Advertisement

Thekkatte: ಕುಸಿತದ ಭೀತಿಯಲ್ಲಿದೆ ಕನ್ನುಕೆರೆ ತಡೆಗೋಡೆ

02:25 PM Oct 01, 2024 | Team Udayavani |

ತೆಕ್ಕಟ್ಟೆ: ಇಲ್ಲಿನ ಗ್ರಾ.ಪಂ. ವ್ಯಾಪ್ತಿಯ ಜಲಮೂಲದಲ್ಲಿ ಒಂದಾಗಿರುವ ಸುಮಾರು 1.07 ಎಕ್ರೆ ವಿಸ್ತೀರ್ಣದ ಕನ್ನುಕರೆಯ ಸುತ್ತ ಸುಮಾರು 80 ಮೀಟರ್‌ ವಿಸ್ತೀರ್ಣದಲ್ಲಿ ಕಾಂಕ್ರೀಟ್‌ ತಡೆಗೋಡೆ ನಿರ್ಮಾಣವಾಗಿದ್ದು, ಕಾಮಗಾರಿ ಪೂರ್ಣಗೊಂಡು ನಾಲ್ಕು ತಿಂಗಳಿನಲ್ಲೇ ಕಾಂಕ್ರೀಟ್‌ ತಡೆಗೋಡೆಯು ಕುಸಿಯುಲು ಆರಂಭವಾಗಿದ್ದು, ಅಪಾಯಕಾರಿಯಾಗಿದೆ.

Advertisement

ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ ಸುಮಾರು 1 ಕೋಟಿ ರೂ. ಅನುದಾನ ಬಿಡುಗಡೆಯಾಗಿ ಕಾಮಗಾರಿ ನಡೆಸಲಾಗಿತ್ತು.

ಶಾಸಕ ಕೊಡ್ಗಿ ಭೇಟಿ
ತಡೆಗೋಡೆ ಅಪಾಯದ ಸ್ಥಿತಿಯಲ್ಲಿರುವ ಬಗ್ಗೆ ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಶಾಸಕ ಎ. ಕಿರಣ್‌ ಕುಮಾರ್‌ ಕೊಡ್ಗಿ ಅವರು ಸೆ. 30ರಂದು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಅನಂತರ ಉದಯವಾಣಿಯ ಜತೆ ಮಾತನಾಡಿ, ಕಾಂಕ್ರೀಟ್‌ ತಡೆಗೋಡೆಗಳು ಸಂಪೂರ್ಣ ಕುಸಿತಗೊಂಡಿರುವುದರಿಂದ ಅದನ್ನು ತೆಗೆದು ಹೊಸದಾಗಿ ಕಾಮಗಾರಿ ಮಾಡಬೇಕು ಎಂದು ಸಂಬಂಧಪಟ್ಟ ಎಂಜಿನಿಯರ್‌ ಗಮನಕ್ಕೆ ತಂದಿದ್ದೇನೆ. ಈಗಾಗಲೇ ಕುಸಿತಗೊಂಡಿರುವ ಕೆರೆಯ ದಡದಲ್ಲಿಯೇ ನಾಗಬನ ಹಾಗೂ ಜನವಸತಿ ಪ್ರದೇಶಗಳಿರುವುದರಿಂದ ಮುಂಜಾಗ್ರತ ಕ್ರಮವಾಗಿ ತತ್‌ಕ್ಷಣವೇ ದಡದಲ್ಲಿ ಮಣ್ಣು ಹಾಕಿಸುವಂತೆ ತಿಳಿಸಿದ್ದೇನೆ ಎಂದು ಹೇಳಿದರು.

ತೆಕ್ಕಟ್ಟೆ ಗ್ರಾ.ಪಂ. ಪಿಡಿಒ ಸುನಿಲ್‌, ಗ್ರಾ.ಪಂ. ಸದಸ್ಯೆ ಪ್ರತಿಮಾ, ಕನ್ನುಕೆರೆ ಅಭಿವೃದ್ಧಿ ಸಮಿತಿಯ ಸದಸ್ಯ ರಾಘವೇಂದ್ರ ಪುರಾಣಿಕ್‌, ಗಣೇಶ್‌ ಗಾಣಿಗ ಕನ್ನುಕೆರೆ, ವಿಶ್ವ ಹಿಂದೂ ಪರಿಷತ್‌ ಕುಂದಾಪುರ ಇದರ ಉಪಾಧ್ಯಕ್ಷ ಶ್ರೀನಾಥ ಶೆಟ್ಟಿ ಮೇಲ್ತಾರುಮನೆ, ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಕಿರಣ್‌ ಪೂಜಾರಿ ತೆಕ್ಕಟ್ಟೆ, ಗುತ್ತಿಗೆದಾರ ಸುರೇಶ್‌ ಶೆಟ್ಟಿ, ದರ್ಶನ್‌ ದೇವಾಡಿಗ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

Advertisement

ಅಪಾಯದಲ್ಲಿ ಜನವಸತಿ ಪ್ರದೇಶಗಳು
ಕನ್ನುಕೆರೆಯ ತೀರದಲ್ಲಿಯೇ ಜನವಸತಿ ಪ್ರದೇಶವಿರುವುದರಿಂದ ತಡೆಗೋಡೆ ಸಂಪೂರ್ಣ ಕುಸಿದರೆ ಅವಘಡ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯವರು ಮುಂಜಾಗ್ರತ ಕ್ರಮ ಕೈಗೊಳ್ಳುವಂತೆ ಕನ್ನುಕೆರೆ ಅಭಿವೃದ್ಧಿ ಸಮಿತಿಯ ಸದಸ್ಯರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next