Advertisement

Channapatna: ಮೆಡಿಕಲ್ ಸ್ಟೋರ್ ಬಾಗಿಲು ಒಡೆದು ಕಳ್ಳತನ; ವಿಡಿಯೋ ವೈರಲ್

03:49 PM Oct 19, 2023 | Team Udayavani |

ರಾಮನಗರ: ಮೆಡಿಕಲ್‌ ಸ್ಟೋರ್ ಬಾಗಿಲು ಒಡೆದ ಕಳ್ಳರ ಗುಂಪು ನಗದು ಮತ್ತು ವಸ್ತುಗಳನ್ನು ದೋಚಿರುವ ಘಟನೆ ಚನ್ನಪಟ್ಟಣದಲ್ಲಿ ನಡೆದಿದೆ.

Advertisement

ಚನ್ನಪಟ್ಟಣದ ನ್ಯಾಯಾಲಯದ ಮುಂಭಾಗವಿರುವ ಭಾಸ್ಕರ್ ಮೆಡಿಕಲ್ಸ್ ನಲ್ಲಿ ಬುಧವಾರ ಮುಂಜಾನೆ ಮೂರು ಗಂಟೆಯ ಸುಮಾರಿನಲ್ಲಿ ಕಳ್ಳತನವಾಗಿದೆ.

ಎರಡು ಬೈಕ್ ನಲ್ಲಿ ನಾಲ್ಕು ಮಂದಿ ಕಳ್ಳರು ಬಂದು ಮೆಡಿಕಲ್ಸ್ ನ ಬಾಗಿಲು ಮುರಿದು ಕಳವು ಮಾಡಲಾಗಿದೆ. ಕಳ್ಳರ ಕೃತ್ಯವು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಚನ್ನಪಟ್ಟಣ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next