ಕಳ್ಳ ಎಷ್ಟೇ ಚತುರ ನಾಗಿದ್ದರೂ ಒಂದು ಸಣ್ಣ ಸುಳಿವನ್ನು ಬಿಟ್ಟು ಹೋಗಿ ಪೊಲೀಸರ ಅತಿಥಿ ಆಗುತ್ತಾನೆ ಅಂತೆ. ಆದರೆ ಇಲ್ಲೊಬ್ಬಳು ಕಳ್ಳತನ ಮಾಡುವ ಬರದಲ್ಲಿ ತನ್ನ ಮಗಳನ್ನು ಮರೆತು ಅವಸರದಲ್ಲಿ ಕದ್ದ ವಸ್ತುವನ್ನು ತುಂಬಿಸಿಕೊಂಡು ಪರಾರಿಯಾದ ಘಟನೆ ನ್ಯೂ ಜೆರ್ಸಿಯಲ್ಲಿ ನಡೆದಿದೆ.
ನ್ಯೂಜೆರ್ಸಿಯಲ್ಲಿರುವ ಬಾಂಬಿ ಬೇಬಿ ಸ್ಟೋರ್ ನಲ್ಲಿ ತನ್ನ ಮಗುವಿನ ಜೊತೆ ಅಪರಿಚಿತ ಮಹಿಳೆಯೊಬ್ಬಳು ಶಾಪಿಂಗ್ ಮಾಡುತ್ತಿರುತ್ತಾಳೆ. ಈ ವೇಳೆಯಲ್ಲಿ ಹೆಂಗಸು ಮಗುವಿನ ಸ್ಟ್ರೋಲರ್ ವೊಂದನ್ನು ನೋಡುತ್ತಾಳೆ (ಮಗುವಿನ ತಳ್ಳು ಗಾಡಿ). ನಿಧಾನವಾಗಿ ಅದನ್ನು ಕಳ್ಳತನ ಮಾಡಲು ಯತ್ನಿಸುತ್ತಾಳೆ. ಕೊನೆಗೆ ಅತ್ತ ಇತ್ತ ಯಾರೂ ಇಲ್ಲದ ಸಮಯದಲ್ಲಿ ಮಗು ಆಡಿಸುವ ಸ್ಟ್ರೋಲರ್ ಅನ್ನು ಕದಿಯುತ್ತಾಳೆ. ಅದನ್ನು ಹೊರಗೆ ಸಾಗಿಸುವ ವೇಳೆ ತನ್ನ ಮಗುವನ್ನು ಮರೆತು ಅಂಗಡಿಯ ಒಳಗೆ ಬಿಟ್ಟು ಹೋಗಿ ಎಡವಟ್ಟು ಮಾಡಿಕೊಂಡಿದ್ದಾಳೆ.
ಪೊಲೀಸರು ಹೇಳುವ ಪ್ರಕಾರ ಮೂರು ಜನ ಹೆಂಗಸರು ಕದಿಯುವ ಯೋಜನೆ ರೂಪಿಸಿಕೊಂಡು ಬಂದಿದ್ದರು,ಈ ವೇಳೆಯಲ್ಲಿ ಒಬ್ಬಳು ಹೆಂಗಸು ಕಳ್ಳತನ ಮಾಡಿ ಹೊರಟಾಗ ತನ್ನ ಮಗಳನ್ನು ಸ್ಟೋರಿನ ಒಳಗೆ ಮರೆತು ಹೋಗಿದ್ದಾಳೆ. ಅಂಗಡಿಯ ಮಾಲಿಕರಾದ ಎನೆಲಿಯೊ ಒರ್ಟೆಗಾ ಸಿಸಿಟಿವಿ ದೃಶ್ಯವನ್ನು ಫೇಸ್ ಬುಕ್ ನಲ್ಲಿ ಆಪ್ಲೋಡ್ ಮಾಡಿ, “ ಬದುಕಿಗಾಗಿ ಕಳ್ಳತನ ಮಾಡುವುದು ಅದು ನಿಮ್ಮ ವೈಯಕ್ತಿಕ ವಿಚಾರ. ಆದರೆ ಏನೂ ಅರಿಯದ ಪುಟ್ಟ ಮಕ್ಕಳನ್ನು ನೀವೂ ಕರೆತಂದಾಗ ಏನು ಆಗುತ್ತದೆ. ಈ ಮಕ್ಕಳಿಗೆ ಏನೂ ಮಾಡಬೇಕೆಂಬುದು ತಿಳಿಯುವುದಿಲ್ಲ, ಇದು ನನ್ನ ಮೇಲೆ ಪರಿಣಾಮ ಬೀರಿತು ಅದಕ್ಕಾಗಿ ಈ ವೀಡಿಯೋವನ್ನು ಆಪ್ಲೋಡ್ ಮಾಡಿದ್ದೇನೆ” ಎನ್ನುತ್ತಾರೆ.
ಮಹಿಳೆ ಕದ್ದು ಹೋದ ಬೇಬಿ ಸ್ಟ್ರೋಲರ್ ದುಬಾರಿಯಾಗಿದ್ದು, ಪೊಲೀಸರು ಮಹಿಳೆಯ ತಪ್ಪಿನ ಜಾಡನ್ನು ಹಿಡಿದು ಪ್ರಕರಣವನ್ನು ಭೇದಿಸಿದ್ದಾರೆ. ಆರೋಪಿಯಿಂದ ಕದ್ದ ಸ್ಟ್ರೋಲರ್ ಅನ್ನು ವಶಪಡಿಸಿಕೊಂಡಿದ್ದಾರೆ. ಸಿಸಿಟಿವಿ ಕ್ಯಾಮಾರದಲ್ಲಿ ಸೆರೆಯಾದ ಮಹಿಳೆಯ ಕೈಚಳಕ ಹಾಗೂ ಎಡವಟ್ಟು ಈಗ ವೈರಲ್ ಆಗಿದೆ.