Advertisement

ಬಂಟ್ವಾಳ: ಬಾರ್ ಗೆ ನುಗ್ಗಿದ ಕಳ್ಳರು, ಹಣ- ಮದ್ಯ ದೋಚಿ ಪರಾರಿ

12:13 PM Jan 14, 2021 | Team Udayavani |

ಬಂಟ್ವಾಳ: ಬಾರ್ ವೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂ ನಗದು ಹಾಗೂ ಮದ್ಯದ ಬಾಟಲಿಗಳನ್ನು ಕಳವು ಮಾಡಿದ ಘಟನೆ ಮೆಲ್ಕಾರ್ ಸಮೀಪದ ಕಂದೂರು ಎಂಬಲ್ಲಿ ನಡೆದಿದೆ.

Advertisement

ಕಂದೂರುನಲ್ಲಿರುವ ಸುರಭಿ ಬಾರ್ ಗೆ ರಾತ್ರಿ ವೇಳೆ ಎದುರು ಭಾಗದ ಶಟರ್ ನ ಬೀಗ ಮುರಿದು ಒಳನುಗ್ಗಿದ ಕಳ್ಳರು ಕ್ಯಾಶ್ ಕೌಂಟರ್ ನಲ್ಲಿದ್ದ ಸುಮಾರು ಮೂರು ಲಕ್ಷ ರೂ. ನಗದು ದೋಚಿದ್ದಾರೆ.

ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್,  ನಗರ ಠಾಣಾ ಎಸ್.ಐ. ಅವಿನಾಶ್, ಅಪರಾಧ ವಿಭಾಗದ ಎಸ್.ಐ ಕಲೈಮಾರ್ , ಎಚ್.ಸಿ.ಸುರೇಶ್ ಪಡಾರ್, ಸಿಬ್ಬಂದಿಗಳಾದ ಶ್ರೀಕಾಂತ್, ಉಸ್ಮಾನ್ , ಪ್ರಶಾಂತ್ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ:ಸಸಿಹಿತ್ಲು: ಇನ್ನೂ ಪತ್ತೆಯಾಗದ ಪ್ರವಾಸಿಗ, ಮುಳುಗು ತಜ್ಞರಿಂದಲೂ ಶೋಧ ಕಾರ್ಯ ವಿಫಲ

Advertisement

ಜೊತೆಗೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next