Advertisement

ಹೆಚ್ಚುವರಿ ನ್ಯಾಯಮೂರ್ತಿಗಳ ನೇಮಕಕ್ಕೆ ತಾತ್ವಿಕ ಅನುಮೋದನೆ

06:50 AM May 29, 2018 | Team Udayavani |

ಬೆಂಗಳೂರು: ಹೈಕೋರ್ಟ್‌ ಹೆಚ್ಚುವರಿ ನ್ಯಾಯಮೂರ್ತಿಗಳನ್ನಾಗಿ ಹಿರಿಯ ವಕೀಲರಾದ ಎಚ್‌.ಟಿ ನರೇಂದ್ರ ಪ್ರಸಾದ್‌
ಹಾಗೂ ಪಿ. ಮೊಹಮದ್‌ ನವಾಜ್‌ ಅವರ ನೇಮಕಕ್ಕೆ ಕೇಂದ್ರ ಸರ್ಕಾರವು ರಾಷ್ಟ್ರಪತಿಯವರಿಗೆ ಶಿಫಾರಸು ಮಾಡಲು ತಾತ್ವಿಕ ಅನುಮೋದನೆ ನೀಡಿದೆ ಎಂದು ತಿಳಿದು ಬಂದಿದೆ.

Advertisement

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮೂಲದವರಾದ ಮೊಹಮದ್‌ ನವಾಜ್‌, ಪುತ್ತೂರಿನ ಸೇಂಟ್‌ μಲೋಮಿನಾ
ಕಾಲೇಜಿನಲ್ಲಿ ಪದವಿ ನಂತರ ಬೆಂಗಳೂರಿನ ಎಸ್‌ಜೆಆರ್‌ಸಿ ಕಾನೂನು ಮಹಾವಿದ್ಯಾಲಯದಲ್ಲಿ ಕಾನೂನು ಪದವಿ ಪಡೆದರು. ಆನಂತರ ರಾಜ್ಯ ಹೈಕೋರ್ಟ್‌ ವಕೀಲರಾದರು. ಪ್ರಸ್ತುತ ರಾಜ್ಯ ಸರ್ಕಾರದ ವಿಶೇಷ ಸರ್ಕಾರಿ ಅಭಿಯೋಜಕರಾಗಿ (ಎಸ್‌ಪಿಪಿ) ಕಾರ್ಯ ನಿರ್ವಹಿಸುತ್ತಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಮದಬೂರಿನವರಾದ ಎಚ್‌.ಟಿ ನರೇಂದ್ರ ಪ್ರಸಾದ್‌, 1993ರಲ್ಲಿ ಮೈಸೂರಿನಲ್ಲಿ ಕಾನೂನು ಪದವಿ ಪೂರ್ಣಗೊಳಿಸಿದ್ದರು. ಬಳಿಕ 1993ರಿಂದ ಹೈಕೋರ್ಟ್‌ನಲ್ಲಿ ವಕೀಲ ವೃತ್ತಿ ನಡೆಸಿದ್ದಾರೆ. 2006ರಲ್ಲಿ 
ಹೈಕೋರ್ಟ್‌ನಲ್ಲಿ ಸರ್ಕಾರಿ ಅಭಿಯೋಜಕರಾಗಿ ನೇಮಕಗೊಂಡರು. ಸದ್ಯ ಹೈಕೋರ್ಟ್‌ನಲ್ಲಿ ಹೆಚ್ಚುವರಿ
ಸರ್ಕಾರಿ ಅಭಿಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next