Advertisement

ಗ್ರಾಮೀಣ ಹೈನುಗಾರರ ಬದುಕನ್ನು ಹಸನಾಗಿಸಿದ ಸಂಘ

10:54 PM Mar 02, 2020 | Sriram |

ಗ್ರಾಮೀಣ ಭಾಗದಲ್ಲಿ ಕೃಷಿಕರಿಗೆ ಹೈನುಗಾರಿಕೆ ಒಂದು ಉತ್ತಮ ಉಪಕಸುಬು. ಇದರ ಮೂಲಕ ಸ್ಥಳೀಯ ಆರ್ಥಿಕಾಭಿವೃದ್ಧಿಯ ಅವಕಾಶವನ್ನು ಮನಗಂಡು ತೆಕ್ಕಟ್ಟೆ ಹಾಲು ಉತ್ಪಾದಕರ ಸಹಕಾರ ಸಂಘ ಸ್ಥಾಪನೆಯಾಗಿದೆ.

Advertisement

ತೆಕ್ಕಟ್ಟೆ: ಗ್ರಾಮೀಣ ಭಾಗದ ಸಣ್ಣ ಹೈನುಗಾರರು ಕೋಟ ಹಾಗೂ ಕೋಟೇಶ್ವರದ ಕಡೆಗೆ ಹಾಲನ್ನು ಖಾಸಗಿಯವರಿಗೆ ನೀಡುವ ಅನಿವಾರ್ಯತೆ ಎದುರಾದಾಗ ಊರಿನ ಹಿರಿಯ ಸಮಾನ ನಾಗರಿಕರು ಒಂದಾಗಿ ಸ್ಥಾಪಿಸಿದ ತೆಕ್ಕಟ್ಟೆ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ 32 ವರ್ಷಗಳ ಇತಿಹಾಸವಿದೆ.

1988ರಲ್ಲಿ ಸ್ಥಾಪನೆ
1988ರಲ್ಲಿ ಗ್ರಾಮೀಣ ಹಾಲು ಉತ್ಪಾದಕರಿಗೆ ಅನುಕೂಲಕರವಾಗುವ ನಿಟ್ಟಿನಿಂದ ದಿ| ತೆಕ್ಕಟ್ಟೆ ನಾಗರಾಜ್‌ ಹೆಬ್ಟಾರ್‌ ಅವರ ದೂರದೃಷ್ಟಿತ್ವದಿಂದಾಗಿ ಆರಂಭಗೊಂಡ ಸಂಘವು ತೆಕ್ಕಟ್ಟೆ ಗ್ರಾಮ ಪಂಚಾಯತ್‌ನ ಹಳೆಯ ಕಟ್ಟಡದಲ್ಲಿ ಆರಂಭಗೊಂಡಿದೆ. ಸಂಘವು ಆರಂಭದಲ್ಲಿ 94 ಸದಸ್ಯರನ್ನು ಒಳಗೊಂಡು ಸರಿಸುಮಾರು 60 ಲೀ. ಹಾಲು ಸಂಗ್ರಹಿಸುತ್ತಿತ್ತು. ಈ ಹಿಂದೆ ಹಾಲು ಕಡಿಮೆ ಪ್ರಮಾಣದಲ್ಲಿ ಸಂಗ್ರಹವಾಗುತ್ತಿರುವುದನ್ನು ಮನಗಂಡು ಸಮೀಪದ ಕುಂಭಾಸಿ ಹಾಗೂ ಕೊಮೆ ಗ್ರಾಮೀಣ ಭಾಗದಲ್ಲಿ ಶಾಖೆ ತೆರೆದು ಹಾಲು ಸಂಗ್ರಹಿಸಲಾಗುತ್ತಿದೆ.

ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟ ಮತ್ತು ಸರಕಾರದ ಹಾಗೂ ಇಲಾಖೆಯ ನೆರವಿನಿಂದ, ಜಾನುವಾರುಗಳಿಗೆ ಬೇಕಾದ ಪಶು ಆಹಾರ, ಹಸಿರು ಮೇವಿನ ಬೀಜ, ರೋಗ ನಿರೋಧಕ ಚುಚ್ಚುಮದ್ದು, ಕೃತಕ ಗರ್ಭಧಾರಣೆ, ವೈಜ್ಞಾನಿಕ ಹೈನುಗಾರಿಕೆ ಬಗ್ಗೆ ಮಾಹಿತಿ ನೀಡುತ್ತಾ ಬಂದಿದೆ. ಪಶು ಸಂಗೋಪನೆ ಇಲಾಖೆಯ ಸಹಕಾರದಿಂದ ಜಾನುವಾರುಗಳಿಗೆ ಕಾಲು ಬಾಯಿ ಲಸಿಕಾ ಕಾರ್ಯವನ್ನು ಮಾಡಲಾಗುತ್ತಿದೆ.

ಕಾರ್ಯಕ್ರಮ
ಗ್ರಾಮೀಣ ಹೈನುಗಾರರ ಆರ್ಥಿಕತೆಯಲ್ಲಿ ಮಹತ್ತರ ಪಾತ್ರ ವಹಿಸುತ್ತಿದೆ. ಈ ಹಿಂದೆ ಸಂಘದ ವತಿಯಿಂದ ವಲಯ ಮಟ್ಟದ ಜಾನುವಾರು ಪ್ರದರ್ಶನಗೊಂಡಿದೆ ಹಾಗೂ ವಿದ್ಯಾರ್ಥಿ ವೇತನ ಹಾಗೂ ಹೈನುಗಾರರನ್ನು ಪ್ರೋತ್ಸಾಹಿಸುವ ನಿಟ್ಟಿನಿಂದ ಪ್ರತಿ ವರ್ಷ ಬಹುಮಾನವನ್ನು ನೀಡಿ ಉತ್ತೇಜಿಸುತ್ತಿದ್ದಾರೆ.13 ವರ್ಷಗಳಿಂದ ಒಕ್ಕೂಟದ ನಿರ್ದೇಶಕರಾಗಿ ಕಾರ್ಯನಿರ್ವಹಣೆ ಕುಂದಾಪುರ ತಾಲೂಕಿನ ಗ್ರಾಮೀಣ ಭಾಗದಲ್ಲಿರುವ ತೆಕ್ಕಟ್ಟೆ ಹಾಲು ಉತ್ಪಾದಕರ ಸಹಕಾರ ಸಂಘ ನಿ. ಇದರ ಹಾಲಿ ಅಧ್ಯಕ್ಷ ಟಿ.ಸೂರ್ಯ ಶೆಟ್ಟಿ ಕೃಷಿ ಹಾಗೂ ಹೈನುಗಾರಿಕೆಯಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ಜತೆಗೆ ಕಳೆದ 13 ವರ್ಷಗಳಿಂದಲೂ ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟದ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವು ಸಂಘದ ಹೆಮ್ಮೆ .

Advertisement

ಉತ್ತಮ ಸಂಘ ಪ್ರಶಸ್ತಿ
ಹಾಲು ಉತ್ಪಾದಕ ಸದಸ್ಯರಿಂದ ಸಂಗ್ರಹವಾದ ಹಾಲು ಕೊಮೆ ಹಾಲು ಉತ್ಪಾದಕರ ಸಂಘದ ಬಿಎಂಸಿಗೆ ರವಾನಿಸ ಲಾಗುತ್ತಿದೆ. ದ.ಕ. ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿ. 1996-97ನೇ ಸಾಲಿನಲ್ಲಿ ತಾಲೂಕಿನ ಉತ್ತಮ ಸಂಘ ಪ್ರಶಸ್ತಿ ಲಭಿಸಿದೆ.

ಸೆ.22, 1996 ರಂದು ನೂತನ ಕಟ್ಟಡ ಗೋಧಾರೆಯನ್ನು ಅಂದಿನ ಬಂದರು ಮತ್ತು ಮೀನುಗಾರಿಕೆ ಸಚಿವ ಕೆ.ಜಯಪ್ರಕಾಶ್‌ ಹೆಗ್ಡೆ ಅವರು ಉದ್ಘಾಟಿಸಿದರು. ಪ್ರಸ್ತುತ ಸರಾಸರಿ 700 ಲೀ. ಹಾಲು ಸಂಗ್ರಹವಾಗುತ್ತಿದೆ. ಇಲ್ಲಿ ಒಟ್ಟು 338 ಸದಸ್ಯರಿದ್ದು ಹಾಲು ಪೂರೈಸುವ ಉತ್ಪಾದಕ ಸದಸ್ಯರು ಸರಾಸರಿ ಸುಮಾರು 125 ಮಂದಿ .

ಒಕ್ಕೂಟದಿಂದ ದೊರಕುವ ಸವಲತ್ತು ಸಮರ್ಪಕವಾಗಿ ವಿನಿ ಯೋಗಿಸಿಕೊಂಡು ಸದಸ್ಯರಿಂದ ಉತ್ತಮ ಗುಣಮಟ್ಟದ ಹಾಲನ್ನು ಸಂಗ್ರಹಿಸಿ ಮಾದರಿ ಸಂಘವನ್ನಾಗಿಸಬೇಕು ಎನ್ನುವ ಗುರಿ ಹೊಂದಿದೆ.
-ಟಿ. ಸೂರ್ಯ ಶೆಟ್ಟಿ
ತೆಕ್ಕಟ್ಟೆ , ಅಧ್ಯಕ್ಷರು,ತೆಕ್ಕಟ್ಟೆ ಹಾ. ಉ.ಸ. ಸಂಘ ನಿ.

ಅಧ್ಯಕ್ಷರು:
ದಿ| ತೆಕ್ಕಟ್ಟೆ ನಾಗರಾಜ್‌ ಹೆಬ್ಟಾರ್‌, ವಾದಿರಾಜ್‌ ಹತ್ವಾರ್‌, ಟಿ.ಸೂರ್ಯ ಶೆಟ್ಟಿ, ಹೆರಿಯಣ್ಣ ಶೆಟ್ಟಿ, ದಿ| ಕೆ.ರಾಮ ಕಾರಂತ, ಟಿ.ಸೂರ್ಯ ಶೆಟ್ಟಿ, ಟಿ.ಆರ್‌.ಹತ್ವಾರ್‌, ಟಿ.ಸುರೇಂದ್ರ ಶೆಟ್ಟಿ, ಎಂ.ಪದ್ಮಕರ ಶೆಟ್ಟಿ, ಟಿ.ಆರ್‌.ಹತ್ವಾರ್‌, ಟಿ.ಸೂರ್ಯ ಶೆಟ್ಟಿ, ಟಿ.ವಾದಿರಾಜ ಹತ್ವಾರ್‌ , ಟಿ. ಸೂರ್ಯ ಶೆಟ್ಟಿ (ಹಾಲಿ) .
ಕಾರ್ಯದರ್ಶಿಗಳು:
ಕಾರ್ಯದರ್ಶಿ : ಕಳೆದ 32 ವರ್ಷಗಳಿಂದಲೂ ವಿಶ್ವನಾಥ ಭಟ್ಟ ಕಾರ್ಯದರ್ಶಿಯಾಗಿದ್ದಾರೆ. ಸಿಬಂದಿ : ಚಂದ್ರಿಕಾ, ಗೀತಾ (ಹಾಲು ಪರೀಕ್ಷಕರು).

-  ಟಿ.ಲೋಕೇಶ್‌ ಆಚಾರ್ಯ ತೆಕ್ಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next