Advertisement

ಬಂಟ್ವಾಳ ನೇಲ್ಯಪಲ್ಕೆ: ಚಿನ್ನಾಭರಣ ಕಳವು

10:45 AM Jan 31, 2021 | Team Udayavani |

ಬಂಟ್ವಾಳ: ಮನೆಯೊಂದಕ್ಕೆ ನುಗ್ಗಿದ ಕಳ್ಳರು ಚಿನ್ನಾಭರಣ ಕಳವು ಮಾಡಿದ ಘಟನೆ ನಡೆದ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಣಿನಾಲ್ಕೂರು ಗ್ರಾಮದ ನೇಲ್ಯಪಲ್ಕೆಯಲ್ಲಿ ರವಿವಾರ ಬೆಳಗ್ಗೆ ಬೆಳಕಿಗೆ ಬಂದಿದೆ.

Advertisement

ನೇಲ್ಯಪಲ್ಕೆ ನಿವಾಸಿ ಖಾದರ್ ಎನ್ನುವವರ ಮನೆಯಲ್ಲಿ ಕಳತನ ನಡೆದಿದ್ದು, ಸುಮಾರು 22 ಪವನ್ ಚಿನ್ನಾಭರಣ ಕಳವು ನಡೆದಿರುವ ಕುರಿತು ಅಂದಾಜಿಸಲಾಗಿದೆ.

ಇದನ್ನೂ ಓದಿ:ನುಕ್ಯಾಡಿ ಉದ್ಭವ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ಸಚಿವ ಈಶ್ವರಪ್ಪ ಭೇಟಿ

ಕಳ್ಳತನ ನಡೆಯುವ ವೇಳೆ ಮನೆಯ ಸಿಸಿ ಕ್ಯಾಮರಾ ಚಾಲನೆಯಲ್ಲಿರಲಿಲ್ಲ. ಹಿಂಬಾಗಿಲನ್ನು ತೆರೆದು ಒಳನುಗ್ಗಲಾಗಿದೆ. ಘಟನೆ ಕುತೂಹಲ ಸೃಷ್ಟಿಸಿದೆ.

ಘಟನಾ ಸ್ಥಳಕ್ಕೆ ಪೊಲೀಸರು, ಬೆರಳಚ್ಚು ತಜ್ಞರು, ಶ್ವಾನ ದಳದವರು ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next