Advertisement

ಉತ್ತರಾದಿ ಮಠದಲ್ಲಿ ಕಳ್ಳತನ: ಡಿಸಿ ಕಚೇರಿಗೆ ಮುತ್ತಿಗೆ

10:59 AM Feb 16, 2018 | |

ಕಲಬುರಗಿ: ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡದಲ್ಲಿನ ಉತ್ತರಾಧಿ ಮಠದಲ್ಲಿ ನಡೆದ ಕಳ್ಳತನ ಪ್ರಕರಣವನ್ನು ಪತ್ತೆ ಹಚ್ಚಬೇಕೆಂದು ಆಗ್ರಹಿಸಿ ವಿವಿಧ ಸಂಘಟನೆಗಳ ಭಕ್ತರು ಮಳಖೇಡ ಮಠದಿಂದ ಆರಂಭಿಸಿದ ಪಾದಯಾತ್ರೆಯು ಗುರುವಾರ ಜಿಲ್ಲಾಧಿಕಾರಿ ಕಚೇರಿಗೆ ತಲುಪಿ ಪ್ರತಿಭಟನೆಯಾಗಿ ಮಾರ್ಪಟ್ಟಿತು.

Advertisement

ಪ್ರತಿಭಟನೆಕಾರರು ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಮಳಖೇಡ ಉತ್ತರಾಧಿಮಠ ಈ ಭಾಗದ ಪ್ರಸಿದ್ಧ ದೇವಸ್ಥಾನ. ಈ ಮಠ ಇತ್ತೀಚೆಗೆ ಮೇಲಿಂದ ಮೇಲೆ ಕಳ್ಳತನಕ್ಕೊಳಗಾಗುತ್ತಿದೆ. ಇದಕ್ಕೆ ಜಿಲ್ಲಾಡಳಿತ ಮತ್ತು ಪೊಲೀಸ್‌ ಇಲಾಖೆಯು ನಿರ್ಲಕ್ಷ ಎಂದು ಹೇಳಬೇಕಾಗಿದೆ. ಮೂರು ವರ್ಷಗಳ ಹಿಂದೆ ಕಳವೂ ಆದಾಗ ಅಪರಾಧಿಗಳನ್ನು ಪತ್ತೆ ಮಾಡದ ಕಾರಣ ಈಗ ಮತ್ತೆ ಅಪಾರ ಪ್ರಮಾಣದ ದೇವಾಲಯದ ಬೆಳ್ಳಿ, ಪೂಜಾ ಸಾಮಗ್ರಿಗಳು, 30 ಕೆ.ಜಿ ಬೆಳ್ಳಿ, 5 ಲಕ್ಷ ರೂ.ಗಳ ನಗದು ಸೇರಿದಂತೆ ಲಕ್ಷಾಂತರ ಮೊತ್ತದ ವಸ್ತುಗಳು ಕಳ್ಳತನವಾಗಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಹಲವಾರು ಮಠ-ಮಂದಿರಗಳು ಕೂಡ ಕಳ್ಳತನವಾಗಿದೆ. ಅವುಗಳು ಕೂಡ ಇನ್ನೂ ಪತ್ತೆಯಾಗಿಲ್ಲ. ಇದರಿಂದ ಮಠದ ಭಕ್ತಾಧಿಗಳಿಗೆ ಹಾಗೂ ಹಿಂದು ಸಮಾಜದವರಿಗೆ ಆತಂಕವಾಗಿದೆ. ತಿಂಗಳು ಆಗುತ್ತ ಬಂದರು ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ. ಇದನ್ನು ಖಂಡಿಸಿ ಮಳಖೇಡದಿಂದ ಡಿಸಿ ಕಚೇರಿವರೆಗೂ ಪಾದಯಾತ್ರೆ ಮಾಡಿ ಮನವಿ ಸಲ್ಲಿಸುತ್ತಿದ್ದೇವೆ.

2-3 ದಿನದೊಳಗಾಗಿ ದರೋಡೆ ಪ್ರಕರಣವನ್ನು ಪತ್ತೆ ಮಾಡಿ ಕಳ್ಳತನವಾದ ವಸ್ತುಗಳನ್ನು ಮಠಕ್ಕೆ ಒಪ್ಪಿಸಬೇಕು. ದರೋಡೆಕೋರರಿಗೆ ಶಿಕ್ಷೆ ವಿಧಿಸಬೇಕೆಂದು ಅವರು ಆಗ್ರಹಿಸಿದರು.

ಈ ವೇಳೆಯಲ್ಲಿ ಮಹಿಳಾ ಒಕ್ಕೂಟದ ಸಂಚಾಲಕಿ ಹಾಗೂ ಬಿಜೆಪಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ವಿವ್ಯಾ ಹಾಗರಗಿ, ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ ರೇವೂರ್‌, ಬಿಜೆಪಿ ಮುಖಂಡ ವಿಜಯಕುಮಾರ ಸೇವಲಾನಿ, ಪೇಜಾವರ ಶ್ರೀ ಸೇನೆಯ ಅಧ್ಯಕ್ಷ ಎಂ.ಎಸ್‌. ಪಾಟೀಲ್‌ ನರಿಬೋಳ್‌, ಭಾಗೀರಥಿ ಗುನ್ನಾಪೂರ್‌, ನಿವೇದಿತಾ ದಹಿಂದೆ, ಗೀತಾ ಸಜ್ಜನ್‌, ಶಿವು ನಾಶಿ, ದೇವು ಪೂಜಾರಿ, ಸಂಗಮೇಶ ಶೆಳ್ಳಗಿ, ಗುರುರಾಜ ಅಂಬಾಡಿ, ಇಂದ್ರಾ ಬನಶೆಟ್ಟಿ, ಇಂದ್ರಾ ಚಿತ್ತಾಪೂರ್‌, ಶಶಿಕಲಾ, ಲಕ್ಷ್ಮಿಕಾಂತ ಜಮಾದಾರ್‌, ಅಖೀಲ್‌ ಜುನೈದಿ, ದೇವಿಂದ್ರ ಪೂಜಾರಿ, ಶೇಖರ್‌ ಬಿರಾದಾರ್‌, ಜಯ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸಾರವಾಡ ಹಾಗೂ ಗೌಸಿಯಾಬೇಗಂ ಮುಂತಾದವರು ಪಾಲ್ಗೊಂಡಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next