Advertisement

ಕಳವು: ಐವರು ಸೆರೆ, 8 ಲಕ್ಷ ರೂ. ಚಿನ್ನಾಭರಣ ವಶ

03:44 PM Jul 16, 2022 | Team Udayavani |

ನಾಗಮಂಗಲ: ತಾಲೂಕಿನಲ್ಲಿ ನಡೆದ ವಿವಿಧ ಕಳವು ಪ್ರಕರಣ ಬೇಧಿಸಿರುವ ಪೊಲೀಸರು 8 ಲಕ್ಷ ರೂ.ನ ಚಿನ್ನಾಭರಣ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಪಟ್ಟಣದ ಡಿವೈಎಸ್ಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಡಿಷನಲ್‌ ಎಸ್ಪಿ ವೇಣುಗೋಪಾಲ್‌, ತಾಲೂಕಿನ ಮುದ್ದಲಿಂಗಮಕೊಪ್ಪಲು ಗ್ರಾಮದ ದಂಡಿನದೇವಿ ದೇವಸ್ಥಾನದ ಬಾಗಿಲನ್ನು ಜು.6ರಂದು ಕಳ್ಳರು ಮುರಿದು ಚಿನ್ನದ ತಾಳಿ, ಹುಂಡಿಯಲ್ಲಿದ್ದ ಹಣ ದೋಚಿದ್ದಾರೆ ಎಂದು ಗ್ರಾಮದ ರವಿ ಎಂಬ ವ್ಯಕ್ತಿ ನೀಡಿದ್ದ ದೂರಿನ ಮೇಲೆ ಮೂವರನ್ನು ಬಂಧಿಸಲಾಗಿದೆ ಎಂದು ವಿವರಿಸಿದರು.

ಅನುಮಾನದ ಮೇಲೆ ವಿಚಾರಣೆ: ಡಿವೈಎಸ್ಪಿ ಎಚ್‌.ಲಕ್ಷ್ಮೀನಾರಾಯಣ ಪ್ರಸಾದ್‌, ಸಿಪಿಐ ಸುಧಾಕರ್‌, ಪಿಎಸ್‌ಐ ಸತೀಶ್‌ ಮುಂದಾಳತ್ವದ ತಂಡ ಜು.12ರಂದು ತಾಲೂಕಿನ ಕರಿಕ್ಯಾತನಹಳ್ಳಿಬಳಿ ನಾಗಮಂಗಲದಿಂದ ಕೆ.ಆರ್‌.ಪೇಟೆ ಕಡೆಗೆ ಸ್ಕೂಟರ್‌ನಲ್ಲಿ ಹೋಗುತ್ತಿದ್ದ ಮೂವರನ್ನುಅನುಮಾನ ಮೇಲೆ ವಿಚಾರಣೆ ಮಾಡಿದಾಗ ಕಳ್ಳರು ಸಿಕ್ಕಿಕೊಂಡಿದ್ದಾರೆ ಎಂದು ಹೇಳಿದರು.

125 ಗ್ರಾಂ ಚಿನ್ನಾಭರಣ ವಶ: ಜಕ್ಕನಹಳ್ಳಿ ಗ್ರಾಮದ ಪ್ರದೀಪ್‌, ಕೆ.ಆರ್‌.ಪೇಟೆಯ ಅಕ್ಕಿಹೆಬ್ಟಾಳುಗ್ರಾಮದ ರವಿ, ಕೋಲಾರದ ರೊಣನೂರು ಗ್ರಾಮದ ಅನಿಲ ಬಂಧಿತರು. ಇವರ ಮೇಲೆತಾಲೂಕಿನ ಗ್ರಾಮಾಂತರ ಠಾಣೆಯಲ್ಲಿ ಮೂರು ಕೇಸು, ಕೆ.ಆರ್‌.ಪೇಟೆ, ಬಿಂಡಿಗನವಿಲೆ ಠಾಣೆಯಲ್ಲಿ ಒಂದೊಂದು ಸೇರಿ ಒಟ್ಟು ಐದು ಕೇಸಲ್ಲಿ ಭಾಗಿಯಾಗಿರುವ ಮಾಹಿತಿ ಬಂದಿದೆ. ಬಂಧಿತರಬಳಿಯಿದ್ದ 125 ಗ್ರಾಂ ಚಿನ್ನದ ಮತ್ತು 3.5 ಕೆ.ಜಿ ಬೆಳ್ಳಿಯ ವಸ್ತುಗಳು, ಸ್ಕೂಟರ್‌ ಅನ್ನು ವಶಕ್ಕೆ ಪಡೆಯಲಾಗಿದೆ ಎಂದು ವಿವರಿಸಿದರು.

ಇಬ್ಬರ ಬಂಧನ: ಮತ್ತೂಂದು ಸರಗಳ್ಳತನದಲ್ಲಿ ಭಾಗಿಯಾಗಿದ್ದ ಇಬ್ಬರು ಕಳ್ಳರನ್ನು ಬಂಧಿಸುವಲ್ಲಿಯೂ ಪೊಲೀಸರು ಯಶಸ್ವಿಯಾಗಿದ್ದು, ಕಳ್ಳರಿಂದ ಎರಡುಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣ ವಶಪಡಿಸಿ ಕೊಂಡಿದ್ದಾರೆ ಎಂದು ವಿವರಿಸಿದರು.

Advertisement

ಬಿಂಡಿಗನವಿಲೆ ಪೊಲೀಸ್‌ ಠಾಣಾ ವ್ಯಾಪ್ತಿಯ ತಾಲೂಕಿನ ಶಿಖರನಹಳ್ಳಿ ಗ್ರಾಮದ ಕವಿತಾ ಎಂಬ ಮಹಿಳೆಯು ಮೇ 28ರಂದು ನೀಡಿದ ಸರ ಕಳ್ಳತನ ಪ್ರಕರಣದ ಆಧಾರದ ಮೇಲೆ ಪೊಲೀಸರು ಪ್ರಕರಣದಾಖಲಿಸಿ ತನಿಖೆ ನಡೆಸುತ್ತಿದ್ದಾಗ, ಜು.14ರಂದು ಅದ್ದಿಹಳ್ಳಿ ಸರ್ಕಲ್‌ ಬಳಿ ಬೈಕಿನಲ್ಲಿ ಹೋಗುತ್ತಿದ್ದ ಅನುಮಾನಾಸ್ಪದವಾಗಿ ಕಾಣಿಸಿಕೊಂಡ ಬೆಳ್ಳೂರು ಪಟ್ಟಣದ ಸಯ್ಯದ್‌, ತುರುವೇಕೆರೆಯ ಯಶವಂತ ನಾಯಕ ಅವರನ್ನು ವಿಚಾರಿಸಿದಾಗ ಎರಡು ಲಕ್ಷ ರೂ. ಮೌಲ್ಯದ 70 ಗ್ರಾಂ ಚಿನ್ನದ ಸರ ಕಳ್ಳತನದ ಮಾಹಿತಿ ತಿಳಿದು ಬಂದಿದೆ.

ನಂತರ ಪೊಲೀಸರು ಎರಡೂ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿ ಗಳಿಂದ ಚಿನ್ನದ ಸರ ವಶಕ್ಕೆ ಪಡೆದು ಕೋರ್ಟ್‌ಗೆ ಹಾಜರು ಪಡಿಸಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next