ಸ್ವಚ್ಛ , ಸುಂದರ ಮಂಗಳೂರಿಗೆ ಆಟೋ ಚಾಲಕರ ಕೊಡುಗೆಯೂ ಸಾಕಷ್ಟಿದೆ. ವಿವಿಧ ಸಂಘ ಸಂಸ್ಥೆಗಳ ಮೂಲಕ ಅವರು ಮಾಡುತ್ತಿರುವ ಸೇವೆ ಗಣನೀಯ. ಹೀಗಾಗಿ ಅವರ ಬಗ್ಗೆಯೂ ಆಡಳಿತ ಪೂರಕ ಕ್ರಮಕೈಗೊಳ್ಳಬೇಕಿದೆ.
ಆಟೋ ಚಾಲಕರಿಗಾಗಿ ಪಿಎಫ್, ಇ.ಎಸ್.ಐ ಸೌಲಭ್ಯ ಕಲ್ಪಿಸುವ ಬಗ್ಗೆ ಚಿಂತನೆ ನಡೆಯುತ್ತಿರುವುದು ಪ್ರಶಂಸನೀಯ. ಹಲವು ಗಂಟೆಗಳ ಕಾಲ ವಿಶ್ರಾಂತಿ ಇಲ್ಲದೆ ದುಡಿಯುವ ಆಟೋ ಚಾಲಕರಿಗಾಗಿ ಸೂಕ್ತ ಶೌಚಾಲಯ ಸಿಗದೆ ಪರದಾಡುತ್ತಿರುತ್ತಾರೆ. ಇದಕ್ಕಾಗಿ ಆಟೋ ಪಾರ್ಕ್‌ಗಳಲ್ಲೇ ಇ- ಶೌಚಾಲಯ ವ್ಯವಸ್ಥೆ ಕಲ್ಪಿಸಿದರೆ ಆಟೋ ಚಾಲಕರಿಗೆ ಮಾತ್ರವಲ್ಲ ಸಾಕಷ್ಟು ಪ್ರಯಾಣಿಕರಿಗೂ ಅನುಕೂಲವಾಗಲಿದೆ.
ಆಟೋ ಪಾರ್ಕ್‌ಗಳನ್ನು ಸುಂದರಗೊಳಿಸುತ್ತ ಇದೊಂದು ಮಹತ್ವಪೂರ್ಣ ಯೋಜನೆಯೂ ಆಗಲಿದೆ. ಆಟೋ ಪಾರ್ಕ್‌ಗಳು ಇರುವ ಪ್ರತಿ ಸ್ಥಳದಲ್ಲೂ ಇ- ಶೌಚಾಲಯ, ಕಸದ ತೊಟ್ಟಿಯ ಜತೆಗೆ ಕುಡಿಯುವ ನೀರಿನ ಸೌಲಭ್ಯವನ್ನೂ ಒದಗಿಸಿದರೆ ಸಾಕಷ್ಟು ಮಂದಿ ಇದರ ಪ್ರಯೋಜನವನ್ನು ಪಡೆಯಬಲ್ಲರು. ದೂರದೂರಿನಿಂದ ಬರುವ ಪ್ರಯಾಣಿಕರಿಗೂ ಇದರಿಂದ ಸಹಾಯವಾಗುವುದು.
ಆಟೋ ಚಾಲಕರ ಹಿತದೃಷ್ಟಿಯಿಂದ ಮತ್ತು ನಗರದ ಶುಚಿತ್ವದ ಕಾಪಾಡಲು ಇದೊಂದು ಉತ್ತಮ ಕ್ರಮವಾಗಿದೆ. ಅಲ್ಲದೇ ಇ-ಶೌಚಾಲಯಗಳನ್ನು ಆಟೋ ಪಾರ್ಕ್‌ಗಳಲ್ಲಿ ಮಾಡುವುದರಿಂದ ಇದರ ಹೆಚ್ಚಿನ ಬಳಕೆಯೂ ಆಗಲಿದೆ.
ವಿಶ್ವನಾಥ್ ಕೋಟೆಕಾರ್, ಕೋಡಿಕಲ್