Advertisement

ಆಗ ‌ದುಡ್ಡು ಇರಲಿಲ್ಲ; ಈಗ ದುಡ್ಡು ಇದೆ!

07:30 AM Mar 23, 2018 | |

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ಕಳೆದ ವರ್ಷವೇ “ಯೋಗಿ ದುನಿಯಾ’ ಬಿಡುಗಡೆಯಾಗಬೇಕಿತ್ತು. ಆದರೆ, ಆಗಲಿಲ್ಲ. ಈ ವಾರ
ರಾಜ್ಯಾದ್ಯಂತ ಚಿತ್ರ ಬಿಡುಗಡೆಯಾಗುತ್ತಿದೆ. ಸಿನಿಮಾ ಕುರಿತು ಹೇಳಿಕೊಳ್ಳಲೆಂದೇ ನಿರ್ಮಾಪಕ ಸಿದ್ಧರಾಜು ತಂಡದ ಜತೆ ಮಾಧ್ಯಮದವರ ಮುಂದೆ ಬಂದಿದ್ದರು.

Advertisement

ಎಂದಿನ ಶೈಲಿಯಲ್ಲಿಯೇ ಯೋಗಿ ಮಾತಿಗಿಳಿದರು. “ಇದು ಸಿಂಪಲ್‌ ಕಥೆ. ಬುದಿಟಛಿ ಹೇಳ್ಳೋದು, ಸಂದೇಶ ಸಾರೋದೆಲ್ಲಾ ಇಲ್ಲ. “ದುನಿಯಾ’ಗೂ “ಯೋಗಿ ದುನಿಯಾ’ಗೂ ಸಂಬಂಧವಿಲ್ಲ. ವಯಸ್ಸಿನ ಹುಡುಗನೊಬ್ಬ ಕೆಲ ಚಟಗಳಿಗೆ ದಾಸನಾಗಿ ಹೇಗೆ ಬದುಕು ಹಾಳು ಮಾಡಿಕೊಳ್ಳುತ್ತಾನೆ ಎಂಬುದರ ಮೇಲೆ ಕಥೆ ಸಾಗುತ್ತದೆ. ಪ್ರೀತಿ, ಹೊಡೆದಾಟ, ವಾಸ್ತವ ಬದುಕು, ಅನಿವಾರ್ಯತೆ ಕಥೆಯ ತಿರುಳು. ಇಡೀ ಚಿತ್ರ ಮೆಜೆಸ್ಟಿಕ್‌ನಲ್ಲಿ ನಡೆದಿದೆ. ರಾತ್ರಿಯಲ್ಲೇ ಬಹುತೇಕ ಚಿತ್ರೀಕರಣವಾಗಿದೆ. ಸಿನಿಮಾ ಶುರುವಾದಾಗಿಂದಲೂ
ಸಾಕಷ್ಟು ಸಮಸ್ಯೆ ಎದುರಾಗಿದ್ದು ನಿಜ. ಶೀರ್ಷಿಕೆ ವಿಷಯದಲ್ಲೂ ಸಮಸ್ಯೆ ಎದುರಾಯ್ತು. ನಿಜ ಹೇಳುವುದಾದರೆ, ಅವರು ನನಗೆ “ದುನಿಯಾ 2′ ಕಥೆ ಹೇಳಿಲ್ಲ. ಈ ಕಥೆಗೆ “ದುನಿಯಾ 2′ ಶೀರ್ಷಿಕೆ ಇಟ್ಟಾಗ ಗಲಾಟೆ ಶುರುಮಾಡಿದರು. 25 ಲಕ್ಷ ಹಣ ಕೇಳಿದ್ರು. ಕೋರ್ಟ್‌ಗೆ ಹೋದ್ರು. ತಿಂಗಳುಗಟ್ಟಲೆ ಕೋರ್ಟ್‌ಗೆ ಅಲೆದಾಡುವಂತಾಯ್ತು. ಕೊನೆಗೆ ನಾವೇ ಹಣ ಕೊಟ್ಟು ಶೀರ್ಷಿಕೆ ಪಡೆದುಕೊಳ್ಳುವುದಕ್ಕಿಂತ, “ಯೋಗಿ ದುನಿಯಾ’ ಹೆಸರಲ್ಲಿ ಚಿತ್ರ ಮಾಡಿದ್ವಿ. ಅವರಿಗೂ ಒಳ್ಳೆಯದಾಗಲಿ’ ಎಂದು ಬೇಸರದಿಂದಲೇ
ಹೇಳಿಕೊಂಡರು ಯೋಗಿ.

ನಿರ್ದೇಶಕ ಹರಿ ಅವರು, ಮೆಜೆಸ್ಟಿಕ್‌ನ ಕತ್ತಲೆ ಪ್ರಪಂಚ ಹೇಗಿರುತ್ತೆ ಎಂಬುದನ್ನಿಲ್ಲಿ ತೋರಿಸಿದ್ದಾರಂತೆ. ಅಲ್ಲಿ ಬಂದು ಉಳಿದುಕೊಳ್ಳುವವರ ಸ್ಥಿತಿ, ಅಲ್ಲಿ ನಡೆಯುವ ಕೆಲಸಗಳು, ಅಲ್ಲಿರುವವರ ಲೈಫ್ ಹೇಗೆಲ್ಲಾ ನಡೆಯುತ್ತೆ ಎಂಬುದು ಚಿತ್ರದ ಹೈಲೈಟ್‌
ಅಂದರು ಅವರು. ನಾಯಕಿ ಹಿತ ಅವರಿಲ್ಲಿ ಮಧ್ಯಮ ಹುಡುಗಿಯ ಪಾತ್ರ ಮಾಡಿದ್ದಾರಂತೆ. ತುಂಬಾ ಬೋಲ್ಡ್‌ ಆಗಿರುವ ಹುಡುಗಿ, ಮೆಜೆಸ್ಟಿಕ್‌ನಲ್ಲಿ ಮಧ್ಯರಾತ್ರಿ ಯಾಕೆ ಇರುತ್ತಾಳೆ ಎಂಬುದಕ್ಕೆ ಸಿನಿಮಾದಲ್ಲೇ ಉತ್ತರ ಸಿಗಲಿದೆ. ಮೆಜೆಸ್ಟಿಕ್‌ನಲ್ಲಿ ಹೀರೋ ಸಿಗುತ್ತಾನೆ. ಲವ್‌ ಆಗುತ್ತೆ. ಆಮೇಲೆ ಏನಾಗುತ್ತೆ ಎಂಬುದು ಸಸ್ಪೆನ್ಸ್‌ ಅಂದರು ಹಿತ. ನಿರ್ಮಾಪಕ ಸಿದಟಛಿರಾಜು ಅವರಿಗೆ ಚಿತ್ರ ಬಿಡುಗಡೆ
ಆಗುತ್ತಿರುವ ಸಂತಸ ಒಂದು ಕಡೆಯಾದರೆ, ಅಂದುಕೊಂಡ ಚಿತ್ರಮಂದಿರಕ್ಕೆ ಕುತ್ತು ಬಂತು ಎಂಬ ಬೇಸರ ಇನ್ನೊಂದು ಕಡೆ. ಸುಮಾರು 180 ಚಿತ್ರಮಂದಿರಗಳಲ್ಲಿ ಬಿಡುಗಡೆ ತಯಾರಿ ಮಾಡಿಕೊಳ್ಳಲಾಗಿದೆ. ಮಂಡಳಿ ಮಾತಿಗೆ ಸ್ಪಂದಿಸಿ, ಚಿತ್ರ ಬಿಡುಗಡೆ ಮುಂದಕ್ಕೆ ಹಾಕಿದೆ. ಆದರೆ, ಈಗ ರಿಲೀಸ್‌ ಮಾಡಲು ಹೋದರೆ, ಬೇರೆಯವರಿಗೂ ಅವಕಾಶ ಕೊಡಲಾಗಿದೆ. ಮಂಡಳಿಯವರು ಕೊಟ್ಟ
ಮಾತು ಉಳಿಸಿಕೊಳ್ಳಲಿಲ್ಲ. ಸಾಕಷ್ಟು ಕಷ್ಟ ಅನುಭವಿಸಿ ನಿರ್ಮಾಪಕರು ಚಿತ್ರ ಮಾಡಿರುತ್ತಾರೆ. ಎಲ್ಲರಿಗೂ ಅನುಕೂಲ ಮಾಡಿಕೊಡುವ ಜವಾಬ್ದಾರಿ ಮಂಡಳಿ ಮೇಲಿದೆ. ಈಗ ಕೇಳ್ಳೋರೆ ಇಲ್ಲವಾಗಿದೆ. ‘ದುನಿಯಾ’ ಮಾಡುವಾಗ ದುಡ್ಡು ಇರಲಿಲ್ಲ. ಆದರೆ, ಯಾರು
ಬೇಕಾದ್ರೂ ಹಣ ಕೊಡುತ್ತಿದ್ದರು. ಈಗ ಹಣ ಇದೆ. ಆದರೆ, ರಿಲೀಸ್‌ ಮಾಡೋಕೆ ನೂರೆಂಟು ತೊಂದರೆ ಅಂದರು ಅವರು. ಶಿವುಮಂಜು, ರೂಪೇಶ್‌ಕುಮಾರ್‌, ಮಹೇಶ್‌, ಸಂದೀಪ್‌, ನೀನಾಸಂ ಅಶ್ವತ್ಥ್ “ಯೋಗಿ ದುನಿಯಾ’ ಅನುಭವ ಹಂಚಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next