Advertisement

ವಿಜಯಪುರ: ಕರ್ನಾಟಕ ವಿಕಾಸ ಬ್ಯಾಂಕ್ ನಲ್ಲಿ ಕಳ್ಳತನಕ್ಕೆ ವಿಫಲ‌ ಯತ್ನ

01:54 PM Aug 06, 2021 | Team Udayavani |

ವಿಜಯಪುರ: ಜಿಲ್ಲೆಯಲ್ಲಿ ಕಳ್ಳರು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ನಲ್ಲಿ ಕಳ್ಳತನಕ್ಕೆ ವಿಫಲ ಯತ್ನ‌ನಡೆಸಿದ ಘಟನೆ ಜರುಗಿದೆ.

Advertisement

ವಿಜಯಪುರ ಜಿಲ್ಲೆಯ ಕೊಲ್ಹಾರ ಪಟ್ಟಣದಲ್ಲಿ ಶುಕ್ರವಾರ ಕೆವಿಜಿ ಬ್ಯಾಂಕ್ ಶಾಖೆ ಕಟ್ಟಡದ ಹಿಂಬದಿಯಿಂದ ಕಿಟಕಿ ಮುರಿದು ಕಳ್ಳರು ಒಳ ನುಗ್ಗಿದ್ದಾರೆ. ಬ್ಯಾಂಕ್ ಒಳಗೆ ಜಾಲಾಡಿ ಹಣ ಹಾಗೂ ಚಿನ್ನಕ್ಕಾಗಿ ತಡಕಾಡಿದರೂ ಏನೂ ಸಿಗದೇ ಕಳ್ಳರು ಕಾಲ್ಕಿತ್ತಿದ್ದಾರೆ.

ಕಳ್ಳತನ ಮಾಡುವ ತಮ್ಮ‌ ಕೃತ್ಯದ ಕುರಿತು ಯಾವ ದಾಖಲೆಯೂ ಸಿಗದಂತೆ ಬ್ಯಾಂಕ್ ಗೆ ಅಳವಡಿಸಿದ್ದ ಸೈರನ್, ಇತರೆ ಸಿಸಿ ಕೆಮೆರಾ ಹಾಳು ಮಾಡಿದ್ದಾರೆ. ಇದರ ಹೊರತಾಗಿಯೂ ಬ್ಯಾಂಕ್ ಕಳ್ಳತನಕ್ಕೆ ಯತ್ನಿಸಿದ ಕಳ್ಳರು ಓಡಾಟ ನಡೆಸಿದ ಚಲವಲನಗಳೆಲ್ಲ ಒಂದು ಸಿಸಿ ಕೆಮೆರಾದಲ್ಲಿ ಸೆರೆಯಾಗಿವೆ.

ಇದನ್ನೂ ಓದಿ:ಚುನಾವಣಾ ರಾಜಕೀಯಕ್ಕೆ ವಿದಾಯ ಘೋಷಿಸಿದ ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್

ಸ್ಥಳಕ್ಕೆ ಕೊಲ್ಹಾರ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

Advertisement

ಕೊಲ್ಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಕೆಲ ದಿನಗಳಿಂದ ಅದರಲ್ಲೂ ಪಟ್ಟಣದಲ್ಲಿ ಕಳ್ಳತನ ಪ್ರಕರಣಗಳು‌ ಹೆಚ್ಚಾಗಿವೆ. ಇತ್ತೀಚೆಗೆ ಅಂಗಡಿಗಳು, ಮನೆ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು, ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ

Advertisement

Udayavani is now on Telegram. Click here to join our channel and stay updated with the latest news.

Next