Advertisement

Kushtagi: ಮೊಬೈಲ್‌ ಅಂಗಡಿಯಲ್ಲಿ ಕಳ್ಳತನ

09:52 AM Jul 24, 2023 | Team Udayavani |

ಕುಷ್ಟಗಿ: ಪಟ್ಟಣದ ಮಾರುತಿ ವೃತ್ತದಲ್ಲಿರುವ ಮೊಬೈಲ್‌ ಅಂಗಡಿವೊಂದರಲ್ಲಿ ಕಳ್ಳತನವಾದ ಪ್ರಕರಣ ಜು.23ರ ಭಾನುವಾರ ರಾತ್ರಿ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

Advertisement

ಮಾರುತಿ ವೃತ್ತದ ತಾಲೂಕು ಪಂಚಾಯತ್ ಕಾಂಪ್ಲೆಕ್ಸ್ ನಲ್ಲಿರುವ ಅವಿನಾಶ್ ಕೋರಾ ಅವರಿಗೆ ಸೇರಿದ ವಾಣಿಜ್ಯ ಮಳಿಗೆಯಲ್ಲಿ ಸಿಸಿ ಕ್ಯಾಮರಾ ಗೋಡೆಗೆ ತಿರುಗಿಸಿ, ಬೆಲೆ ಬಾಳುವ ಮೊಬೈಲ್‌ಗಳನ್ನು ಕದ್ದಿರುವ ಪ್ರಕರಣ ನಡೆದಿದೆ.

ಮೊಬೈಲ್‌ ಶಾಪ್ ಗೆ ಸಿಸಿ ಕ್ಯಾಮರಾಗಳಿದ್ದರೂ ಚಾಲಕಿ ಕಳ್ಳರು, ಕ್ಯಾಮರಾವನ್ನು ಗೋಡೆಗೆ ತಿರುಗಿಸಿ ಕಳ್ಳತನ ಮಾಡಿದ್ದಾರೆ. ನಿನ್ನೆ ರಾತ್ರಿ ಜಿಟಿ ಜಿಟಿ ಮಳೆಯ ಸಂದರ್ಭದಲ್ಲಿ ಈ ಕಳ್ಳರು ಅಂಗಡಿ ಶಟರ್‌ ಬಳಿ ಪ್ಲಾಸ್ಟಿಕ್ ಹಾಳೆ ಹೊದ್ದು ಮಲಗಿರುವ ಸ್ಥಿತಿಯಲ್ಲಿ ಯಾರಿಗೂ ಅನುಮಾನ ಬಾರದಂತೆ ಶಟರ್‌ ಹಾರೆಯಿಂದ ಎಬ್ಬಿಸಿ ಕಳ್ಳತನ ಮಾಡಿದ್ದಾರೆ.

ಸಿಸಿಟಿವಿ ಫುಟೇಜ್‌ ಪರಿಶೀಲಿಸಿದಾಗ ಕಳ್ಳನೋರ್ವ ಮಿಲಿಟರಿ ಡ್ರೆಸ್ ನಲ್ಲಿ ಟೋಪಿ, ಮಾಸ್ಕ್ ಧರಿಸಿರುವುದು ದಾಖಲಾಗಿದೆ. ಈ ವಾಣಿಜ್ಯ ಮಳಿಗೆಯ ಕಳ್ಳತನ ಹಿನ್ನೆಲೆ ಶ್ವಾನದಳ, ಬೆರಳಚ್ಚು ತಜ್ಞರು ಆಗಮಿಸಲಿದ್ದು, ನಿಜ ಸ್ಥಿತಿ ಗೊತ್ತಾಗಲಿದೆ.

ಕುಷ್ಟಗಿ ಪಟ್ಟಣದ ಪ್ರಮುಖ ಸ್ಥಳದಲ್ಲಿ ಕೋರಾ ಮೊಬೈಲ್ ಅಂಗಡಿಯಲ್ಲಿ ಕಳವಾಗಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next