Advertisement

ಕಳ್ಳತನ: ವಸ್ತು ವಾರಸುದಾರರಿಗೆ ಹಸ್ತಾಂತರ

02:04 PM Nov 25, 2021 | Team Udayavani |

ಮಂಡ್ಯ: ಜಿಲ್ಲೆಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣಗಳಲ್ಲಿ ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದ್ದ ಚಿನ್ನಾಭರಣ, ವಾಹನ, ನಗದು ಸೇರಿದಂತೆ ವಿವಿಧ 1.43 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಕಳೆದುಕೊಂಡಿದ್ದ ವಾರಸುದಾರರಿಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಯತೀಶ್‌ ವಿತರಿಸಿದರು.

Advertisement

ವಾರಸುದಾರರಿಗೆ ಹಸ್ತಾಂತರ: ನಗರದ ಡಿಎಆರ್‌ ಪೊಲೀಸ್‌ ಗ್ರೌಂಡ್‌ನ‌ಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್ಪಿ ಯತೀಶ್‌, ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಿದ್ದ ರಾಬರಿ, ಡಕಾಯಿತಿ, ದರೋಡೆ ಸಂಚು, ಮನೆ, ವಾಹನ, ಹಸು ಕಳ್ಳತನ ಸೇರಿದಂತೆ 84 ವಿವಿಧ ಪ್ರಕರಣಗಳನ್ನು ಭೇದಿಸಿ ವಶಪಡಿಸಿ ಕೊಂಡಿದ್ದ 1,48,58,560 ರೂ. ಮೌಲ್ಯದ ವಸ್ತುಗಳನ್ನು ಕಳೆದುಕೊಂಡಿದ್ದ ವಾರಸುದಾ ರರಿಗೆ ವಿತರಿಸಲಾಗಿದೆ ಎಂದು ತಿಳಿಸಿದರು.

ವಸ್ತುಗಳು ಯಾವುವು?: 62.68 ಲಕ್ಷ ರೂ. ಮೌಲ್ಯದ 1 ಕೆ.ಜಿ. 541 ಗ್ರಾಂ ಚಿನ್ನಾಭರಣ, 2.48 ಲಕ್ಷ ರೂ. ಮೌಲ್ಯದ 4 ಕೆಜಿ 570 ಗ್ರಾಂ ಬೆಳ್ಳಿ ಆಭರಣ, 84 ವಾಹನ, 3 ಕಾರು, 2 ಲಾರಿ, 1 ಆಟೋ, 7.11 ಲಕ್ಷ ರೂ. ನಗದು, 4 ಲ್ಯಾಪ್‌ಟಾಪ್‌, 9 ಮೊಬೈಲ್‌, 10 ಹಸು, 5 ಕುರಿ, 5.48 ಲಕ್ಷ ರೂ. ಮೌಲ್ಯದ ಹನಿ ನೀರಾವರಿಯ 116 ಬಂಡಲ್‌ ಪೈಪ್‌ಗ್ಳು, 1.50 ಲಕ್ಷ ರೂ. ಮೌಲ್ಯದ ಸಾವಿರ ಕೆ.ಜಿ.ಅಲ್ಯೂಮಿನಿಯಂ ವೈರ್‌, 27,600 ರೂ. ಮೌಲ್ಯದ 92 ಕಬ್ಬಿಣದ ಪೈಪ್‌ಗ್ಳು, 75 ಸಾವಿರ ರೂ. ಮೌಲ್ಯದ 1500 ಕೆ.ಜಿ.ಕಬ್ಬಿಣ, ಬ್ಯಾಟರಿ 11, 68 ಸಾವಿರ ರೂ. ಮೌಲ್ಯದ ಕಬ್ಬಿಣದ ಶೀಟುಗಳು, 6 ಮೋಟಾರು, 2 ಸ್ಟಾರ್ಟರ್‌, 1.18 ಲಕ್ಷ ರೂ. ಮೌಲ್ಯದ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಿವರಿಸಿದರು.

ಇದನ್ನೂ ಓದಿ:- ಮನೆಯಲ್ಲಿ ಕೆಜಿಗಟ್ಟಲೆ ಬಂಗಾರವಿದ್ದರೂ ಬ್ಯಾಂಕ್ ಲಾಕರ್ ಖಾಲಿ! ; ಎಸಿಬಿ ಶಾಕ್

ಡಕಾಯಿತಿ 1, ದರೋಡೆಗೆ ಹೊಂಚು 2, ರಾಬರಿ 3, ಸರಗಳ್ಳತನ 5, ಹಗಲು ಮನೆಗಳ್ಳತನ 8, ರಾತ್ರಿ ಕಳ್ಳತನ 14, ಮನೆಗಳ್ಳತನ 2, ವಾಹನಗಳ ಕಳ್ಳತನ 25, ಹಸು ಕಳ್ಳತನ 4, ಸಾಮಾನ್ಯ ಕಳ್ಳತನ 17, ಇತರೆ 2 ಸೇರಿದಂತೆ ಒಟ್ಟು 84 ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಬಂಧಿ ಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು. ಗೋಷ್ಠಿಯಲ್ಲಿ ಎಎಸ್ಪಿ ಧನಂಜಯ, ಡಿವೈಎಸ್ಪಿಗಳಾದ ಮಂಜುನಾಥ್‌, ಲಕ್ಷ್ಮೀನಾರಾಯಣ, ಇನ್ಸ್‌ಪೆಕ್ಟರ್‌ಗಳಾದ ಸಂತೋಷ್‌, ಆನಂದಗೌಡ, ಭರತ್‌, ನಿರಂಜನ್‌ ಸೇರಿದಂತೆ ಅಧಿಕಾರಿಗಳಿದ್ದರು.

Advertisement

 ಡಿ.2ಕ್ಕೆ ವಾರಸುದಾರರಿಲ್ಲದ 17 ಬೈಕ್‌ ಹರಾಜು

ಮದ್ದೂರು: ಮದ್ದೂರು ಸಂಚಾರ ಪೊಲೀಸ್‌ ಠಾಣಾ ಆವರಣದಲ್ಲಿ ವಾರಸುದಾರರಿಲ್ಲದೇ ಇರುವ 17 ದ್ವಿಚಕ್ರ ವಾಹನಗಳನ್ನು ಹರಾಜು ನಡೆಸಲು ರಾಜ್ಯ ಪತ್ರದಲ್ಲಿ ಅಧಿಸೂಚನೆ ಹೊರಡಿಸಿರುವ ಕಾರಣ ಹರಾಜು ಪ್ರಕ್ರಿಯೆ ಕೈಗೊಂಡಿರುವುದಾಗಿ ಸಂಚಾರಿ ಪೊಲೀಸ್‌ ಠಾಣೆ ಪ್ರಕಟಣೆಯಲ್ಲಿ ತಿಳಿಸಿದೆ.

17 ದ್ವಿಚಕ್ರ ವಾಹನಗಳನ್ನು ಆರ್‌ಟಿಒ ಅಧಿಕಾರಿಗಳಿಂದ ಬೆಲೆ ನಿಗದಿಗೊಳಿಸಿ ಹರಾಜು ಮಾಡಲು ನ್ಯಾಯಾಲಯ ಆದೇಶ ನೀಡಿರುವ ಕಾರಣ ಡಿ.2ರ ರಂದು ಹರಾಜು MSTC ONLINE PROTAL ನಡೆಸಲು ತೀರ್ಮಾನಿಸಿದೆ. ವಾಹನ ಪಡೆಯಲು ಇಚ್ಚಿಸುವ ಬಿಡ್‌ದಾರರು MSTC ONLINE PROTAL ವೆಬ್‌ಸೈಟ್‌ನಲ್ಲಿ ಭಾಗವಹಿಸಬಹುದಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಮದ್ದೂರು ಸಂಚಾರ ಪೊಲೀಸ್‌ ಠಾಣೆ ಸಬ್‌ ಇನ್ಸ್‌ಪೆಕ್ಟರ್‌ ಮೊ.ಸಂ.9480804880 ಸಂಪರ್ಕಿಸಲು ಕೋರಲಾಗಿದೆ.

 “ನಾನು ವಿ.ಸಿ.ಫಾರಂನಲ್ಲಿ ಕೆಲಸ ನಿರ್ವಹಿ ಸುತ್ತಿದ್ದು, ಅಲ್ಲಿಯೇ ವಸತಿ ಗೃಹದಲ್ಲಿ ವಾಸವಾಗಿದ್ದೇನೆ. ರಾತ್ರಿ ವೇಳೆ ನಮ್ಮ ಮನೆ ಯಲ್ಲಿ ಚಿನ್ನದ ನೆಕ್ಲೆಸ್‌, ಬಳೆ, ಓಲೆ, ಉಂಗುರ ಸೇರಿದಂತೆ ಇತರೆ ಚಿನ್ನಾಭರಣಗಳು ಕಳ್ಳತನ ವಾಗಿದ್ದವು. ಕಳ್ಳತನವಾದ 9 ದಿನಗಳಲ್ಲಿಯೇ ಪತ್ತೆ ಹಚ್ಚಿ ವಾಪಸ್‌ ನೀಡಿದ್ದಾರೆ. ಪೊಲೀಸರಿಗೆ ನನ್ನ ಧನ್ಯವಾದಗಳು.” – ಗಾಯತ್ರಮ್ಮ, ಒಡವೆ ಕಳೆದುಕೊಂಡಿದ್ದ ಮಹಿಳೆ.

 “ಮದ್ದೂರಿನಿಂದ ಮಳವಳ್ಳಿಗೆ ಬರುವಾಗ ಕಾರು ಅಡ್ಡಗಟ್ಟಿ ಸೆ.21ರಂದು ಕೆಲವು ದುಷ್ಕರ್ಮಿಗಳು ದರೋಡೆ ಮಾಡಿದ್ದರು. ಪತ್ನಿಯ ಮಾಂಗಲ್ಯ ಸರ ಇತರೆ ಒಡವೆಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ ಒಡವೆ ಹಿಂದಿರುಗಿಸಿದ್ದಾರೆ.” – ಶಿವಮಾದಪ್ಪ, ರಾಗಿಬೊಮ್ಮನಹಳ್ಳಿ ಗ್ರಾಮ, ಮಳವಳ್ಳಿ.

Advertisement

Udayavani is now on Telegram. Click here to join our channel and stay updated with the latest news.

Next