Advertisement

ರೈಲ್ವೇ ಸಾಮಾಗ್ರಿ ಕಳವು: ಪೋಲಿಸರ ವಶಕ್ಕೆ

12:15 AM Aug 02, 2023 | Team Udayavani |

ಕಡಬ: ಮರ್ದಾಳದ ಇಬ್ಬರು ಯುವಕರು ರೈಲ್ವೇ ಹಳಿಯ ಸಾಮಗ್ರಿಗಳನ್ನು ಕಳವು ನಡೆಸಿ ಗುಜರಿಗೆ ಮಾರಾಟ ಮಾಡಲು ಕೊಂಡೊಯ್ಯುತ್ತಿದ್ದ ವೇಳೆ ಕಡಬ ಪೋಲಿಸರಿಗೆ ಸಿಕ್ಕಿ ಬಿದ್ದ ಘಟನೆ ಜು.31ರ ರಾತ್ರಿ ಸಂಭವಿಸಿದೆ.

Advertisement

ಮರ್ದಾಳ ನಿವಾಸಿಗಳಾದ ಆಟೋ ಚಾಲಕ ರಫೀಕ್‌ ಹಾಗೂ ಸಿದ್ದಿಕ್‌ ಬಂಧಿತರು. ಇವರು ಪುತ್ತೂರು ಭಾಗದಿಂದ ರೈಲ್ವೆ ಸಾಮಾಗ್ರಿಗಳನ್ನು ಕಳವು ನಡೆಸಿ ತಮ್ಮ ಕಾರಿನಲ್ಲಿ ತರುತ್ತಿದ್ದ ವೇಳೆ ಗಸ್ತು ನಿರತ ಕಡಬ ಎಸ್‌.ಐ. ಆಂಜನೇಯ ರೆಡ್ಡಿ ಹಾಗೂ ಸಿಬಂದಿ ಕೈಗೆ ಸಿಕ್ಕಿ ಬಿದ್ದಿದ್ದಾರೆ.

ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ರೈಲ್ವೇ ಪೋಲಿಸರಿಗೆ ಹಸ್ತಾಂತರಿಸ ಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next