Advertisement
ಶಿವಾಜಿನಗರ ನಿವಾಸಿ ನಸೀಬ್(38), ಅಟ್ಟೂರು ಲೇ ಔಟ್‌ನ ಮಂಜುನಾಥ್(45), ಮೈಸೂರಿನ ಶಾಭಾಯ್ ಖಾನ್ (31), ಫ್ರೆಜರ್‌ಟೌನ್ ನಿವಾಸಿ ಸೈಯದ್ ರಿಯಾಝ್(34), ಬಾಗಲೂರು ನಿವಾಸಿ ಇಮ್ರಾನ್(34), ಸಾರಾಯಿ ಪಾಳ್ಯ ನಿವಾಸಿ ನಯಾಜ್ ಖಾನ್(32) ಬಂಧಿತರು. ಆರೋಪಿಗಳಿಂದ ಸುಮಾರು 3 ಕೋಟಿಗೂ ಅಧಿಕ ಮೌಲ್ಯದ ಎಂಟು ಐಷಾ ರಾಮಿ ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ.
Related Articles
Advertisement
ಅಲ್ಲದೆ, ಮನೆ ಮುಂದೆ ಅಥವಾ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಫಾರ್ಚೂನರ್, ಇನೋವಾ ಸೇರಿ ಐಷಾರಾಮಿ ಕಾರುಗಳನ್ನು ಗುರುತಿಸಿ ಕೆಲ ತಂತ್ರಜ್ಞಾನ ಬಳಸಿ ಲಾಕ್ ತೆರೆದು ಕಳವು ಮಾಡುತ್ತಿದ್ದರು. ಬಳಿಕ ಅವುಗಳಿಗೆ ನಕಲಿ ನಂಬರ್ ಪ್ಲೇಟ್‌ಗಳನ್ನು ಅಳವಡಿಸು ತ್ತಿದ್ದರು. ಬಳಿಕ ಗ್ಯಾರೆಜ್‌ಗೆ ಕೊಂಡೊಯ್ದು ಎಂಜಿನ್ ಮತ್ತು ಚಾಸಿ ನಂಬರ್ ಬದಲಾಯಿಸಿ ಕೇರಳ, ಮಹಾ ರಾಷ್ಟ್ರ, ರಾಜಸ್ಥಾನ, ದೆಹಲಿ, ಪಂಜಾಬ್, ಆಂಧ್ರ ಪ್ರದೇಶ, ತೆಲಂಗಾಣ ಭಾಗದಲ್ಲಿ ಮಾರುತ್ತಿದ್ದರು. ಅದಕ್ಕೆ ಪೂರಕವಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿದ್ದರು. ಈ ಕಾರುಗಳನ್ನು ಸೆಕೆಂಡ್ ಹ್ಯಾಂಡ್ ಶೋರೂ ಮ್‌ಗೆ ಮಾರುವ ಬದಲು, ಸೆಕೆಂಡ್ ಹ್ಯಾಂಡ್ ಡೀಲರ್‌ಗಳಿಗೆ ಮಾರುತ್ತಿದ್ದರು ಎಂಬುದು ಗೊತ್ತಾಗಿದೆ. ಇದೇ ಪ್ರಕರಣದಲ್ಲಿ ಮಂಜುನಾಥ್ ಸೇರಿ ಇಬ್ಬರನ್ನು ಬಂಧಿಸಲಾಗಿತ್ತು ಎಂದು ಪೊಲೀಸರು ಹೇಳಿದರು.
ಕೇಂದ್ರ ವಿಭಾಗ ಡಿಸಿಪಿ ಶ್ರೀನಿವಾಸಗೌಡ, ಶೇಷಾದ್ರಿಪುರ ಉಪವಿಭಾಗದ ಎಸಿಪಿ ಚಂದನ್ ನೇತೃತ್ವದಲ್ಲಿ ಠಾಣಾಧಿಕಾರಿ ಶಿವಸ್ವಾಮಿ, ಪಿಎಸ್‌ಐ ಸಚಿನ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.