Advertisement

Mangaluru: ಪ್ರತ್ಯೇಕ ಪ್ರಕರಣ: 4 ಲ.ರೂ. ಕಳವು: ದೂರು ದಾಖಲು

12:19 AM Aug 28, 2024 | Team Udayavani |

ಮಂಗಳೂರು: ಪಂಪ್‌ವೆಲ್‌ ಸಮೀಪದ ಹಾರ್ಡ್‌ವೇರ್‌ ಅಂಗಡಿಯಿಂದ 4 ಲ.ರೂ. ಕಳವು ಮಾಡಲಾಗಿದೆ. ಮಾಲಕರು ಆ. 24ರಂದು ರಾತ್ರಿ 8 ಗಂಟೆಗೆ ಅಂಗಡಿಯನ್ನು ಬಂದ್‌ ಮಾಡಿ ಹೋಗಿದ್ದರು. ಆ. 26ರಂದು ಬೆಳಗ್ಗೆ 8.30ಕ್ಕೆ ಬಂದು ಅಂಗಡಿಯ ಬಾಗಿಲನ್ನು ತೆರೆದು ನೋಡಿದಾಗ ಅಂಗಡಿಯ ಒಳಗೆ ಇಟ್ಟಿದ್ದ ಸುಮಾರು 4 ಲ.ರೂ. ನಗದು ಕಳವಾಗಿದೆ ಎಂದು ಮಂಗಳೂರು ಪೂರ್ವ ಠಾಣೆ ಪೊಲೀಸರಿಗೆ ದೂರು ನೀಡಲಾಗಿದೆ.

Advertisement

ಸೂಟರ್‌ಪೇಟೆ: ಮನೆಯಿಂದ ಚಿನ್ನಾಭರಣ, ನಗದು ಕಳವು ಇನ್ನೊಂದು ಪ್ರಕರಣದಲ್ಲಿ ಮಂಗ ಳೂರು ಸೂಟರ್‌ಪೇಟೆಯ ಮನೆ ಯಿಂದ ಚಿನ್ನಾಭರಣ ಕಳವು ಮಾಡಿರುವ ಘಟನೆ ನಡೆದಿದೆ. ಆ. 23ರ ಬೆಳಗ್ಗೆ 9ರಿಂದ 11.45ರ ನಡುವೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಯಾರೋ ಕಳ್ಳರು ಮನೆಯ ಎದುರಿನ ಬಾಗಿಲನ್ನು ತೆರೆದು ಲಾಕರ್‌ನಲ್ಲಿದ್ದ 25 ಗ್ರಾಂ ಚಿನ್ನಾಭರಣ, 47,000 ರೂ. ನಗದು ಸೇರಿದಂತೆ ಒಟ್ಟು ಅಂದಾಜು 1.47 ಲ.ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿದ್ದಾರೆ ಎಂದು ಮಂಗಳೂರು ನಗರ ದಕ್ಷಿಣ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next