Advertisement
ಕಳೆದ ಮಾರ್ಚ್ 10 ಹಾಗೂ 13ರ ಮಧ್ಯೆ ಮಂಜೇಶ್ವರ ಚೆಕ್‌ಪೋಸ್ಟ್ ಬಳಿಯಲ್ಲಿ ರೈಲ್ವೇ ಇಲಾಖೆಯ ಸ್ವಾಧೀನದಲ್ಲಿರುವ ಸ್ಥಳದಿಂದ ತೇಗಿನ ಮರ ಕಳವು ಮಾಡಲಾಗಿದೆ.
ಕಾಸರಗೋಡು: ಸರಿಯಾದ ದಾಖಲೆಗಳಿಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ 6 ಲಕ್ಷ ರೂ.ಗಳನ್ನು ಅಂಬಲತ್ತರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಗುರುಪುರದಿಂದ ಹೊಸದುರ್ಗ ವಿಧಾನಸಭಾ ಕ್ಷೇತ್ರದ ಫ್ಲೆಯಿಂಗ್ ಸ್ಕ್ವಾಡ್(1) ಎಕ್ಸಿಕ್ಯೂಟಿವ್ ಮೆಜಿಸ್ಟ್ರೇಟ್ ಕೆ. ರಮೇಶ್ ಮತ್ತು ಎಸ್.ಐ. ಮಧುಸೂದನನ್ ಮಡಿಕೈ ಇವರ ನೇತೃತ್ವದಲ್ಲಿ ವಶಪಡಿಸಲಾಗಿದೆ. ಪಡನ್ನಕ್ಕಾಡ್ ನಿವಾಸಿ, ಅಂಬಲತ್ತರ ಪೊಲೀಸ್ ಠಾಣೆಯ ಪರಿಸರದಲ್ಲಿ ವಾಸಿಸುವ ಮೊದು ಅವರ ಕಾರಿನಿಂದ ಹಣ ವಶಪಡಿಸಲಾಗಿದೆ. ಹಣವನ್ನು ಕಾಂಞಂಗಾಡ್ ಸಬ್ ಟ್ರಶರಿಯಲ್ಲಿರಿಸಲಾಗಿದೆ.