Advertisement

ಕಳವು ಪ್ರಕರಣ: ಆರೋಪಿಗಳಿಗೆ ನ್ಯಾಯಾಲಯದಿಂದ ಶಿಕ್ಷೆ

12:54 AM Dec 10, 2022 | Team Udayavani |

ಕಾರ್ಕಳ: ಹೆಬ್ರಿ ಪೊಲೀಸ್‌ ಠಾಣಾ ವ್ಯಾಪ್ತಿಯ ಹೆಬ್ರಿ ಗ್ರಾಮದ, ಅಡಾಲ್‌ ಬೆಟ್ಟು ಎಂಬಲ್ಲಿ 2020ರಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂದಿಸಿ ರಾಜೇಶ್‌ ಹೆಗಡೆ ಹಾಗೂ ರಾಜೇಶ್‌ ಪೂಜಾರಿ ಎಂಬವರಿಬ್ಬರಿಗೆ 2ನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ ಶಿಕ್ಷೆ ವಿಧಿಸಿ ಡಿ.9ರಂದು ತೀರ್ಪು ನೀಡಿದೆ.

Advertisement

ಜಯ ಶಂಕರ ಇವರ ಸಹೋದರಿ‌ ದಿ| ಲಕ್ಷ್ಮಿ ಶೆಡ್ತಿಯವರ ಬೀಗ ಹಾಕಿರುವ ಮನೆಯ ಹಿಂದುಗಡೆ ಬಾಗಿಲನ್ನು ಬಲಾತ್ಕಾರವಾಗಿ ದೂಡಿ ಮನೆಯ ಒಳಗಿನ ಕೊಠಡಿಯ ಗೋದ್ರೆಜ್‌ ಬಾಗಿಲನ್ನು ತೆರೆದು ಅದರೊಳಗೆ ಚಿನ್ನವಿರಬಹುದು ಎಂದು ಬಟ್ಟೆ ಬರೆಗಳನ್ನ ಚೆಲ್ಲಾಪಿಲ್ಲಿ ಮಾಡಿ, ಅಡುಗೆ ಕೋಣೆಯಲ್ಲಿದ್ದ ಸುಮಾರು 2000 ಮೌಲ್ಯದ ರೆಗುಲೇಟರ್‌ ಇರುವ ಎರಡು ಒಲೆಯ ಗ್ಯಾಸ್‌ ಸ್ಟವ್‌ ಅನ್ನು ಕಳುವು ಮಾಡಿಕೊಂಡು ಹೋಗಿದ್ದು ಈ ಕುರಿತು ಹೆಬ್ರಿ ಪೊಲೀಸ್‌ ಠಾಣೆಯ ಪಿ.ಎಸ್‌.ಐ ಸುಮಾ ಬಿ ರವರು ಆರೋಪಿಗಳಾದ ರಾಜೇಶ್‌ ಹೆಗ್ಡೆ ಮತ್ತು ರಾಜೇಶ್‌ ಪೂಜಾರಿಯ ವಿರುದ್ಧ ದೋಷಾರೋಪಣೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಪ್ರಕರಣವನ್ನು ವಿಚಾರಣೆ ನಡೆಸಿದ ಕಾರ್ಕಳದ 2ನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ ಕಾರ್ಕಳದ ನ್ಯಾಯಾಧೀಶೆ ಚೇತನಾ ಸಿ.ಎಫ್ ರವರು ಆರೋಪಿಗಳಿಗೆ ಹೊಂಚು ಹಾಕಿ ರಾತ್ರಿಯಲ್ಲಿ ಮನೆ ಅತಿಕ್ರಮಣ ಪ್ರವೇಶ ಮಾಡಿರುವುದಕ್ಕೆ 1 ವರ್ಷ ಸಾಧಾರಣ ಸಜೆ ಮತ್ತು ತಲಾ 2ಸಾವಿರ ತಂಡ ತಪ್ಪಿದ್ದಲ್ಲಿ 1 ತಿಂಗಳ ಸಾಧಾರಣ ಸಜೆ, ಕಳ್ಳತನ ಮಾಡಿರುವುದಕ್ಕೆ 1 ವರ್ಷ ಸಾಧಾರಣ ಸಜೆ ಮತ್ತು ತಲಾ 2ಸಾವಿರ ತಂಡ ತಪ್ಪಿದ್ದಲ್ಲಿ 1 ತಿಂಗಳ ಸಾಧಾರಣ ಸಜೆ, ವಿಧಿಸಿ ತೀರ್ಪನ್ನು ನೀಡಿದ್ದು, ಸರಕಾರದ ಪರವಾಗಿ ರಾಜಶೇಖರ್‌ ಪಿ ಶಾಮರಾವ್‌ ಸಹಾಯಕ ಸರ್ಕಾರಿ ಅಭಿಯೋಜಕರು ಕಾರ್ಕಳ ಇವರು ವಾದಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next