Advertisement
ರೆಸಿಸ್ಟೆಸ್Õ ಬ್ಯಾಂಡ್ ರೆಸಿಸ್ಟೆಸ್Õ ಬ್ಯಾಂಡ್ ಒಂದು ರಬ್ಬರ್ ಬ್ಯಾಂಡ್ (ಪಟ್ಟಿ). ಇದರ ಎರಡು ಬದಿಯ ತುದಿಗೆ ಮುಷ್ಟಿಯಲ್ಲಿ ಹಿಡಿದುಕೊಳ್ಳಲು ಅನುಕೂಲವಾಗುವಂತೆ ಗಟ್ಟಿಯಾದ ಪ್ಲಾಸ್ಟಿಕ್ ಹಿಡಿಕೆಗಳು ಇರುತ್ತವೆ. ಇದರ ರಬ್ಬರ್ ಟ್ಯೂಬ್ ನೀವು ಎಳೆಯುವ ಒತ್ತಡವನ್ನು ತಡೆದುಕೊಳ್ಳುವಂತಿರುತ್ತದೆ. ತುಂಬ ಹಗುರವಾಗಿರುವುದರಿಂದ ಬ್ಯಾಗ್‌ನಲ್ಲಿ ತೆಗೆದುಕೊಂಡು ಹೋಗಬಹುದು.
ಹಲವು ವಿಧದ ಬ್ಯಾಂಡ್‌ಗಳು ಲಭ್ಯ ವಿದ್ದು ಒಂದು ಎಳೆ, ಎರಡು, ಮೂರು
ಹೀಗೆ ಅವರವರ ದೈಹಿಕ ಸಾಮರ್ಥ್ಯಕ್ಕೆ ತಕ್ಕಂತೆ ಬ್ಯಾಂಡ್‌ಗಳನ್ನು ಉಪಯೋಗಿಸಬಹುದು. ರನ್ನಿಂಗ್ ಮಾಡುವವರಿಗೆ ದಪ್ಪವಾದ ಬ್ಯಾಂಡ್ ಹಾಗೂ ಜಿಮ್‌ನಲ್ಲಿ ದೇಹವನ್ನು ಹುರಿಗೊಳಿಸುವ ಹೆಚ್ಚು ಬಿಗಿಯಾಗಿರುವ ಬ್ಯಾಂಡ್‌ಗಳನ್ನು ಉಪಯೋಗಿಸುತ್ತಾರೆ. ಉಪಯೋಗ
ಜಿಮ್‌ಗೆ ಹೋಗಿ ಡಂಬಲ್‌ಗಳನ್ನು ಮುಷ್ಟಿಯಲ್ಲಿ ಎತ್ತಿ ತೋಳು ಹಾಗೂ ಮುಂಗೈಗಳನ್ನು ಬಲಗೊಳಿಸುವಂತೆ ಅಷ್ಟೇ ಪರಿಣಾಮಕಾರಿಯಾಗಿ ತೋಳುಗಳ ಸ್ನಾಯುಗಳನ್ನು ಬಲಗೊಳಿಸುವಲ್ಲಿ ಈ ಬ್ಯಾಂಡ್‌ಗಳು ಸಹಕಾರಿ. ಈ ಬ್ಯಾಂಡ್ ಅನ್ನು ನೆಲದ ಮೇಲೆ ನೇರವಾಗಿ ಹಾಸಿ ಮಧ್ಯಭಾಗದಲ್ಲಿ ಅದರ ಮೇಲೆ ನಿಂತು ಹಿಡಿಕೆಗಳನ್ನು ಮುಷ್ಟಿಯಲ್ಲಿ ಹಿಡಿದು ಡಂಬಲ್ಸ್ ಎತ್ತುವ ರೀತಿಯಲ್ಲಿಯೇ ಒಂದೊಂದೇ ಮುಷ್ಟಿಗಳನ್ನು ಭುಜದವರೆಗೆ ತಂದು ಹತ್ತು ಸೆಕೆಂಡುಗಳ ಕಾಲ ಒತ್ತಡವನ್ನು ತಡೆದುಕೊಂಡು ಅದೇ ಸ್ಥಿತಿಯಲ್ಲಿರಬೇಕು. ಅನಂತರ ನಿಧಾನವಾಗಿ ಕೆಳಗಿಳಿಸಬೇಕು.
Related Articles
Advertisement
- ಕಾರ್ತಿಕ್ ಚಿತ್ರಾಪುರ