Advertisement

ನಕಲಿ ಮತದಾರರಿದ್ದಾರೆ; ಬಿಜೆಪಿ ಆರೋಪ

02:33 AM Apr 18, 2019 | Team Udayavani |

ಮಂಗಳೂರು: ನಗರದ ಮಣ್ಣಗುಡ್ಡೆ ಮತ್ತು ಆಳಪೆ ಪ್ರದೇಶದಲ್ಲಿ ನಕಲಿ ಮತದಾರರ ವಿವರಗಳು ಲಭ್ಯವಾಗಿದ್ದು, ಈ ಬಗ್ಗೆ ತನಿಖೆ ನಡೆಸಿ ಕ್ರಮ ಜರಗಿಸುವಂತೆ ಜಿಲ್ಲಾ ಚುನಾವಣಾ ಧಿಕಾರಿ ಮತ್ತು ಸಂಬಂಧ ಪಟ್ಟ ಪೊಲೀಸ್‌ ಠಾಣೆಗೆ ಮಾಹಿತಿ ನೀಡಲಾಗಿದೆ ಎಂದು ಬಿಜೆಪಿ ತಿಳಿಸಿದೆ.

Advertisement

ಮಣ್ಣಗುಡ್ಡೆ ಪರಿಸರದಲ್ಲಿ ಕೆಲವರು ಎರಡೆರಡು ಕಡೆಗಳಲ್ಲಿ ಹೆಸರನ್ನು ನೋಂದಾಯಿಸಿರುವುದು ಕಂಡು ಬಂದಿದೆ. ಅಲ್ಲದೆ ನಗರದ ವೆಲೆನ್ಸಿಯಾ, ಕಂಕನಾಡಿ, ಬಿರ್ಕನಕಟ್ಟೆ , ಆಳಪೆಯಲ್ಲಿ ನಕಲಿ ಮತದಾರರು ನೋಂದಣಿ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ ಎಂದು ಬಿಜೆಪಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next