Advertisement

Chain Theft: ವೃದ್ಧೆಗೆ ಚಾಕು ತೋರಿಸಿ ಮಾಂಗಲ್ಯ ಸರ ಕಸಿದ ದುಷ್ಕರ್ಮಿಗಳು ಪರಾರಿ

10:54 AM Jun 09, 2024 | Team Udayavani |

ಚನ್ನಪಟ್ಟಣ: ನಗರದಲ್ಲಿ ಬೆಳಗಿನ ಜಾವ ವಾಯುವಿಹಾರಕ್ಕೆ ತೆರಳಿದ್ದ ವೃದ್ಧೆಯ 2 ಲಕ್ಷ ರೂ. ಮೌಲ್ಯದ ಮಾಂಗಲ್ಯ ಸರವನ್ನು ಇಬ್ಬರು ದುಷ್ಕರ್ಮಿಗಳು ಕಸಿದುಕೊಂಡು ಪರಾರಿಯಾಗಿದ್ದಾರೆ. ನಗರದ ರಾಷ್ಟ್ರೀಯ ಹೆದ್ದಾರಿ 48 ರ ದೊಡ್ಡೇರಿ ಬಳಿಯಲ್ಲಿ ಶನಿವಾರ ಬೆಳಗಿನ ಜಾವ 6 ಗಂಟೆ ಸುಮಾರಿನಲ್ಲಿ ಘಟನೆ ನಡೆದಿದೆ.

Advertisement

ತಾಲೂಕಿನ ದೊಡ್ಡೇರಿ ಗ್ರಾಮದ ನಿವಾಸಿ ಚಿಕ್ಕ ತಾಯಮ್ಮ (65) ಎಂಬುವರರು ಬೆಳಗಿನ ಜಾವ 6 ಗಂಟೆ ವೇಳೆಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಪಕ್ಕದ ಸರ್ವಿಸ್‌ ರಸ್ತೆಯಲ್ಲಿ ವಾಯು ವಿಹಾರ ಮಾಡುತ್ತಿದ್ದರು. ಈ ವೇಳೆ ಅವರ ಅಕ್ಕಪಕ್ಕ ಯಾರೂ ಇರಲಿಲ್ಲ. ಆಕೆ ಒಬ್ಬರೇ ಇರುವುದನ್ನು ಖಚಿತಪಡಿಸಿಕೊಂಡ ಇಬ್ಬರು ಕಳ್ಳರು ಏಕಾ ಏಕಿ ಎದುರು ಸರ ಕಸಿದುಕೊಳ್ಳಲು ಯತ್ನಿಸಿದ್ದಾರೆ. ಇದಕ್ಕೆ ಆಕೆ ಪ್ರತಿರೊಧ ವ್ಯಕ್ತಪಡಿಸಿದಾಗ ದುಷ್ಕಮಿಗಳು ತಮ್ಮಲ್ಲಿದ್ದ ಚಾಕು ತೋರಿಸಿ ಸರ ಕಿತ್ತು ಕೊಂಡಿದ್ದಾರೆ. ಸುಮಾರು 60 ಗ್ರಾಂ ಮಾಂಗಲ್ಯ ಸರದ ಅರ್ಧಭಾಗ ಕಿತ್ತೂಯ್ದಿದ್ದಾರೆ. ಚಿಕ್ಕತಾಯಮ್ಮ ಸುಮಾರು 2 ಲಕ್ಷ ರೂ. ಬೆಲೆಬಾಳುವ 35 ಗ್ರಾಂ ಸರವನ್ನು ಕಳೆದುಕೊಂಡಿದ್ದಾರೆ.

ಈ ಘಟನೆಯಿಂದ ನಗರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಈ ಕುರಿತು ಚಿಕ್ಕತಾಯಮ್ಮ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಘಟನಾಸ್ಥಳಕ್ಕೆ ನೆಲಮಂಗಲ ಪೊಲೀಸ್‌ ಉಪವಿಭಾಗಾಧಿಕಾರಿ ಜಗದೀಶ್‌, ಪೊಲೀಸ್‌ ಇನ್ಸ್‌ಪೆಕ್ಟರ್‌ ರಾಜೀವ್‌, ಪೊಲೀಸ್‌ ಸಿಬ್ಬಂದಿಗಳಾದ ಮುನಿರಾಜು, ಲಕ್ಷ್ಮಣ್‌, ಶ್ರೀನಿವಾಸಯ್ಯ, ಭೇಟಿ ನೀಡಿ ಪರಿಶೀಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next