ಬಂಟ್ವಾಳ: ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕಬ್ಬಿಣದ ಸೆಂಟ್ರಿಂಗ್ ಶೀಟ್ ಕಳವು ಹಾಗೂ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಅಡಿಕೆ ಕಳವು ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಇಬ್ಬರು ಆರೋಪಿಗಳು ಸಹಿತ ಕಳವಾದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಪ್ರಕರಣದಲ್ಲಿ ಆರೋಪಿಗಳಾದ ತುಂಬೆ ಗ್ರಾಮದ ಬೊಳ್ಳಾರಿ ನಿವಾಸಿ ಮೊಹಮ್ಮದ್ ಅನ್ಸಾಫ್(34) ಹಾಗೂ ಮದಕ ನಿವಾಸಿ ನವಾಜ್(24)ನನ್ನು ಬಂಧಿಸಿದ್ದಾರೆ. ಆರೋಪಿಗಳು ಬಾಳ್ತಿಲ ಗ್ರಾಮದ ಪೂರ್ಲಿಪ್ಪಾಡಿದಲ್ಲಿ ನಿರ್ಮಾಣದ ಹಂತದ ಕಟ್ಟಡದ ಬಳಿ ಫಾರೂಕ್ ಅವರ 97,900 ರೂ.ಮೌಲ್ಯದ 89 ಕಬ್ಬಿಣದ ಸೆಂಟ್ರಿಂಗ್ ಶೀಟ್‌ಗಳನ್ನು ಕಳವು ನಡೆಸಿದ್ದರು. ಪ್ರಸ್ತುತ ಆರೋಪಿಗಳಿಂದ ಕಳವಾದ ಶೀಟ್‌ಗಳ ಜತೆಗೆ ಕೃತ್ಯಕ್ಕೆ ಉಪಯೋಗಿಸಿದ ಗೂಡ್ಸ್ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ಇದೇ ಆರೋಪಿಗಳು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳವು ಮಾಡಿದ 90 ಸಾವಿರ ರೂ. ಮೌಲ್ಯದ 21 ಗೋಣಿ ಚೀಲದಲ್ಲಿದ್ದ 401 ಕೆಜಿ ಅಡಿಕೆಯನ್ನು ಕೂಡ ವಶಪಡಿಸಿಕೊಳ್ಳಲಾಗಿದೆ.
ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಅಡಿಶನಲ್ ಎಸ್‌ಪಿ ಅವರ ಮಾರ್ಗದರ್ಶನದಂತೆ ಬಂಟ್ವಾಳ ಡಿವೈಎಸ್‌ಪಿ ಪ್ರತಾಪ್ ಸಿಂಗ್ ಥೋರಾಟ್ ಹಾಗೂ ನಗರ ಇನ್ಸ್‌ಪೆಕ್ಟರ್ ವಿವೇಕಾನಂದ ಅವರ ನಿರ್ದೇಶನದಂತೆ ನಗರ ಪೊಲೀಸ್ ಠಾಣಾ ಅಪರಾಧ ಸಿಬಂದಿ ಎಎಸ್‌ಐಗಳಾದ ನಾರಾಯಣ, ಜಿನ್ನಪ್ಪ ಗೌಡ, ಎಚ್‌ಸಿಗಳಾದ ಇರ್ಷಾದ್ ಪಿ, ರಾಜೇಶ್, ಗಣೇಶ್, ಮನೋಹರ, ಪಿಸಿ ಪ್ರವೀಣ್ ಹಾಗೂ ಮೋಹನ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.