕೆಗಳನ್ನು ಕಾಣಬಹುದು.

ಪೆಂಚ್‌ ರಾಷ್ಟ್ರೀಯ ಉದ್ಯಾನವನ
ಪೆಂಚ್‌ ರಾಷ್ಟ್ರೀಯ ಉದ್ಯಾನವನವೂ ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದ ನಡುವೆ ಹರಡಿಕೊಂಡಿದೆ. 257 ಚದರ ಕಿ.ಮೀ ವಿಸ್ತ್ರೀರ್ಣವನ್ನು ಹೊಂದಿದೆ. ‌ಕತ್ತೆ ಕಿರುಬ, ಆನೆ, ಕಾಡು ಹಂದಿ,ತೋಳ ಇಲ್ಲಿನ ವಿಶೇಷತೆಯಾಗಿದೆ. ನವೆಂಬರ್‌ನಿಂದ ಮೇ ಇಲ್ಲಿಗೆ ಭೇಟಿ ನೀಡಲು ಸೂಕ್ತ ಸಮಯ.

‌ ಧನ್ಯಶ್ರೀ ಬೋಳಿಯಾರ್ 

 

 

Advertisement

Udayavani is now on Telegram. Click here to join our channel and stay updated with the latest news.

Next