Advertisement
ಸಿಸಿ ಕೆಮರಾ ಕಣ್ಗಾವಲು ರಾ.ಹೆ. 66ರಲ್ಲಿ ಸಂಚರಿಸುವ ವಾಹನಗಳನ್ನು ತಪಾಸಣೆ ನಡೆಸಿ ಸಂಪೂರ್ಣ ವಿವರ ಪಡೆಯಲಾಗುವುದು. ಅನುಮಾನ ಕಂಡು ಬರುವ ವಾಹನ,ಪ್ರಯಾಣಿಕರನ್ನು ಪ್ರತ್ಯೇಕವಾಗಿ ತಪಾಸಣೆ ಮಾಡುವ ನಿಟ್ಟಿನಿಂದ ವಿಶೇಷ ಕೊಠಡಿ ವ್ಯವಸ್ಥೆ ಕಲ್ಪಿಸಲಾಗಿದೆ. ದಿನದ 24 ಗಂಟೆಗಳ ಕಾಲ ತಪಾಸಣ ಕಾರ್ಯಾಚರಣೆ ನಡೆಸುವುದರಿಂದ ರಾ.ಹೆ. 66ರಲ್ಲಿ ಗುಣಮಟ್ಟದ 2 ಸಿಸಿ ಕೆಮರಾ ಅಳವಡಿಸಲಾಗಿದ್ದು ವಾಹನಗಳ ಚಲನ ವಲನಗಳ ಮೇಲೆ ನಿಗಾ ಇರಿಸಲಿದೆ ಎಂದು ಕೋಟ ಪೊಲೀಸ್ ಠಾಣಾಧಿಕಾರಿ ಸಂತೋಷ್ ಕಾಯ್ಕಿಣಿ ತಿಳಿಸಿದ್ದಾರೆ.
ತಪಾಸಣೆ ಸಂದರ್ಭ ವಾಹನಗಳು ಕುಂಭಾಸಿಯ ವರೆಗೆ ಸಾಲುಗಟ್ಟಿ ನಿಲ್ಲುವುದರಿಂದ ಕೆಲವೊಮ್ಮೆ ಆ್ಯಂಬುಲೆನ್ಸ್ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಈ ಬಗ್ಗೆ ಇಲಾಖೆ ಗಮನಹರಿಸಬೇಕು ಸಾರ್ವಜನಿಕರು ಆಗ್ರಹಿಸಿದ್ದಾರೆ. ಸಿಬಂದಿ ಕೊರತೆ !
ಉಡುಪಿ ಜಿಲ್ಲೆಯಲ್ಲಿಯೇ ಕೋಟ ಪೊಲೀಸ್ ಠಾಣಾ ವ್ಯಾಪ್ತಿ ಅತ್ಯಂತ ಡೊಡ್ಡದಾಗಿದ್ದು ಈಗಾಗಲೇ ಠಾಣೆಯಲ್ಲಿ 8 ಮಂದಿ ಸಿಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2 ಪೊಲೀಸ್ ಸಿಬಂದಿಗಳು ಗುಪ್ತ ವಾರ್ತೆ ಪ್ರಕರಣಗಳ ತನಿಖೆಗೆ ಸಂಬಂಧಿಸಿದಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ, ಇನ್ನುಳಿದ ಸಿಬಂದಿಗಳು ಠಾಣೆಯಲ್ಲಿ ಕಾರ್ಯ ನಿರ್ವಹಿಸಬೇಕಾದ ಅನಿವಾರ್ಯತೆ ಇದೆ. ಇಲ್ಲಿ ವಾಹನ ತಪಾಸಣ ಕೇಂದ್ರ ತೆರೆದಿದ್ದರೂ ಪೊಲೀಸ್ ಸಿಬಂದಿ ಕೊರತೆ ನಡುವೆ ಹೆಚ್ಚುವರಿ ಕಾರ್ಯನಿರ್ವಹಿಸಬೇಕಾದ ಅನಿವಾರ್ಯತೆ ಪೊಲೀಸರದ್ದಾಗಿದೆ.