ಕಲಬುರಗಿ: ಕಳೆದ 50 ವರ್ಷದ ರಾಜಕೀಯದುದ್ದಕ್ಕೂ ಒಮ್ಮೆಯೂ ಸೋಲರಿಯದ ಸರದಾರ ಮಲ್ಲಿಕಾರ್ಜುನ ಖರ್ಗೆ ಸೋಲು ಅನುಭವಿಸಿದ್ದು, ಸೋಲಿನ ನಾಯಕರ ಸಾಲಿಗೆ ಸೇರಿದ್ದಾರೆ. ಮಾಜಿ ಸಿಎಂ ದಿ| ಎನ್. ಧರ್ಮ ಸಿಂಗ್ ಸತತ 8 ಸಲ ವಿಧಾನಸಭೆಗೆ ಗೆದ್ದಿದ್ದರೂ 2008ರ ವಿಧಾನಸಭಾ ಚುನಾ ವಣೆಯಲ್ಲಿ ಸೋಲು ಅನುಭವಿಸಿದರು.
ನಂತರ 2009ರ ಲೋಕಸಭಾ ಚುನಾವಣೆಗೆ ಬೀದರ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದರು. ನಂತರ 2014ರ ಲೋಕಸಭಾ ಚುನಾವಣೆಯಲ್ಲಿ ಸೋತರು. ಈಗ ಖರ್ಗೆ ಸೋಲುವ ಮುಖಾಂತರ ಧರ್ಮಸಿಂಗ್ ಸಂಸತ್ ಚುನಾವಣಾ ಸಾಲಿಗೆ ಸೇರಿದರು.
ಖರ್ಗೆ ಹಾಗೂ ಧರ್ಮಸಿಂಗ್ ರಾಜಕೀಯದಲ್ಲಿ ಜತೆ-ಜತೆಯಾಗಿ ಬೆಳೆದ ವರು. ಲವ-ಕುಶ ಎಂದೇ ಖ್ಯಾತಿ ಪಡೆದಿದ್ದಾರೆ. ಸತತ 9 ಸಲ 1972ರಿಂದ ರಾಜ್ಯದ ಪ್ರತಿ ವಿಧಾನಸಭೆ ಚುನಾವಣೆಯಲ್ಲಿ ಜತೆ-ಜತೆಯಾಗಿಯೇ ಪ್ರವೇಶಿ ಸುತ್ತಿದ್ದ ಈ ಇಬ್ಬರು ನಾಯಕರು, 2009ರ ಲೋಕಸಭಾ ಚುನಾವಣೆಗೂ ಒಟ್ಟಿಗೆ ಸ್ಪರ್ಧಿಸಿ ಏಕಕಾಲಕ್ಕೆ ಸಂಸತ್‌ಗೆ ಪ್ರವೇಶಿಸಿದವರು.
ಧರ್ಮಸಿಂಗ್-ಮಲ್ಲಿಕಾರ್ಜುನ ಖರ್ಗೆ ಜೋಡಿ ಖ್ಯಾತಿ ಪಡೆದಿರುವುದಕ್ಕೆ ಹಲವು ಕಾರಣಗಳಿವೆ. ಇಬ್ಬರು ಏಕಕಾಲಕ್ಕೆ ವಿಧಾನಸಭೆಗೆ ಪ್ರವೇಶ ಮಾಡಿ ರುವುದು, ಇಬ್ಬರೂ ದೇವರಾಜ ಅರಸು ಸಂಪುಟದಲ್ಲಿಯೇ ಪ್ರಥಮ ಬಾರಿಗೆ ಸಚಿವರಾಗಿ ರಾಜ್ಯ ಸಂಪುಟದ ಖಾತೆಗಳನ್ನು ನಿಭಾಯಿಸಿರುವುದು,
ಇಬ್ಬರೂ ಕೆಪಿಸಿಸಿ ಅಧ್ಯಕ್ಷ, ವಿರೋಧ ಪಕ್ಷದ ನಾಯಕರಾಗಿರುವುದು. ಧರ್ಮಸಿಂಗ್ ಸಿಎಂ ಆಗಿದ್ದರೆ ಖರ್ಗೆ ಮಾತ್ರ ಆ ಭಾಗ್ಯ ಇನ್ನೂ ದೊರಕಿಲ್ಲ. ಅದೇ ರೀತಿ ಧರ್ಮ ಸಿಂಗ್ ಕೇಂದ್ರದಮಂತ್ರಿಯಾಗಿಲ್ಲ. ಈ ಎರಡೇ ಅವಕಾಶದಲ್ಲಿ ಮಾತ್ರ ವ್ಯತ್ಯಾ ಸವಿದೆ. ಈಗ ಇಬ್ಬರೂ ಸೋತು ಸಮಾನತೆ ಕಂಡುಕೊಂಡಂತಾಗಿದೆ.