Advertisement

ಕಮಾನ್‌ ಕಮಾನ್‌ ಮುಂದೆ ಬನ್ನಿ…

11:01 AM Dec 19, 2017 | |

“ಬೆಂಗಳೂರು ಮಹಾನಗರದಲ್ಲಿ, ಅದೂ ಸರ್ಕಾರಿ ಸ್ವಾಮ್ಯದ ಇಲಾಖೆಯಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ಪುಣ್ಯ ಮಾಡಿರಬೇಕು’ ಎಂದು ನೆರೆಹೊರೆಯವರು, ನೆಂಟರಿಷ್ಟರು ಹೇಳುವುದುಂಟು. ಅಂಥ ಮಾತುಗಳನ್ನು ಕೇಳಿದಾಗ ಅಂಥದೊಂದು ಅವಕಾಶ ಬೇಗನೆ ಬರಬಾರದೇ ಎಂಬ ಭಾವ ಜೊತೆಯಾಗುವುದುಂಟು. ಹೀಗೆ ಹಂಬಲಿಸುವವರಿಗೆ ಒಂದು ಅಚ್ಚರಿಯ ಪ್ರಕಟಣೆ ಅನ್ನುವಂತೆ- ಇದೀಗ ಬಿಎಂಟಿಸಿಯಲ್ಲಿ ಚಾಲಕ, ನಿರ್ವಾಹಕ ಸೇರಿದಂತೆ ಒಟ್ಟು 2225 ಹುದ್ದೆಗಳಿಗೆ ಅವಕಾಶ ಕಲ್ಪಿಸಲಾಗಿದೆ…

Advertisement

ಖಾಸಗಿ ಕಂಪನಿಗಳಿಗೆ ಮತ್ತೆ ಮತ್ತೆ ಸಂದರ್ಶನಕ್ಕೆ ಹೋಗುವುದು, ಪರೀಕ್ಷೆಗಳಿಗೆ ಹಾಜರಾಗುವುದು, ಹೀಗೆ… ಎಷ್ಟು ಪ್ರಯತ್ನ ಮಾಡೋದು? ಸರ್ಕಾರಿ ಸ್ವಾಮ್ಯದ ಇಲಾಖೆಯಲ್ಲಾದ್ರೂ ಒಂದು ಕೆಲಸ ಸಿಕ್ಕಿದ್ರೆ ಚೆನ್ನಾಗಿರುತ್ತೆ… ಎಂದು ಎಲ್ಲರೂ ಆಗಾಗ ಯೋಚಿಸುವುದುಂಟು. ಅನೇಕ ಬಾರಿ ಸರ್ಕಾರದ ಇಲಾಖೆಗಳು ಕರೆಯುವ ಪರೀಕ್ಷೆಗಳನ್ನು ಬರೆದೂ ನೌಕರಿ ಸಿಗದಿದ್ದಾಗ ಬೇಸರವಾಗುವುದುಂಟು. ಆದರೆ, ಅವಕಾಶಗಳು ಪದೇ ಪದೇ ಬರುವುದಿಲ್ಲ. ಅದೂ ರಾಜ್ಯ ಸರ್ಕಾರ ಸ್ವಾಮ್ಯದ ಇಲಾಖೆಗಳಲ್ಲಿ ಅವಕಾಶಗಳಂತೂ ತೀರಾ ವಿರಳ ಎಂದುಕೊಂಡು ಖಾಸಗಿ ಕಂಪನಿಗಳಲ್ಲೇ ಭವಿಷ್ಯ ಮತ್ತು ಬಾಳಿನ ಅರ್ಥ ಹುಡುಕುವವರಿದ್ದಾರೆ. 

ಆದರೆ ಕೆಲವರು ಬಂದ ಅವಕಾಶವನ್ನು ಯಾವುದೇ ಕಾರಣಕ್ಕೂ ಯಾರಿಗೂ ಬಿಟ್ಟುಕೊಡದೆ ನಾನು ಉದ್ಯೋಗ ಪಡೆದೇ ಪಡೆಯುತ್ತೇನೆ ಎಂದು ಭಗೀರಥ ಪ್ರಯತ್ನ ಮಾಡುತ್ತಾರೆ. ಜೊತೆಗೆ ತಮ್ಮ ಪ್ರಯತ್ನದಲ್ಲಿ ಗೆಲುವನ್ನೂ ಕಾಣುತ್ತಾರೆ. ಈ ರೀತಿ ನೌಕರಿಗಾಗಿ ಹಂಬಲಿಸುವವರಿಗಾಗಿ ಬೆಂಗಳೂರು ಮೆಟ್ರೋ ಪಾಲಿಟನ್‌ ಟ್ರಾನ್ಸ್‌ಪೊàರ್ಟ್‌ ಕಾರ್ಪೊರೇಷನ್‌ (ಬಿಎಂಟಿಸಿ)  ಅವಕಾಶವೊಂದನ್ನು ನೀಡಿದೆ.  ಚಾಲಕ, ನಿರ್ವಾಹಕ, ಸಹಾಯಕ ಸಂಚಾರ ನಿರೀಕ್ಷಕ, ಭದ್ರತಾ ರಕ್ಷಕ ಸೇರಿದಂತೆ ಸಾಮಾನ್ಯ ಮತ್ತು ಹೈದರಾಬಾದ್‌ ಕರ್ನಾಟಕ ಭಾಗದ ಹುದ್ದೆಗಳು ಸೇರಿ ಒಟ್ಟು 2225 ಹುದ್ದೆಗಳಿಗೆ ಅವಕಾಶ ಕಲ್ಪಿಸಿದೆ.

ಎಷ್ಟ್ ಓದಿರಬೇಕು?
ಎಲ್ಲ ಹುದ್ದೆಗಳಿಗೂ ಎಸ್ಸೆಸ್ಸೆಲ್ಸಿ, ಪಿಯುಸಿ ತತ್ಸಮಾನ ವಿದ್ಯಾರ್ಹತೆ ಮುಖ್ಯವಾಗಿದ್ದು, ಕುಶಲಕರ್ಮಿ(ಆಟೋ ಮೆಕ್ಯಾನಿಕ್‌, ಆಟೋ ಬಾಡಿ ಬಿಲ್ಡರ್‌, ಆಟೋ ಮೆಷಿನಿಸ್ಟ್, ಆಟೋ ಪೇಂಟರ್‌ ಮತ್ತು ಆಟೋ ಎಲೆಕ್ಟ್ರಿಷಿಯನ್‌) ಹುದ್ದೆಗಳಿಗೆ ಅಂಗೀಕೃತ ಸಂಸ್ಥೆಯಲ್ಲಿನ ಮೆಕಾನಿಕಲ್/ ಆಟೋಮೊಬೈಲ್/ ವೆಲ್ಡಿಂಗ್‌ ಮತ್ತು ಎಲೆಕ್ಟ್ರಿಕಲ್ ಅಂಡ್‌ ಎಲೆಕ್ಟ್ರಾನಿಕ್ಸ್‌ ಎಂಜಿನಿಯರಿಂಗ್‌ ಅಥವಾ ತತ್ಸಮಾನ ಓದು ಜೊತೆಗೆ ಅನುಭವ ಪಡೆದಿರಬೇಕು.

ವಯಸ್ಸಿನ ಡೆಡ್‌ಲೈನ್‌
ಚಾಲಕ ಹುದ್ದೆಗೆ ಕನಿಷ್ಠ 24 ವರ್ಷದಿಂದ ಗರಿಷ್ಠ 35 ವರ್ಷಗಳು. ಇತರ ಹುದ್ದೆಗಳಿಗೆ 18 ವರ್ಷಗಳಿಂದ 35ವರ್ಷಗಳ ವಯೋಮಿತಿ ನಿರ್ಧರಿಸಿದ್ದು, ಪರಿಶಿಷ್ಟರಿಗೆ 5 ವರ್ಷ ವಯೋಮಿತಿಯಲ್ಲಿ ಸಡಿಲಿಕೆಯಿದೆ. ಜೊತೆಗೆ ದೇಹದಾಡ್ಯìತೆ ಕಡ್ಡಾಯವಾಗಿದೆ. ಚಾಲಕ ಹುದ್ದೆಗೆ 12,400ರಿಂದ 19,500ರೂ., ಸಹಾಯಕ ಸಂಚಾರ ನಿರೀಕ್ಷಕ, ಕುಶಲಕರ್ಮಿ ಹುದ್ದೆಗೆ-13970- 20740ರೂ. ನಿರ್ವಾಹಕ, ಭದ್ರತಾ ರಕ್ಷಕ, ತಾಂತ್ರಿಕ ಸಹಾಯಕ ಹುದ್ದೆಗೆ 11640- 15700 ರೂ. ವೇತನವನ್ನು ನಿಗದಿ ಪಡಿಸಲಾಗಿದೆ.

Advertisement

ಪರೀಕ್ಷಾ ವಿಧಾನ
ಹುದ್ದೆಗಳಿಗನುಗುಣವಾಗಿ ಪರೀಕ್ಷೆಗಳನ್ನು ನಿಗದಿ ಮಾಡಿದ್ದು ಚಾಲಕ ಹುದ್ದೆಗೆ ವಾಹನ ಚಾಲನೆ, ಭದ್ರತಾ ರಕ್ಷಕ ಹುದ್ದೆಗೆ ನಾಲ್ಕು ನೂರು ಮೀಟರ್‌ ಓಟ, ಉದ್ದ ಜಿಗಿತ, ಗುಂಡು ಎಸೆತದ ಪರೀಕ್ಷೆಗಳಿವೆ. ನಿರ್ವಾಹಕ, ಸಹಾಯಕ ಸಂಚಾರ ನಿರೀಕ್ಷಕ ಸೇರಿದಂತೆ ಇತರ ಹುದ್ದೆಗಳಿಗೆ ಸಾಮಾನ್ಯ ಸಾಮರ್ಥ್ಯ ಪರೀಕ್ಷೆಗಳನ್ನು ನಡೆಸಲಾಗುತ್ತದೆ.

ಅರ್ಜಿ ಸಲ್ಲಿಕೆ ಹೇಗೆ?
ಅರ್ಜಿಗಳನ್ನು ಆನ್‌ಲೈನ್‌(www.mybmtc.com) ಮೂಲಕ ಸಲ್ಲಿಸತಕ್ಕದ್ದು, ಅರ್ಜಿಸಲ್ಲಿಕೆಗೆ ಡಿಸೆಂಬರ್‌ 26 ಕಡೆಯ ದಿನವಾಗಿದೆ. “ಸಾಮಾನ್ಯ ವರ್ಗಕ್ಕೆ ಶುಲ್ಕ 420 ರೂ. ಮತ್ತು ಪರಿಶಿಷ್ಟರಿಗೆ 220 ರೂ. ನಿಗದಿ ಮಾಡಲಾಗಿದೆ. ಹೆಚ್ಚಿನ ಮಾಹಿತಿಯನ್ನು tinyurl.com/y829w983 ಜಾಲತಾಣದಲ್ಲಿ ಪಡೆಯಬಹುದಾಗಿದೆ.

ಹುದ್ದೆಗಳ ವಿಂಗಡನೆ
ಹುದ್ದೆಗಳು – ಸಾಮಾನ್ಯ ಅಭ್ಯರ್ಥಿ – ಹೈಕ ಅಭ್ಯರ್ಥಿ
ಚಾಲಕ ಹುದ್ದೆ- 392 – 108
ನಿರ್ವಾಹಕ ಹುದ್ದೆ – (ಪಿಯುಸಿ ತತ್ಸಮಾನ)- 283- 91
ನಿರ್ವಾಹಕ ಹುದ್ದೆ – ( ಜೆಒಸಿ)-141- 19
ಸಹಾಯಕ ಸಂಚಾರ ನಿರೀಕ್ಷಕ-23- 16
ಭದ್ರತಾ ರಕ್ಷಕ- 149 – 23
ತಾಂತ್ರಿಕ ಸಹಾಯಕ- 778- 120
ಆಟೊ ಮೆಕ್ಯಾನಿಕ್‌- 38- 14
ಆಟೋ ಬಾಡಿ ಬಿಲ್ಡರ್‌- 9-5
ಆಟೋ ಎಲೆಕ್ಟ್ರಿಷಿಯನ್‌- 7-5
ಆಟೋ ಪೇಂಟರ್‌- 0- 1
ಆಟೋ ವೆಲ್ಡರ್‌- 0- 2
ಆಟೋ ಮೆಷಿನಿಸ್ಟ್‌- 0-1

ಅನಂತನಾಗ್‌ ಎನ್‌.

Advertisement

Udayavani is now on Telegram. Click here to join our channel and stay updated with the latest news.

Next