Advertisement

ಅಭಿವೃದ್ಧಿಯ ಜತೆಗೆ ಸಮಸ್ಯೆಗಳ ಸವಾಲುಗಳೂ ಇವೆ!

10:07 PM Oct 21, 2019 | mahesh |

ಮಹಾನಗರ: ಕೈಗಾರಿಕ ಪ್ರದೇಶ, ಉದ್ಯಾನ, ಶಿಕ್ಷಣಸಂಸ್ಥೆ, ರಾಷ್ಟ್ರೀಯ ಹೆದ್ದಾರಿಗಳನ್ನು ಒಳಗೊಂಡಿರುವ ಕದ್ರಿ ಉತ್ತರ ವಾರ್ಡ್‌ ( ವಾರ್ಡ್‌ ನಂ.32)ಪಾಲಿಕೆಯ ಪ್ರಮುಖ ವಾರ್ಡ್‌ಗಳಲ್ಲೊಂದು. ಜತೆಗೆ ಒಂದಷ್ಟು ಸಮಸ್ಯೆ, ಸವಾಲುಗಳನ್ನೂ ಕೂಡಾ ವಾರ್ಡ್‌ ಒಳಗೊಂಡಿದೆ. ಬಹುತೇಕ ರಸ್ತೆಗಳು ಅಗಲೀಕರಣ, ಕಾಂಕ್ರಿಟೀಕರಣಗಳೊಂದಿಗೆ ಅಭಿವೃದ್ಧಿಗೊಂಡಿದೆ. ಇದರ ಜತೆಗೆ ಒಳಚರಂಡಿ ಉಕ್ಕಿ ಹರಿಯುವುದು, ಪುಟ್‌ಪಾತ್‌ಗಳು ಅರ್ಧದಲ್ಲಿ ನಿಂತಿರುವುದು ಸೇರಿದಂತೆ ಒಂದಷ್ಟು ಸಮಸ್ಯೆಗಳು ಬಗೆಹರಿಯದೆ ಉಳಿದಿರುವುದು ಗಮನಕ್ಕೆ ಬಂದಿದೆ.

Advertisement

ಜಿಲ್ಲೆಯ ಎರಡನೆ ಪ್ರಮುಖ ಕೈಗಾರಿಕ ಕೇಂದ್ರವಾಗಿರುವ ಯೆಯ್ನಾಡಿ ಕೈಗಾರಿಕ ಪ್ರದೇಶ ಈ ವಾರ್ಡ್‌ನಲ್ಲಿದೆ. ಇಲ್ಲಿ ಮೂಲ ಸೌಲಭ್ಯಗಳ ಅಭಿವೃದ್ಧಿಗೆ 6 ಕೋ.ರೂ. ಕಾಮಗಾರಿಗೆ ಗುದ್ದಲಿಪೂಜೆ ಆಗಿದೆ.

ದೇಶ, ವಿದೇಶಗಳ ಗಣ್ಯರು, ಸಚಿವರು ಉಳಿದುಕೊಳ್ಳುವ ಪ್ರತಿ ಷ್ಠಿತ ಸಕ್ಯುಟ್‌ ಹೌಸ್‌, ಮಂಗಳೂರು ಆಕಾಶವಾಣಿ ಕೇಂದ್ರ, ಕದ್ರಿ ಪಾರ್ಕ್‌, ಕಾರಂಜಿ ಉದ್ಯಾನ, ತಾಂತ್ರಿಕ ವಿದ್ಯಾ ಸಂಸ್ಥೆಗಳ ಐಟಿಐ, ಜೆಟಿಸಿ, ಮಹಿಳಾ ಐಟಿಐ, ಮುಂತಾದ ಪ್ರಮುಖ ಕೇಂದ್ರ, ತಾಣಗಳನ್ನು ಒಳ ಗೊಂಡಿರುವ ಕದ್ರಿ ಪೂರ್ವ ವಾರ್ಡ್‌ ವಸತಿ ಸಮು ತ್ಛಯಗಳು, ವಾಣಿಜ್ಯಕೇಂದ್ರಗಳ ಮೂಲಕ ಈ ವಾರ್ಡ್‌ ಗಮನ ಸೆಳೆದಿದೆ. ರಾಷ್ಟ್ರೀಯ ಹೆದ್ದಾರಿ 66 ಹಾಗೂ ರಾಷ್ಟ್ರೀಯ ಹದ್ದಾರಿ 75 ಈ ವಾರ್ಡ್‌ ನಲ್ಲಿ ಹಾದುಹೋಗುತ್ತಿದೆ.

ಕದ್ರಿ ಪೂರ್ವ ವಾರ್ಡ್‌ನ ಇನ್ನೂ ಕೆಲವೆಡೆ ಹಳೆಯ ಒಳಚರಂಡಿ ವ್ಯವಸ್ಥೆ ಇದ್ದು ಉನ್ನತೀಕರಣಗೊಂಡಿಲ್ಲ. ಮಳೆಗಾಲದಲ್ಲಿ ಕೆಲವು ಮ್ಯಾನ್‌ಹೋಲ್‌ಗ‌ಳು ಉಕ್ಕೇರಿ ಹರಿಯುತ್ತಿದ್ದು ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಇನ್ನೊಂದು ಪ್ರಮುಖ ಸಮಸ್ಯೆ ಎಂದರೆ ನಂತೂರು ವೃತ್ತದ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಇತ್ತೀಚಿನ ವರ್ಷಗಳಲ್ಲಿ ಮಳೆಗಾಲದಲ್ಲಿ ಉಂಟಾಗುವ ಕೃತಕ ನೆರೆ. ಮಳೆ ನೀರು ಸರಾಗವಾಗಿ ಹರಿದು ಹೋಗಲು ಚರಂಡಿ ವ್ಯವಸ್ಥೆ ಕಲ್ಪಿಸದೆ ಕೃತಕ ನೆರೆ ಸೃಷ್ಟಿಯಾಗಿ ವಾಹನ ಚಾಲಕರು, ಸಾರ್ವಜನಿಕರಿಗೆ ಸಮಸ್ಯೆ ಸೃಷ್ಟಿಸುತ್ತಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಪರಿಹಾರ ಕಲ್ಪಿಸುವ ಕಾರ್ಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಆಗಿಲ್ಲ ಎಂಬುದು ನಾಗರಿಕರು ದೂರು.

ರಾಜಕೀಯ ಹಿನ್ನೋಟ
ವಾರ್ಡ್‌ ನಂ.32- ಕದ್ರಿ ಉತ್ತರದಲ್ಲಿ ಬಿಜೆಪಿಯ ರೂಪಾ ಡಿ. ಬಂಗೇರ ಕಳೆದ ಎರಡು ಅವಧಿಗಳಲ್ಲಿ ಸತತವಾಗಿ ಜಯ ಗಳಿಸುತ್ತಾ ಬಂದಿದ್ದಾರೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಿಂತ ಸುಮಾರು 566 ಮತಗಳ ಅಂತರದಿಂದ ಬಿಜೆಪಿ ಇಲ್ಲಿ ಜಯ ಸಾಧಿಸಿತ್ತು. ಬಹುತೇಕ ವಿದ್ಯಾವಂತ ಮತದಾರರನ್ನು ಹೊಂದಿರುವ ಪ್ರತಿಷ್ಠಿತ ವಾರ್ಡ್‌ ರಾಜಕೀಯ ಪಕ್ಷಗಳಿಗೆ ಒಂದು ಸವಾಲಿನ ಕ್ಷೇತ್ರವೂ ಆಗಿದೆ. ಪಾಲಿಕೆಯ ಕಳೆದ ಬಾರಿಯ ಚುನಾವಣೆಯಲ್ಲಿ ಈ ವಾರ್ಡ್‌ ಮಹಿಳೆ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಹೊಸ ಮೀಸಲಾತಿ ಪ್ರಕಾರ ಈ ವಾರ್ಡ್‌ ಹಿಂದುಳಿದ ವರ್ಗ “ಬಿ’ ಮಹಿಳೆಗೆ ಮೀಸಲಾಗಿದೆ. ಹೀಗಾಗಿ, ನಿಕಟಪೂರ್ವ ಬಿಜೆಪಿ ಕಾರ್ಪೊರೇಟರ್‌ ರೂಪಾ ಡಿ. ಬಂಗೇರಾ ಅವರಿಗೆ ಇಲ್ಲಿ ಸ್ಪರ್ಧಿಸಲು ಈ ಬಾರಿ ಅವಕಾಶವಿಲ್ಲ.

Advertisement

ಕದ್ರಿವಾರ್ಡ್‌
ಭೌಗೋಳಿಕ ವ್ಯಾಪ್ತಿ: ಕುಕದ್ರಿ ದೇವಳದ ಎಡಭಾಗದಿಂದ ಪ್ರಾರಂಭವಾಗಿ ಸರ್ಕುಟ್‌ ಹೌಸ್‌, ಕದ್ರಿಪಾರ್ಕ್‌, ಪಾದುವಾ , ಈಡನ್‌ ಕ್ಲಬ್‌ ಯೆಯ್ನಾಡಿ ಕೈಗಾರಿಕಾ ಪ್ರದೇಶ, ಬಿಕರ್ನಕಟ್ಟೆ ಪಾಂಡುರಂಗ ಭಜನಾ ಮಂದಿರ ಪ್ರದೇಶ,ನಂತೂರು ವೃತ್ತ ಪ್ರದೇಶಗಳನ್ನು ಕದ್ರಿಪೂರ್ವ ವಾರ್ಡ್‌ ಒಳಗೊಂಡಿದೆ.

ಒಟ್ಟು ಮತದಾರರು 7000
ನಿಕಟಪೂರ್ವ ಕಾರ್ಪೊರೇಟರ್‌-ರೂಪಾ ಡಿ.ಬಂಗೇರಾ (ಬಿಜೆಪಿ)

2013ರ ಚುನಾವಣೆ ಮತ ವಿವರ
ಬಿಜೆಪಿ : ರೂಪಾ ಡಿ.ಬಂಗೇರ : 1334
ಕಾಂಗ್ರೆಸ್‌ : ಶಶಿಕಲಾ : 768
ಸಿಪಿಎಂ : ಪುಪ್ಪಾ ಆಶೋಕ್‌ : 150
ಜೆಡಿಎಸ್‌: ಸುಮತಿ ಕೆ.ಶೆಟ್ಟಿ : 123

-  ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next