ತೆಕ್ಕಟ್ಟೆ: ಕುಂಭಾಶಿ ಆನೆಗುಡ್ಡೆ ವಿನಾಯಕ ದೇಗುಲದಲ್ಲಿ ಬ್ರಹ್ಮರಥೋತ್ಸವ ಅಷ್ಟೋತ್ತರ ಸಹಸ್ರ ನಾಳಿಕೇರ ಗಣಪತಿ ಯಾಗ ಮತ್ತು ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಡಿ.2ರಿಂದ 6ರ ವರೆಗೆ ಜರಗಲಿದೆ.
ಧಾರ್ಮಿಕ ಕಾರ್ಯಕ್ರಮಗಳು
ಡಿ.3ರಂದು ಬೆಳಗ್ಗೆ ಉಪನಿಷತ್ ಕಲಶಾಭಿಷೇಕ, ಗಣಹೋಮ, ಸತ್ಯಗಣಪತಿ ವ್ರತ, ಮಹಾಪೂಜೆ ರಾತ್ರಿ ರಂಗಪೂಜಾ, ಪಲ್ಲಕಿ ಉತ್ಸವ ನಡೆಯಲಿದ್ದು, ಡಿ. 4ರಂದು ಬೆಳಗ್ಗೆ ನವಕ ಪ್ರಧಾನ ಕಲಶಾಭಿಷೇಕ, ಅಗ್ನಿ ಜನನ, ಗಣಪತಿ ಹೋಮ, ರಾತ್ರಿ ಮೆರವಣಿಗೆ, ರಂಗಪೂಜೆ, ಪಲ್ಲಕಿ ಉತ್ಸವ, ಡಿ. 5ರಂದು ಬೆಳಗ್ಗೆ ಅಷ್ಟೋತ್ತರ ಸಹಸ್ರ ನಾಳಿಕೇರ ಗಣಪತಿ ಯಾಗ, ಬ್ರಹ್ಮರಥೋತ್ಸವ, ಪಾನಕ ವಿತರಣೆ, ಅನ್ನಸಂತರ್ಪಣೆ, ಸಂಜೆ ಗಂಟೆ 7ಕ್ಕೆ ರಥೋತ್ಸವ, ಸುಡುಮದ್ದು ಪ್ರದರ್ಶನ ನಡೆಯಲಿದೆ. ಡಿ. 6ರಂದು ಬೆಳಗ್ಗೆ ಚೂರ್ಣೋತ್ಸವ, ಅವಭೃಥ ಸ್ನಾನ, ವಸಂತಾರಾಧನೆ, ಮಂತ್ರಾಕ್ಷತೆ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳು: ಡಿ.3ರಂದು ಸಂಜೆ ಗಂಟೆ 4ರಿಂದ ವಿದುಷಿ ಪಾವನಾ ಹಾಗೂ ಬಳಗ, ಶಾರದಾ ನೃತ್ಯಾಲಯ, ಮಾರ್ಪಳ್ಳಿ ಅವರಿಂದ ಭರತನಾಟ್ಯ ‘ನಾಟ್ಯಾಮೃತ’, ಸಂಜೆ ಗಂಟೆ 6 ರಿಂದ ‘ಯಕ್ಷ ಮಂಜುಳಾ’ ಬಳಗ ಕದ್ರಿ ಇವರಿಂದ ಯಕ್ಷಗಾನ ತಾಳಮದ್ದಳೆ’. ಡಿ. 4ರಂದು ಸಂಜೆ 6 ಗಂಟೆಗೆ ಸತೀಶ್ ಹೆಮ್ಮಾಡಿ ಅವರ ನೇತೃತ್ವದ ಕಣ್ಮಿಂಚು ಕಲಾತಂಡದಿಂದ ‘ವಿಸ್ಮಯ ವೈವಿಧ್ಯ’ ಪ್ರದರ್ಶನಗೊಳ್ಳಲಿದೆ. ಡಿ.5ರಂದು ಸಂಜೆ ಗಂಟೆ 5ರಿಂದ ಸತೀಶ್ ದೇವಾಡಿಗ ಮತ್ತು ಬಳಗ ಸಾಲಿಗ್ರಾಮ ಇವರಿಂದ ‘ಸ್ಯಾಕ್ಸೋಫೋನ್ ವಾದನ’ ಹಾಗೂ ರಾತ್ರಿ ಗಂಟೆ 9.30ರಿಂದ ಮೆಕ್ಕೆಕಟ್ಟು ಮೇಳದವರಿಂದ ‘ಪೌರಾಣಿಕ ಪ್ರಸಂಗ’ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ. ಡಿ.3ರಿಂದ ಡಿ.4ರ ತನಕ ಪ್ರತಿದಿನ ಅಪರಾಹ್ನ ಗಂಟೆ 3.30 ರಿಂದ 5.30 ರವರೆಗೆ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ಜರಗಲಿರುವುದು ಎಂದು ಆಡಳಿತ ಧರ್ಮದರ್ಶಿ ಕೆ.ಶ್ರೀರಮಣ ಉಪಾಧ್ಯಾಯ ಪ್ರಕಟನೆಯಲ್ಲಿ ತಿಳಿಸಿದ್ದಾರೆ.