Advertisement

ಎತ್ತಿನಹೊಳೆ ಮ್ಯಾನೇಜರ್ ಮನೆಯಲ್ಲಿ ಕಳ್ಳತನ ; ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

08:16 PM Oct 14, 2022 | Team Udayavani |

ಕೊರಟಗೆರೆ: ಪಟ್ಟಣದ ಬಾಡಿಗೆ ಮನೆಯಲ್ಲಿ ವಾಸವಿದ್ದ ಎತ್ತಿನ ಹೊಳೆ ಯೋಜನೆಯ ಮ್ಯಾನೇಜರ್ ಅವಿನಾಶ್ ರವರ ಮನೆಯಲ್ಲಿ ಹಣ ಕಳ್ಳತನ  ಪ್ರಕರಣದ  ತಲೆ ಮರೆಸಿಕೊಂಡಿದ್ದ ನಾಲ್ಕನೇ ಆರೋಪಿಯನ್ನು  ಬಂಧಿಸಲು ಕೊರಟಗೆರೆ ಪೊಲೀಸರು ಯಶಸ್ವಿಯಾಗಿದ್ದಾರೆ.

Advertisement

ಬಂಧಿತ ಆರೋಪಿ ಗೌರಿಬಿದನೂರು ಟೌನ್ ವಾಸಿ ಆರೋಪಿ ಭರತ್(22) ಎನ್ನುವವನಾಗಿದ್ದಾನೆ. ಆರೋಪಿಯು ಪಟ್ಟಣದ ಹೊರವಲಯದಲ್ಲಿ ಬಾಡಿಗೆ ಕಾರಿನಲ್ಲಿ ಕುಳಿತು ಕೊಂಡು ಹಂಚಿಕೊಂಡಿದ್ದ ಹಣದ ಪೈಕಿ ಆರೋಪಿಯ ಕಡೆಯಿಂದ1ಲಕ್ಷ ರೂ. ಹಣವನ್ನು ಪೊಲೀಸರು ವಶ ಪಡಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ.

ಜಿಲ್ಲಾ ಪೋಲೀಸ್ ಉಪಾಥೀಕ್ಷರಾದ ಉದೇಶ್ ರವರ ನಿರ್ದೇಶನದಂತೆ ಮಧುಗಿರಿ ಡಿವೈಎಸ್ಪಿ ವೆಂಕಟೇಶ ನಾಯ್ಡು ರವರ ಮಾರ್ಗದರ್ಶನದಲ್ಲಿ ಆರೋಪಿಯನ್ನು ಪತ್ತೆ ಮಾಡಲು ಯಶಸ್ವಿಯಾದ ಪೋಲೀಸ್ ಇನ್ಸ್‌ಪೆಕ್ಟರ್ ಸುರೇಶ್.ಕೆ ಹಾಗೂ ಸಿಬ್ಬಂದಿಗಳಾದ ರಂಗನಾಥ, ರಾಜಗೋಪಾಲ್, ಶಶಿಕುಮಾರ್ ಮೋಹನ್, ರಿಪತ್ ಅಲಿ, ನಜರ್ ವುಲ್ಲಾ ಖಾನ್ ರವರನ್ನು ಜಿಲ್ಲಾ ಪೋಲೀಸ್ ಅಧೀಕ್ಷಕರಾದ ರಾಹುಲ್ ಕುಮಾರ್ ಶಹಾಪುರ್ ವಾಡ್ ಅಭಿನಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next