Advertisement

ಮದುವೆ ಮಂಟಪದಲ್ಲಿ ವಧುವಿಗೆ ಕಟ್ಟಲು ತಂದಿದ್ದ ತಾಳಿ ಕದ್ದ ಕದೀಮ

02:44 PM Jun 14, 2019 | Team Udayavani |

ಬೆಳಗಾವಿ: ಮನೆಗೆ ಕನ್ನ ಹಾಕುವುದು, ಕೊರಳಲ್ಲಿನ ಸರ ಕದಿಯುವುದು ಮಾಮೂಲಿ. ಆದರೆ, ಇಲ್ಲೊಬ್ಬ ಕಿಲಾಡಿ ಕದೀಮ ಮದುವೆ ಮಂಟಪದಲ್ಲಿ ವಧುವಿಗೆ ಕಟ್ಟಬೇಕಾದ ಮಾಂಗಲ್ಯ ಸರವನ್ನೇ ಎಗರಿಸಿದ್ದಾನೆ! ಹೀಗಾಗಿ ಶುಭ ಮುಹೂರ್ತದಲ್ಲಿ ನಡೆಯಬೇಕಾಗಿದ್ದ ಮಾಂಗಲ್ಯಧಾರಣೆ ಎರಡೂವರೆ ಗಂಟೆ ತಡವಾಗಿದೆ.

Advertisement

ಚಿಕ್ಕೋಡಿ ಲೋಕೋಪಯೋಗಿ ಇಲಾಖೆ ಅಧೀಕ್ಷಕ ಹಾಗೂ ಸಾಹಿತಿ ಶಿರೀಷ ಜೋಶಿ ಅವರ ಪುತ್ರ ಆರ್‌ಎಲ್ಎಸ್‌ ಕಾಲೇಜಿನ ಉಪನ್ಯಾಸಕ ಶ್ರೀನಾಥ ಜೋಶಿ ಅವರ ಮದುವೆ ಸಮಾರಂಭ ಇಲ್ಲಿಯ ಮಹಾವೀರ ಮಂಗಲ ಕಾರ್ಯಾಲಯದಲ್ಲಿ ಬುಧವಾರ ನಡೆಯುತ್ತಿತ್ತು.

ವಧುವಿಗಾಗಿ 1.22 ಲಕ್ಷ ರೂ. ಮೌಲ್ಯದ 32.2 ಗ್ರಾಂ. ಚಿನ್ನದ ಮಾಂಗಲ್ಯ ತಂದಿಟ್ಟು ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಬೆಳಗ್ಗೆ 8:30ರಿಂದ 8:55ರ ಅವಧಿಯಲ್ಲಿ ಮಾಂಗಲ್ಯಧಾರಣ ಮುಹೂರ್ತ ನಡೆಯ ಬೇಕಿದ್ದ ಹಿನ್ನೆಲೆಯಲ್ಲಿ ಪುರೋಹಿತರ ಸಮ್ಮುಖದಲ್ಲಿ ತಂದಿಟ್ಟು ಪೂಜೆ ನೆರವೇರಿಸಿದ್ದಾರೆ. ಅಷ್ಟರಲ್ಲೇ ಚಾಲಾಕಿ ಕಳ್ಳ ಮಾಂಗಲ್ಯ ಸರ ಎಗರಿಸಿದ್ದಾನೆ. ಇದರಿಂದ ಕಂಗಾಲಾದ ವಧು ಹಾಗೂ ವರನ ಪೋಷಕರು ಇಡೀ ಮದುವೆ ಮಂಟಪದಲ್ಲಿ ತಡಕಾಡಿದ್ದಾರೆ. ಕೊನೆಗೆ ಎಲ್ಲೂ ಸಿಗದ ಹಿನ್ನೆಲೆಯಲ್ಲಿ ಚಿನ್ನಾಭರಣ ಅಂಗಡಿ ಹೋಗಿ ಹೊಸ ಮಾಂಗಲ್ಯ ಸರ ಖರೀದಿಸಿ ಮದುವೆ ಕಾರ್ಯ ನೆರವೇರಿಸಿದ್ದಾರೆ. ಟಿಳಕವಾಡಿ ಠಾಣೆಯಲ್ಲಿ ಶಿರೀಷ ಜೋಶಿ ದೂರು ನೀಡಿದ್ದಾರೆ. ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿ ಕಳ್ಳನ ಚಲನವಲನ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next