Advertisement

ಜಿಲ್ಲೆಯಲ್ಲಿದ್ದಾರೆ 15.23 ಲಕ್ಷ ಮತದಾರರು: ಜೈನ್‌

04:34 PM Feb 09, 2020 | Team Udayavani |

ಬಾಗಲಕೋಟೆ: ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಜಿಲ್ಲೆಯ 7 ವಿಧಾನಸಭಾ ಮತಕ್ಷೇತ್ರಗಳ ವ್ಯಾಪ್ತಿಯ ಮತದಾರರ ಅಂತಿಮ ಪಟ್ಟಿ ಪ್ರಚುರಪಡಿಸಲಾಗಿದ್ದು, ಜಿಲ್ಲೆಯಲ್ಲಿ 15,23,618 ಮತದಾರರಿದ್ದಾರೆ ಎಂದು ಮತದಾರ ಪಟ್ಟಿಯ ಜಿಲ್ಲಾ ವೀಕ್ಷಕ ಮನೋಜ್‌ ಜೈನ್‌ ಹೇಳಿದರು.

Advertisement

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಅಂತಿಮ ಮತದಾರರ ಪಟ್ಟಿ ಪ್ರಕಟಿಸುವ ಕುರಿತು ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಕರಡು ಮತದಾರರ ಪಟ್ಟಿಯನ್ವಯ 15,14,969 ಮತದಾರರಿದ್ದು, ಅಂತಿಮ ಮತದಾರರ ಪಟ್ಟಿಯಲ್ಲಿ 15,23,618 ಮತದಾರರಿದ್ದಾರೆ. ಅದರಲ್ಲಿ 7,59,540 ಪುರುಷ ಮತದಾರರಿದ್ದರೆ, 7,64,000 ಮಹಿಳಾ ಮತದಾರರು ಹಾಗೂ 78 ಇತರೆ ಮತದಾರರಿದ್ದಾರೆ. ಅಂತಿಮ ಮತದಾರರ ಪಟ್ಟಿಯಲ್ಲಿ 18ರಿಂದ 19 ವರ್ಷದೊಳಗಿನ ಮತದಾರರು ಒಟ್ಟು 26,161 ಇದ್ದಾರೆಂದು ತಿಳಿಸಿದರು.

ಮುಧೋಳ ಮತಕ್ಷೇತ್ರದಲ್ಲಿ 97,315 ಪುರುಷರು, 1,00,187 ಮಹಿಳಾ ಹಾಗೂ ಇತರೆ1 ಸೇರಿ ಒಟ್ಟು 1,97,503 ಮತದಾರರಿದ್ದಾರೆ. ತೇರದಾಳ ಮತಕ್ಷೇತ್ರದಲ್ಲಿ 1,11,060 ಪುರುಷ, 1,10,983 ಪುರುಷ ಹಾಗೂ 10 ಇತರೆ ಸೇರಿ ಒಟ್ಟು 2,22,053 ಮತದಾರರಿದ್ದಾರೆ. ಜಮಖಂಡಿ ಮತಕ್ಷೇತ್ರದಲ್ಲಿ 1,03,896 ಪುರುಷ, 1,03829 ಮಹಿಳಾ ಹಾಗೂ 7 ಇತರೆಸೇರಿ ಒಟ್ಟು 2,07,732 ಮತದಾರರಿದ್ದಾರೆ. ಬೀಳಗಿ ಮತಕ್ಷೇತ್ರದಲ್ಲಿ 1,10,195 ಪುರುಷ, 1,11,951 ಮಹಿಳಾ ಹಾಗೂ 18 ಇತರೆ ಸೇರಿಒಟ್ಟು 2,22,164 ಮತದಾರರಿದ್ದಾರೆ ಎಂದು ತಿಳಿಸಿದರು.

ಬಾದಾಮಿ ಮತಕ್ಷೇತ್ರದಲ್ಲಿ 1,11,125 ಪುರುಷ, 1,09,662 ಮಹಿಳಾ ಹಾಗೂ 15 ಇತರೆಸೇರಿ ಒಟ್ಟು 2,20,802 ಮತದಾರರಿದ್ದಾರೆ. ಬಾಗಲಕೋಟೆ ಮತಕ್ಷೇತ್ರದಲ್ಲಿ 1,17,477 ಪುರುಷ, 1,18,491 ಮಹಿಳಾ ಹಾಗೂ 19 ಇತರೆ ಸೇರಿ ಒಟ್ಟು 2,35,987 ಮತದಾರರಿದ್ದಾರೆ. ಹುನಗುಂದ ಮತಕ್ಷೇತ್ರದಲ್ಲಿ 1,08,472ಪುರುಷ, 1,08,897 ಮಹಿಳಾ ಹಾಗೂ 8 ಇತರೆ ಸೇರಿ ಒಟ್ಟು 2,17,377 ಮತದಾರರಿದ್ದಾರೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ| ಕೆ. ರಾಜೇಂದ್ರ ಮಾತನಾಡಿ, ಕರಡು ಹಾಗೂ ಅಂತಿಮ ಮತದಾರರ ಪಟ್ಟಿಯ ವ್ಯತ್ಯಾಸ ನೋಡಿದಾಗ ಮುಧೋಳ ಕ್ಷೇತ್ರದಲ್ಲಿ 497, ಬೀಳಗಿ ಕ್ಷೇತ್ರದಲ್ಲಿ 2419, ಬಾದಾಮಿ ಕ್ಷೇತ್ರದಲ್ಲಿ 3358, ಬಾಗಲಕೋಟೆ ಕ್ಷೇತ್ರದಲ್ಲಿ 1256, ಹುನಗುಂದ ಕ್ಷೇತ್ರದಲ್ಲಿ 2526 ಮತದಾರರು ಹೆಚ್ಚಿಗೆ ನೋಂದಣಿಯಾಗಿರುವುದು ಕಂಡುಬಂದಿದೆ. ತೇರದಾಳ ಕ್ಷೇತ್ರದಲ್ಲಿ 760 ಹಾಗೂ ಜಮಖಂಡಿ ಕ್ಷೇತ್ರದಲ್ಲಿ 647 ಮತಗಳು ಕಡಿಮೆಯಾಗಿರುವುದು ಕಂಡುಬಂದಿದೆ. ಪುರುಷ ಮತ್ತು ಮಹಿಳಾ ಮತದಾರರ ವ್ಯತ್ಯಾಸದಲ್ಲಿ 1000 ಮತದಾರರಕ್ಕೆ 1006 ಮಹಿಳಾ ಮತದಾರರು ಇದ್ದಾರೆ ಎಂದು ತಿಳಿಸಿದರು.  ಪ್ರಕಟಿಸಿದ ಅಂತಿಮ ಮತದಾರರ ಪಟ್ಟಿಯನ್ನು ತಹಶೀಲ್ದಾರ್‌ ಕಚೇರಿ ಹಾಗೂ ಉಪ ವಿಭಾಗಾಧಿಕಾರಿಗಳ ಕಚೇರಿಯಲ್ಲಿ ಹಾಗೂ ವೆಬ್‌ಸೈಟ್‌ನಲ್ಲಿ ಪರಿಶೀಲಿಸಬಹುದಾಗಿದೆ ಎಂದು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next