Advertisement

Uppinangady: ಟೆಲಿಕಾಂ ಕಂಪೆನಿಯ ಕೇಬಲ್‌ಗ‌ಳ ಕಳವು

07:08 PM Jun 20, 2024 | Team Udayavani |

ಉಪ್ಪಿನಂಗಡಿ: ಇಲ್ಲಿನ ಕುಮಾರಧಾರಾ ನದಿಗೆ ಬ್ರಿಟೀಷರ ಆಳ್ವಿಕೆಯ ಅವಧಿಯಲ್ಲಿ ನಿರ್ಮಿಸಲಾಗಿದ್ದ ಹಳೇ ಸೇತುವೆಯಲ್ಲಿ ಟೆಲಿಕಾಂ ಸಂಸ್ಥೆಗಳಿಂದ ಅಳವಡಿಸಲಾಗಿದ್ದ ಕೇಬಲ್‌ಗ‌ಳನ್ನು ಕಳ್ಳರು ಕತ್ತರಿಸಿ ಕದ್ದೊಯ್ದ ಘಟನೆ ಮಂಗಳವಾರ ರಾತ್ರಿ ನಡೆದಿದೆ.

Advertisement

ಸೇತುವೆಯ ಇಕ್ಕೆಲಗಳಲ್ಲಿ ಕೇಬಲ್‌ ಅಳವಡಿಸಿದ್ದ ಟೆಲಿಕಾಂ ಸಂಸ್ಥೆಗಳು, ಅದರ ಸುರಕ್ಷತೆಗಾಗಿ ಸಿಮೆಂಟ್‌ ಕಾಂಕ್ರೀಟ್‌ ಹಾಕಿದ್ದರು. ಹೀಗೆ ಅಳವಡಿಸಲಾದ ಕೇಬಲ್‌ಗ‌ಳಲ್ಲಿ ತಾಮ್ರದ ಕೇಬಲ್‌ಗ‌ಳು ಇರುವುದನ್ನು ಕಂಡುಕೊಂಡ ಕಳ್ಳರು ಸಿಮೆಂಟ್‌ ಕಾಂಕ್ರೀಟ್‌ ಅನ್ನು ಒಡೆದು ಕೇಬಲ್‌ಗ‌ಳನ್ನು ಕಿತ್ತು ಕತ್ತರಿಸಿ ಕದ್ದೊಯ್ದಿದ್ದಾರೆ.

ಬಿಎಸ್‌ಎನ್‌ಎಲ್‌ ಸಂಸ್ಥೆಯದ್ದು ಎನ್ನಲಾದ ಈ ಕಾಪರ್‌ ಕೇಬಲ್‌ ಪ್ರಸಕ್ತ ಬಳಕೆಯಲ್ಲಿ ಇಲ್ಲವಾಗಿದೆ. ಬದಲಾದ ತಂತ್ರಜ್ಞಾನದಲ್ಲಿ ಫೈಬರ್‌ ಕೇಬಲ್‌ ಬಳಕೆಯಲ್ಲಿರುವ ಕಾರಣ ಹಳೇಯ ಕಾಪರ್‌ ಕೇಬಲ್‌ಗ‌ಳು ಭೂಮಿಯಲ್ಲಿ ಅಳವಡಿಸಿರುವುದು ಹಾಗೆಯೇ ಉಳಿದಿರುತ್ತದೆ. ಇಂತಹ ಕೇಬಲ್‌ಗ‌ಳು ಹೆದ್ದಾರಿ ಅಗಲೀಕರಣ ಕಾಮಗಾರಿಯ ವೇಳೆ ತೆರವುಗೊಂಡಿರುತ್ತದೆ. ಹೀಗೆ ತೆರವುಗೊಂಡ ಕೇಬಲ್‌ಗ‌ಳನ್ನು ಪುನರಪಿ ಸಂಗ್ರಹಿಸುವ ವ್ಯವಸ್ಥೆ ಬಿಎಸ್‌ಎನ್‌ಎಲ್‌ ಸಂಸ್ಥೆಯಲ್ಲಿ ಇಲ್ಲದ ಕಾರಣ, ಇದನ್ನು ಕಂಡವರು ಸಂಗ್ರಹಿಸಿ ಮಾರಾಟ ಮಾಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ ದುಬಾರಿ ಬೆಲೆ ಲಭಿಸುವ ಕಾಪರ್‌ ಕೇಬಲ್‌ಗ‌ಳ ಲಾಭವನ್ನು ಅರಿತಿರುವ ಮಂದಿ ಉಪ್ಪಿನಂಗಡಿಯ ಕುಮಾರಧಾರಾ ಸೇತುವೆಯಲ್ಲಿ ಅಳವಡಿಸಲಾದ ಕೇಬಲ್‌ಗ‌ಳನ್ನು ಕಾಂಕ್ರೀಟ್‌ ಪಟ್ಟಿಯಿಂದ ಹೊರತೆಗೆದು ಕದ್ದೊಯ್ದಿದ್ದಾರೆ. ಸರಕಾರಿ ಸೊತ್ತಾಗಿರುವ ಈ ಬೆಲೆಬಾಳುವ ಕಾಪರ್‌ ಕೇಬಲ್‌ಗ‌ಳನ್ನು ರಕ್ಷಿಸುವ ಬಗ್ಗೆ ಬಿಎಸ್‌ಎನ್‌ಎಲ್‌ ಇಲಾಖೆ ಗಮನ ಹರಿಸಬೇಕಾಗಿದೆ ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next