Advertisement

Arrested: 1.10 ಕೋಟಿ ಮೌಲ್ಯದ ಶೂಗಳ ಕಳ್ಳತನ: ಸೆರೆ

03:10 PM Jan 04, 2024 | Team Udayavani |

ಆನೇಕಲ್‌: ಗೋದಾಮಿನಿಂದ ಬ್ರಾಂಡೆಡ್‌ ನೈಕಿ ಕಂಪನಿಯ ಶೂಗಳನ್ನು ವಾಹನದ ಚಾಲಕನೇ ಕದ್ದು ವಾಹನವನ್ನು ರಸ್ತೆಯಲ್ಲಿ ಬಿಟ್ಟು ಹೋಗಿದ್ದ ಪ್ರಕರಣ ಭೇದಿಸುವಲ್ಲಿ ಅತ್ತಿಬೆಲೆ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.

Advertisement

ನಗರದಲ್ಲಿ ಪತ್ರಿಕಾಗೋಷ್ಠಿಯನ್ನು ದ್ದೇಶಿಸಿ ಮಾತನಾಡಿದ ಅವರು, ಅಸ್ಸಾಂ ಮೂಲದ ಸುಭಾನ್‌ ಪಾಷಾ, ಮನ್ಸರ್‌ ಅಲಿ, ಶದ್ದುಲ್‌ ರೆಹಮಾನ್‌ ಬಂಧಿತರು. ಡಿ.21ರಂದು ಆನೇಕಲ್‌ ಸಮೀಪದ ಶೆಟ್ಟಿಹಳ್ಳಿ ಬಳಿಯ ನೈಕಿ ಗೋದಾಮಿನಿಂದ ಹೊಸಕೋಟೆ ಬಳಿಯ ಮಿಂತ್ರ ಗೋದಾಮಿಗೆ ಹೊರಟಿದ್ದ ಶೂ ಹೊತ್ತ ಈಚರ್‌ ವಾಹನ ಕಾಣೆಯಾಗಿತ್ತು. ಸುಮಾರು 1.10 ಕೋಟಿ ರೂ. ಮೌಲ್ಯದ 1,558 ಜತೆ ಶೂ ಸಹಿತ ಈಚರ್‌ ವಾಹನ ಕಳುವಾಗಿತ್ತು. ಈ ಬಗ್ಗೆ ಅತ್ತಿಬೆಲೆ ಠಾಣೆಯಲ್ಲಿ ದೂರು ದಾಖಲಾಗಿತ್ತು. ತನಿಖೆಗಿಳಿದ ಪೊಲೀಸರು, ಈಚರ್‌ ವಾಹನ ಚಾಲಕನ ಹಿಸ್ಟರಿ ಚೆಕ್‌ ಮಾಡಿದ್ದಾರೆ. ಆತ ಈ ಹಿಂದೆ ಬೆಲೆ ಬಾಳುವ ಬ್ರಾಂಡೆಡ್‌ ಬಟ್ಟೆಗಳನ್ನು ಇದೇ ರೀತಿ ವಾಹನ ಸಮೇತ ಕದ್ದು, ಜೈಲು ಸೇರಿದ್ದ ಎಂಬ ಮಾಹಿತಿ ಆಧರಿಸಿ ತನಿಖೆ ನಡೆಸಿದಾಗ ಅಸ್ಸಾಂ ಮೂಲದ ಮೂವರು ಸಿಕ್ಕಿಬಿದ್ದಿದ್ದಾರೆ.

ಅಂದು ಆನೇಕಲ್‌ ಗೋದಾಮಿನಿಂದ ಶೂ ತುಂಬಿಕೊಂಡು ಹೊರಟ ವಾಹನವನ್ನು ಹೊಸಕೋಟೆ ಬದಲು ನಗರದ ರಜಾಕ್‌ ಪಾಳ್ಯಕ್ಕೆ ಕದ್ದೊಯ್ದಿದ್ದರು. ಅಲ್ಲಿನ ಮನೆಯೊಂದರಲ್ಲಿ ಅನ್‌ ಲೋಡ್‌ ಮಾಡಿ, ಈಚರ್‌ ವಾಹನವನ್ನು ಚಿಕ್ಕಜಾಲದ ಬಳಿ ಬಿಟ್ಟು ಪರಾರಿಯಾಗಿದ್ದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಡಿಷನಲ್‌ ಎಸ್‌.ಪಿ ಎಂ.ಎಲ್‌ .ಪುರುಷೋತ್ತಮ್‌, ನಾಗರಾಜ್‌, ಡಿವೈಎಸ್‌ಪಿ ಮೋಹನ್‌, ಸಿಪಿಐ ರಾಘವ್‌, ಪಿಎಸ್‌ಐ ಮುರಳಿ, ಸಿಬ್ಬಂದಿಗಳಾದ ನಾಗೇಶ್‌, ಮಹೇಶ್‌, ಇರ್ಫಾನ್‌, ಅರುಣ್‌ ಕುಮಾರ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next